ಕುರುಕ್ಷೇತ್ರದಲ್ಲಿ ಅಭಿಮನ್ಯುವಾಗಿ ನಿಖಿಲ್​​..

ನಿಖಿಲ್​ ಕುಮಾರ್​​ ಸ್ವಾಮಿ, ಜಾಗ್ವಾರ್​​ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಅಡಿ ಇಟ್ಟ ಮತ್ತೊಬ್ಬ ಪ್ರಭಾವಿ ರಾಜಕಾರಣಿ ಕುಮಾರ ಸ್ವಾಮಿ ಅವರ ಪುತ್ರ. ಮೊದಲ ಸಿನಿಮಾದಲ್ಲೆ ತಕ್ಕ ಮಟ್ಟಿಗೆ ಗುರುತಿಸಿಕೊಂಡು ಭರವಸೆಯ ನಟನಾಗಿ ಬೆಳಿತಿದ್ದ ಈ ಜಾಗ್ವರ್​​ಗೆ ಸದ್ಯದ ಸಿನಿಮಾದ ಆಫರ್​ಗಳು ಹೆಚ್ಚಾಗಿವೆ.

ನಿಖಿಲ್​​ ತನ್ನ ಅಭಿನಯ ಕೌಶಲ್ಯವನ್ನ ಜಾಗ್ವರ್​ ಮೂಲಕ ಸಿನಿಮಾ ರಂಗಕ್ಕೆ ತೋರಿಸಿದ್ದಾರೆ. ಹೀಗಾಗೆ ಕನ್ನಡದ ಪ್ರತಿಷ್ಠಿತಿ ಸಿನಿಮಾವಾದ ಕುರುಕ್ಷೇತ್ರದಲ್ಲಿ ಅವಕಾಶ ಸಿಕ್ಕಿದೆ. ದರ್ಶನ್​​ ಕುರುಕ್ಷೇತ್ರದಲ್ಲಿ ಅಭಿಮನ್ಯು ಪಾತ್ರದಲ್ಲಿ ನಿಖಿಲ್​ ಕಾಣಿಸಿಕೊಳ್ತಿದ್ದಾರೆ.

ಈ ನಡುವೆ ಈ ನಟ ತನ್ನ ಮತ್ತಷ್ಟು ಸಿನಿಮಾಗಳನ್ನ ಫೈನಲ್​​ ಮಾಡಿದ್ದಾರೆ. ಅದರಲ್ಲಿ ಒಂದು ಕೆಂಪೇಗೌಡ ಸಿನಿಮಾ. ಇದು ಬೆಂಗಳೂರನ್ನ ಕಟ್ಟಿ ಬೆಳಸಿದ ನಾಡ ಪ್ರಭು ಕೆಂಪೇಗೌಡ ಅವರ ಜೀವನಾಧಾರಿತ ಚಿತ್ರವಾಗಿರಲಿದೆ. ಅಂದಹಾಗೆ ಈ ಸಿನಿಮಾಗೆ ಹರ್ಷ ಆಕ್ಷನ್​ ಕಟ್​​ ಹೇಳಲಿದ್ದಾರಂತೆ.

ಸದ್ಯ ಪೌರಾಣಿಕ ಪಾತ್ರವನ್ನ ಪೋಷಿಸುತ್ತಿರೋ ನಿಖಿಲ್​ ಇದಾದ ಬಳಿಕ ಐತಿಹಾಸಕ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಅನ್ನೋ ಮಾಹಿತಿ ಇದೆ. ಮತ್ತೊಂದೆಡೆ ಹರ್ಷ ಜೊತೆಗೆ ಇದೆ ನಾಡ ಪ್ರಭು ಕೆಂಪೇಗೌಡ ಅವರ ಡ್ರಾಮ ಒಂದಕ್ಕೆ ಬಣ್ಣ ಹಚ್ಚಲಿದ್ದಾರೆ ನಿಖಿಲ್​. ಈಗ ಇದೇ ಡ್ರಾಮವನ್ನ ಸಿನಿಮಾ ಮಾಡೋ ಪ್ಲಾನ್​​ ಹರ್ಷ ಅವರದ್ದು ಅನ್ನೋ ಮಾತುಗಳೂ ಇವೆ.

ಸದ್ಯಕ್ಕೆ ಹರ್ಷ ಕಮರ್ಷಿಯಲ್​​ ಸಿನಿಮಾ ಮಾಡ್ತಾರಾ..? ಅಥವಾ ನಾಡ ಪ್ರಭು ಕೆಂಪೇಗೌಡ ಅವರ ಜೀವನವನ್ನ ಸಿನಿಮಾ ಮಾಡ್ತಾರ ಕಾದು ನೋಡ್ಬೇಕು. ಇನ್ನೂ ನಿರ್ದೇಶಕರಾದ ಹರ್ಷ ಪವರ್​ಸ್ಟಾರ್​ ಪುನೀತ್​​ ರಾಜ್​ಕುಮಾರ್​​ ಜೊತೆಗೆ ಅಂಜನಿ ಪುತ್ರ ಸಿನಿಮಾವನ್ನ ಮಾಡಿ ಮುಗಿಸಿದ್ದಾರೆ. ಈ ಚಿತ್ರ ಕೂಡ ಸದ್ಯದಲ್ಲೇ ತೆರೆಗೆ ಬರಲಿದೆ.

ಫಿಲ್ಮ್ ಬ್ಯೂರೋ, ಸುದ್ದಿ ಟವಿ.

0

Leave a Reply

Your email address will not be published. Required fields are marked *