ಮೆಟ್ರೋ ಬೈಕ್ ಫಾರ್ ರೆಂಟ್….

ಮೆಟ್ರೋ ಸಿಟಿ ಬೆಂಗಳೂರು ಟ್ರಾಫಿಕ್​ ಸಿಟಿಯಾಗಿ ಬಹಳ ವರ್ಷಗಳೇ ಕಳೆದಿವೆ.. ಟ್ರಾಫಿಕ್​​ ಸಮಸ್ಯೆಗೆ ಸಂಪೂರ್ಣ ಮುಕ್ತಿ ಕೊಡೊಲು ಆಗದೇ ಆಗಾಗ ಪರ್ಯಾಯ ವ್ಯವಸ್ಥೆ ಬರುತ್ತಲೇ ಇರುತ್ತೆ… ಈ ಹಿಂದೆ ಮೆಟ್ರೋಗೆ ತಂದಿದ್ದ ಬೈಕ್​ ವ್ಯವಸ್ಥೆ ಈಗ ಬಿಎಂಟಿಸಿಯಲ್ಲೂ ಜಾರಿ ಆಗ್ತಿದೆ.. ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಓಡಾಡೋದೇ ಒಂದು ದೊಡ್ಡ ತಲೆನೋವು. ಮೆಟ್ರೋ ಬಂದಮೇಲೆ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ ಅಂತ ಜನರು ಖುಷಿ ಪಟ್ಟಿದ್ದರು. ಈ ನಿರೀಕ್ಷೆ ಒಂದು ಹಂತಕ್ಕೆ ಈಡೇರಿತಾದ್ರು ಮೆಟ್ರೋ ನಿಲ್ದಾಣದಿಂದ ಇಳಿದ ಬಳಿಕ ಮುಂದೇನು ಅನ್ನೋ ಸಮಸ್ಯೆ ಶುರುವಾಗಿತ್ತು. ಯಾಕಂದ್ರೆ ಮೆಟ್ರೋ ನಿಲ್ದಾಣದಿಂದ ಆಟೋ ಪ್ರಯಾಣ ದುಬಾರಿಯಾದ್ರೆ, ಬಿಎಂಟಿಸಿಗಾಗಿ ಕಾಯುವ ತಾಳ್ಮೆ ಜನರಿಲ್ಲ. ಈ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಹುಟ್ಟಿಕೊಂಡದ್ದೇ ಮೆಟ್ರೋ ಬೈಕ್ ಫಾರ್ ರೆಂಟ್. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಮೆಟ್ರೋ ನಿಲ್ದಾಣದಲ್ಲಿ ಮಾತ್ರವಲ್ಲದೇ ಬಿಎಂಟಿಸಿ ನಿಲ್ದಾಣ, ನಿಲುಗಡೆ, ಟಿಟಿಎಂಸಿಗಳಲ್ಲಿ ಬೈಕ್​ ಮತ್ತು ಸೈಕಲ್​​ ಸೇವೆ ನೀಡಲು ಮುಂದಾಗಿದೆ… ಇಂದು ಇದ್ರ ಉದ್ಘಾಟನೆಯನ್ನ ಸಚಿವ ರೇವಣ್ಣ ಶಾಂತಿನಗರದಲ್ಲಿ ನೆರವೇರಿಸಿದ್ದರು.. ಇವ್ರಿಗೆ ಬಿಎಂಟಿಸಿಯ ಅಧಿಕಾರಿಗಳು, ಅಧ್ಯಕ್ಷರು ಸಾಥ್​ ನೀಡಿದ್ದರು..

ಪ್ರತಿ ಕಿಲೋಮೀಟರ್ ಗೆ 5 ರೂ.ನಂತೆ ದರ ನಿಗದಿ ಮಾಡಿದ್ದು, ನಂತ್ರ ನಿಮಿಷಕ್ಕೆ 50 ಪೈಸೆ ನಿಗಧಿ ಮಾಡಲಾಗಿದೆ.. ಮೊಬೈಲ್​ ಆಪ್​ ಮೂಲಕ ಬಳಸಬಹುದಾದ ಈ ಸೇವೆಯನ್ನ ಒಟಿಪಿ ಎಂಟರ್​​ ಮಾಡಿ ಬೈಕ್​ ಸವಾರಿ ಮಾಡಬಹುದು.. ಈಗಾಗಲೇ ಸಿಟಿಯ 36 ಮೆಟ್ರೋ ರೈಲು ನಿಲ್ದಾಣದಲ್ಲಿ ಬೈಕ್​ ಸೇವೆ ಆರಂಭಿಸಲಾಗಿದೆ.. ಹತ್ತಿರದ ಬಸ್​​ ನಿಲ್ದಾಣಗಳಿಂದ ಪ್ರಯಾಣಿಕರನ್ನ ಮನೆಬಾಗಿಲಿಗೆ ತಲುಪಿಸೋ ನಿಟ್ಟಿನಲ್ಲಿ 2ನೇ ಹಂತದ ಸಾರಿಗೆ ವ್ಯವಸ್ಥೆ ಜಾರಿಗೊಳಿಸಿದೆ.. ಕೇವಲ ಬೈಕ್​ ಮಾತ್ರವಲ್ಲದೇ ಸೈಕಲ್​ ಕೂಡ ಲಭ್ಯವಿದೆ.. ಇದಕ್ಕೆ ಜಿಪಿಎಸ್​ ಅಳವಿಡಿಸಲಾಗಿದೆ..ಒಟ್ಟಿನ್ನಲ್ಲಿ ಬಿಎಂಟಿಸಿ ಯೂ ಹೊಸದಾಗಿ ಬಿಎಂಟಿಸಿ ಪ್ಲಸ್​​ ಸೇವೆ ಆರಂಭಿಸಿದೆ.. ಆದ್ರೆ ಇದು ಎಷ್ಟರ ಮಟ್ಟಿಗೆ ಜನ ಇದ್ರ ಸದುಪಯೋಗ ಪಡಿಸಿಕೊಳ್ಳ್ತಾರೆ ಅನ್ನೋದನ್ನ ಕಾದುನೋಡಬೇಕು…

ದೀಪಾ ಎಸ್​ ಸುದ್ದಿಟಿವಿ ಬೆಂಗಳೂರು.

0

Leave a Reply

Your email address will not be published. Required fields are marked *