ನಿತೀಶ್ ಕುಮಾರ್ ಶ್ಲಾಘಿಸಿದ ಮೋದಿ

ಸಾಮಾಜಿಕವಾಗಿ ಬದಲಾವಣೆ ತರೋದು ಸವಾಲಿನ ಕೆಲಸ. ಇಂಥ ಸಂದರ್ಭದಲ್ಲಿ ಪಾನ ನಿಷೇಧವನ್ನು ಜಾರಿಗೆ ತರುವಂತಹ ಗಮನಾರ್ಹ ಪ್ರಯತ್ನದಲ್ಲಿ ನಿತೀಶ್ ಕುಮಾರ್ ಯಶಸ್ವಿಯಾಗಿದ್ದಾರೆ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ರು. ಜೊತೆಗೆ ಈ ಕ್ರಮಕ್ಕೆ ಎಲ್ಲ ನಾಗರಿಕರು ಸಹಕರಿಸುವಂತೆ ಮನವಿಯನ್ನು ಕೂಡ ಮಾಡಿದ್ರು. ಗುರು ಗೋವಿಂದ ಸಿಂಗ್ ಅವ್ರ 350ನೇ ಜನ್ಮ ದಿನಾಚರಣೆ ಪ್ರಯುಕ್ತ, ಬಿಹಾರದಲ್ಲಿ ಆಯೋಜಿಸಲಾಗಿದ್ದ ಪ್ರಕಾಶ್ ಪರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಭಾಗವಹಿಸಿದ್ರು. ಕಳೆದ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವ್ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ ನಿರ್ಣಯವನ್ನು ವಿರೋಧಿಸಿ, ಬಿಜೆಪಿಯೊಂದಿಗಿನ 18 ವರ್ಷಗಳ ಮೈತ್ರಿಯನ್ನು ನಿತೀಶ್ ಮುರಿದುಕೊಂಡಿದ್ರು. ಆದ್ರೆ, ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧವನ್ನು ಇದೇ ನಿತೀಶ್ ಬೆಂಬಲಿಸಿದ್ರು. ಇದೀಗ ನರೇಂದ್ರ ಮೋದಿಯವ್ರು ನಿತೀಶ್ ಅವ್ರನ್ನು ಹೊಗಳಿದ್ದಾರೆ. =====

0

Leave a Reply

Your email address will not be published. Required fields are marked *