ಪ್ರತ್ಯೇಕ ನಾಡ ಧ್ವಜಕ್ಕೆ ಸಂತಸ ವ್ಯಕ್ತ ಪಡಿಸಿದ ಯದುವೀರ್​…

ನಾಡ ಧ್ವಜವನ್ನ ನೋಡಿ ತುಂಬಾ ಖುಷಿಯಾಯಿತು. ಮೈಸೂರು ರಾಜರ ಲಾಂಛನವನ್ನ ನಾಡಧ್ವಜದಲ್ಲಿ ಹಾಕಿರುವುದರಿಂದ ಮೈಸೂರು ರಾಜ ವಂಶಕ್ಕೆ ಗೌರವ ಸಿಕ್ಕಿಂತಾಗಿದೆ ಎಂದು ಯದೂವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ನಾಡಧ್ವಕ್ಕೆ ತಮ್ಮ ಬೆಂಬಲವನ್ನ ಸೂಚಿಸಿದ್ದಾರೆ. ಮೈಸೂರಲ್ಲಿ ಮಾತನಾಡಿದ ಯದುವೀರ್ , ರಾಜ್ಯ ಸರ್ಕಾರ ರಾಜ್ಯಕ್ಕೆ ಪ್ರತ್ಯೇಕ ನಾಡ ಧ್ವಜ ತಂದಿರುವುದು ಸಂತೋಷವಾಗಿದೆ. ನಾಡ ಧ್ವಜವನ್ನ ನೋಡಿ ತುಂಬಾ ಖುಷಿಯಾಯಿತು. ಮೈಸೂರು ರಾಜರ ಲಾಂಛನವನ್ನ ನಾಡಧ್ವಜದಲ್ಲಿ ಹಾಕಿರುವುದರಿಂದ ಮೈಸೂರು ರಾಜ ವಂಶಕ್ಕೆ ಗೌರವ ಸಿಕ್ಕಿಂತಾಗಿದೆ. ಸ್ವತಂತ್ರ ಬರುವುದಕ್ಕೂ ಮುನ್ನ ಕನ್ನಡ ಭಾವುಟದಲ್ಲಿ ಚಾಮುಂಡೇಶ್ವರಿಯ ಲಾಂಛನವನ್ನ ಹಾಕಲಾಗಿತ್ತು. ನಂತರದ ದಿನಗಳಲ್ಲಿ ಸಿಂಹದ ಲಾಂಛವನ್ನ ಹಾಕಿದರು. ಪ್ರತ್ಯೇಕ ನಾಡಧ್ವಜದ ವಿಚಾರದಲ್ಲಿ ರಾಜ್ಯ ಸರ್ಕಾರ ಏನು ತೀರ್ಮಾನ ಕೈಗೊಳ್ಳುತದ್ದೇಯೋ ಅದನ್ನು ನಾವು ಸ್ವೀಕರಿಸಬೇಕೆಂದು ಹೇಳುವ ಮೂಲಕ ಕನ್ನಡ ಪರ ಸಂಘಟನೆಗಳಿಗೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶವನ್ನ ರವಾನಿಸಿದರು.

0

Leave a Reply

Your email address will not be published. Required fields are marked *