ಅರಮನೆ ನಗರಿಯಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವ

ಅರಮನೆ ನಗರಿಯಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದ್ದು, ನವರಾತ್ರಿಯ ಎರಡನೇ ದಿನವಾದ ಇಂದು ರಂಗೋಲಿ ರಂಗು ಪಡೆದುಕೊಂಡಿದೆ. ಅರಮನೆ ಮುಂಭಾಗ ಇಂದು ರಂಗೋಲಿ ಸ್ಪರ್ಧೆ ಆಯೋಜಿಸಿದ್ದು, ಮಂಜು ಮುಸುಕಿದ ಮೈದಾನದಲ್ಲಿ ವನಿತೆಯರು ಬಣ್ಣಬಣ್ಣದ ಚಿತ್ತಾರ ಬಿಡಿಸಿದ್ದಾರೆ. ಈ ಮಧ್ಯೆ, ರಂಗೋಲಿ ಸ್ಪರ್ಧೆಯಲ್ಲಿ ವಿಶೇಷ ಚೇತನ ಮಕ್ಕಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಈ ಮಧ್ಯೆ, ಮಹಿಳಾ ದಸರಾ ಉದ್ಘಾಟಿಸಿ ಮಾತನಾಡಿದ ಕನ್ನಡ ಸಂಸ್ಕೃತಿ ಮತ್ತು ಮಹಿಳಾ‌ ಮತ್ತು‌ ಮಕ್ಕಳ ಕಲ್ಯಾಣ ಸಚಿವೆ ಜಯಮಾಲ ಮಹಿಳಾ ದಸರಾ ಉದ್ಘಾಟಿಸಿದ್ದು ಖುಷಿ ತಂದಿದೆ ಎಂದ್ರು. ಇನ್ನು ಇದೇ ವೇಳೆ, ಪಾರಂಪರಿಕ ನಡಿಗೆಗೂ ಚಾಲನೆ ನೀಡಲಾಯ್ತು, ಸಿಲ್ಕ್ ಪಂಚೆ ಹಾಗೂ ಶರ್ಟ್ ನಲ್ಲಿ ಮಿಂಚಿದ ಸಚಿವ ಸಾ.ರಾ.ಮಹೇಶ್ ಪಾರಂಪರಿಕ ನಡಿಗೆಗೆ ಪುರಭವನದ ಬಳಿ ಚಾಲನೆ ಕೊಟ್ಟರು. ಕೆ.ಆರ್.ವೃತ್ತ, ಕೆ.ಆರ್.ಆಸ್ಪತ್ರೆ ಸೇರಿದಂತೆ ಪ್ರಮುಖ ಪಾರಂಪರಿಕ ಕಟ್ಟಡಗಳ‌ ಮಾರ್ಗದಲ್ಲಿ ಪಾರಂಪರಿಕ ನಡಿಗೆ ಸಾಗಿದ್ದು, ಪ್ರವಾಸಿಗರಿಗೆ ಮೈಸೂರಿನ ಪರಂಪರೆಯ ಬಗ್ಗೆ ಮಾಹಿತಿ ನೀಡಿತು.

ಶ್ವ ವಿಖ್ಯಾತ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ, ಸಂಗ್ರಹಾಲಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಪಾರಂಪರಿಕ ಉಡುಗೆಯಲ್ಲಿ ಪಾರಂಪರಿಕ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಗರದ ಪುರಭವನದ ಮುಂಭಾಗ ಪ್ರವಾಸೋದ್ಯಮ ಸಚಿವ ಸಾ.ರಾ‌.ಮಹೇಶ್ ಬಿಳಿ ಶರ್ಟ್ ಪಂಚೆ ಮೈಸೂರು ತೊಟ್ಟು ಪಾರಂಪರಿಕ ಉಡುಗೆಯಲ್ಲಿ ಹಸಿರು ನಿಶಾನೆ ಮೂಲಕ ಪಾರಂಪರಿಕ ಉಡುಗೆಯ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದರು.  ಪ್ರವಾಸಿಗರಿಗೆ ಮೈಸೂರಿನ‌ ಪರಂಪರೆಯ ಬಗ್ಗೆ ಮಾಹಿತಿ ನೀಡಲು ಶಾರದ ವಿಲಾಸ ಶಿಕ್ಷಣ ಮಹಾ ವಿದ್ಯಾಲಯ, ಸಿದ್ಧಾರ್ಥನಗರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತರಬೇತಿ ಶಿಕ್ಷಕ ಶಿಕ್ಷಕಿಯರು, ವೃದ್ದರು ಪಾಲ್ಗೊಂಡು ಮಾಹಿತಿ ನೀಡಿದ್ರು. ಇನ್ನು ಪಾರಂಪರಿಕ ನಡಿಗೆಯಲ್ಲಿ ಪುರುಷರು ಮೈಸೂರು ಪೇಟ, ಸಿಲ್ಕ್ ಪಂಚೆ ಶರ್ಟ್ ಧರಿಸಿದ್ರೆ ಮಹಿಳೆಯರು ವಿವಿಧ ಬಣ್ಣದ ಸೀರೆಯನ್ನುಟ್ಟು ಮೈಸೂರಿನ ಪಾರಂಪರಿಕ ಕಟ್ಟಡಗಳ‌ ಮಾರ್ಗದಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರು.

0

Leave a Reply

Your email address will not be published. Required fields are marked *