ಚೀನಾ ಅಧ್ಯಕ್ಷರ ಭೇಟಿಗೆ ಸಜ್ಜಾದ ಕಿಮ್ ಜಾಂಗ್ ಉನ್

ಪ್ಯೊಂಗ್ಯಾಂಗ್: ಕಿಮ್ ಜಾಂಗ್ ಉನ್ ಚೀನಾ ಅಧ್ಯಕ್ಷ ಶಿ ಜಿನ್​​ಪಿಂಗ್ ಅವರನ್ನು ಭೇಟಿಯಾಗಲು ಮುಂದಾಗಿದ್ದಾರೆ. ಸಿಂಗಪುರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐತಿಹಾಸಿಕ ಭೇಟಿಯ ನಂತರ, ಕಿಮ್ ಮೂರನೇ ಬಾರಿ ಚೀನಾ ಅಧ್ಯಕ್ಷರ ಭೇಟಿಗೆ ಸಿದ್ಧತೆ ನಡೆಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ದಕ್ಷಿಣ ಕೊರಿಯಾ ಅಧ್ಯಕ್ಷರ ಕಚೇರಿ ಸಿಬ್ಬಂದಿ ಚಿಯಾಂಗ್ ವಾ ಡೆ, ಬೀಜಿಂಗ್ ಮತ್ತು ಪ್ಯೊಂಗ್ಯಾಂಗ್ ನಡುವೆ ನಡೆಯುತ್ತಿರುವ ಬೆಳವಣಿಗಳ ಕುರಿತು ದಕ್ಷಿಣ ಕೊರಿಯಾ ಸರ್ಕಾರಕ್ಕೆ ಅರಿವಿದೆ ಎಂದಿದ್ದಾರೆ.

ಮೇ 8ರಂದು ಚೀನಾದ ಬಂದರು ನಗರಿ ದಲಿಯಾನ್​​ನಲ್ಲಿ, ಏಪ್ರಿಲ್ 27ರಂದು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇಯವರೊಡನೆ ಮತ್ತು ಜೂನ್ 12ರಂದು ಸಿಂಗಪುರದಲ್ಲಿ ಚೀನಾ ಅಧ್ಯಕ್ಷರನ್ನು ಕಿಮ್ ಭೇಟಿಯಾಗಿದ್ದರು.

ಕಳೆದ ಜೂನ್ 12ರಂದು ಜಂಟಿ ಒಪ್ಪಂದಗಳಿಗೆ ಕಿಮ್ ಮತ್ತು ಟ್ರಂಪ್ ಸಹಿ ಹಾಕಿದ್ದು, ಕೊರಿಯಾದ ಪೆನಿನ್ಸುಲಾದಲ್ಲಿ ಸಂಪೂರ್ಣ ನಿಃಶ್ಶಸ್ತ್ರೀಕರಣಕ್ಕೆ ಸಹಿ ಹಾಕಲಾಗಿತ್ತು. ಈ ವೇಳೆ ಉತ್ತರ ಕೊರಿಯಾಗೆ ಭದ್ರತೆಯ ಭರವಸೆಯನ್ನು ಟ್ರಂಪ್ ನೀಡಿದ್ದರು. ಈ ಭೇಟಿ ವೇಳೆ, ಕೊರಿಯಾದ ಪೆನಿನ್ಸುಲಾದಲ್ಲಿ ಶಾಂತಿ ಸ್ಥಾಪನೆಗೆ ಹೊಸ ಯತ್ನಗಳಿಗೆ ಚಾಲನೆ ನೀಡಲು ನಿರ್ಧರಿಸಲಾಗಿತ್ತು. 1950 – 53ರ ಕೊರಿಯಾ ಯುದ್ಧ ಕೈದಿಗಳ ಕುರಿತು ಕೂಡ ಈ ವೇಳೆ ಚರ್ಚಿಸಲಾಗಿತ್ತು.

0

Leave a Reply

Your email address will not be published. Required fields are marked *