ಮಹಾರಾಷ್ಟ್ರದಲ್ಲಿ ಪಟಾಕಿ ನಿಷೇಧ ಇಲ್ಲ: ಮಹಾರಾಷ್ಟ್ರ ಪರಿಸರ ಸಚಿವ

ಮುಂಬೈ: ಮಹಾರಾಷ್ಟ್ರದಲ್ಲಿ ಪಟಾಕಿ ನಿಷೇಧಿಸುವುದಿಲ್ಲ ಎಂದು ಪರಿಸರ ಸಚಿವ ರಾಮ್​​ದಾಸ್ ಕದಂ ಹೇಳಿದ್ದಾರೆ. ನಿಷೇಧಿಸುವ ಕುರಿತು ಯಾವುದೇ ಆಜ್ಞೆ ಹೊರಡಿಸುವುದಿಲ್ಲ. ಆದರೆ, ಮಾಲಿನ್ಯ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಕೂಡ ಅವರು ಅಭಿಪ್ರಾಯಪಟ್ಟರು. ಪಟಾಕಿ ಮಾರಾಟಗಾರರೊಂದಿಗೆ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ಸಭೆ ನಡೆಸಿದ ಬಳಿಕೆ ಈ ಹೇಳಿಕೆ ನೀಡಿದರು.

ಪಟಾಕಿ ನಿಷೇಧಿಸುವುದು ಹಿಂದೂ ಹಬ್ಬಗಳಿಗೆ ಅನ್ಯಾಯವೆಸಗಿದಂತೆ ಮತ್ತು ಸಂಪೂರ್ಣವಾಗಿ ಪಟಾಕಿ ಬಳಕೆ ನಿಷೇಧಿಸುವ ಬದಲಾಗಿ, ಅವುಗಳ ಬಳಕೆಯನ್ನು ನಿಯಂತ್ರಿಸಬೇಕು ಎಂದರು. ಅಲ್ಲದೇ, ಪಟಾಕಿ ಸಿಡಿಸದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ಕಡಿಮೆ ಪ್ರಮಾಣದ ಮಾಲಿನ್ಯ ಉಂಟಾಗುವಂತೆ ಅರಿವು ಮೂಡಿಸಲಾಗುತ್ತಿದೆ ಎಂದರು.

ನಿನ್ನೆ ಅವರು ಪಟಾಕಿ ಮುಕ್ತ ದೀಪಾವಳಿ ಆಚರಿಸುವಂತೆ ರಾಜ್ಯದ ಜನತೆಗೆ ಮನವಿ ಮಾಡಿಕೊಂಡಿದ್ದರು. ಆದರೆ, ಇಂದು ಅವರು ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ. ಅಕ್ಟೋಬರ್ 9ರಂದು ದೆಹಲಿಯಲ್ಲಿ ಪಟಾಕಿ ಮಾರಾಟವನ್ನು ಸುಪ್ರೀಂ ಕೋರ್ಟ್ ನಿಷೇಧ ಹೇರಿತ್ತು.

0

Leave a Reply

Your email address will not be published. Required fields are marked *