ಹೈಕೋರ್ಟ್‌ನಿಂದ ನಲಪಾಡ್ ಜಾಮೀನು ಅರ್ಜಿ ತೀರ್ಪು

ವಿದ್ವತ್ ಮೇಲೆ ಹಲ್ಲೆ ಮಾಡಿ ಜೈಲು ಸೇರಿರುವ ಶಾಸಕ ಎನ್ ಎ ಹ್ಯಾರೀಸ್ ಮಗ ಮಹಮದ್ ನಲಪಾಡ್ ಗೆ ಜೈಲೇ ಖಾತ್ರಿಯೋ ಅಥವಾ ಬೇಲ್ ಸಿಗುತ್ತೋ ಎಂಬುದು ಇಂದು ನಿರ್ಧಾರವಾಗಲಿದೆ…. ಹೈಕೋರ್ಟ್ ನಲ್ಲಿ ಜಾಮೀನಿಗಾಗಿ ಅರ್ಜಿ ಹಾಕಿದ್ದ ನಲಪಾಡ್ ಮತ್ತು ಸಹಚರರ ಅರ್ಜಿ ವಿಚಾರಣೆ ಪೂರ್ಣವಾಗಿದ್ದು ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಲಾಗಿತ್ತು…ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ನಲಪಾಡ್ ಮತ್ತು ಸಹಚರರ ಪರವಾಗಿ ಖ್ಯಾತ ವಕೀಲ ಸಿವಿ ನಾಗೇಶ್ ವಾದವನ್ನು ಮಂಡಿಸಿಸದ್ದರು.. ವಿದ್ವತ್ ಪರವಾಗಿ ಸರ್ಕಾರಿ ವಕೀಲರಾದ ಶ್ಯಾಂ ಸುಂದರ್ ವಾದ ಮಂಡಿಸಿ ಜಾಮೀನು ನೀಡದಂತೆ ಮನವಿ ಮಾಡಿದ್ರು.. ಇಂದು ಹೈಕೋರ್ಟ್‌ನಲ್ಲಿ ಜಾಮೀನು ದೊರೆಯದಿದ್ದರೆ ಸುಪ್ರೀಂಕೋರ್ಟ್ ಮೊರೆಹೋಗುವ ಸಾಧ್ಯತೆ ಇದೆ.

0

Leave a Reply

Your email address will not be published. Required fields are marked *