ಗಾಂಧೀಗಿರಿ ಹೋರಾಟಕ್ಕೆ ಬೆಚ್ಚಿದ ಪಾಲಿಕೆ ಅಧಿಕಾರಿಗಳು

ತುಮಕೂರು: ನಗರದ ಅಶೋಕ ರಸ್ತೆ ಸಾವಿನ ಗುಂಡಿಗಳ ರಸ್ತೆಗಳಾಗಿ ಮಾರ್ಪಟ್ಟಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡ್ತಾ ಇದ್ದರೂ ಅದ್ಯಾಕೋ ಮಹಾನಗರ ಪಾಲಿಕೆ ಅಧಿಕಾರಿಗಳು ಇದನ್ನ ಸರಿಪಡಿಸೋ ಮನಸ್ಸು ಮಾಡುತ್ತಿಲ್ಲ. ಇದೇ ಮಾರ್ಗದಲ್ಲಿ ಬರ್ತಾ ಇದ್ದ ವಿಶ್ವ ಮಾನವ ಹಕ್ಕು ಸೇವಾ ಕೇಂದ್ರದ ಸಂಸ್ಥಾಪಕರಾದ ಅಧ್ಯಕ್ಷ ಸಿದ್ಧಲಿಂಗೇಗೌಡ ತನ್ನ ಕಣ್ಣೆದುರೇ ನಡೆದ ಅಪಘಾತದಿಂದ ಎಚ್ಚೆತ್ತು ದಿಢೀರ್ ಅಂತಾ ರಸ್ತೆಯ ಗುಂಡಿ ಮಧ್ಯೆ ಗಾಂಧಿಗಿರಿ ಮೂಲಕ ಪ್ರತಿಭಟನೆಗೆ ಇಳಿದರು. ಅಲ್ಲದೆ ಇದ್ದ ಆಟೋ ಚಾಲಕರು ಹಾಗೂ ಸಾರ್ವಜನಿಕರು ಅವರಿಗೆ ಸಾಥ್ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಅವರನ್ನ ತೆರವುಗೊಳಿಸಲು ಮುಂದಾದರೂ ಸಾರ್ವಜನಿಕರ ಆಕ್ರೋಶ ಹೆಚ್ಚಾದಂತೆ ಸುಮ್ಮನಾದರು. ಅಲ್ಲದೆ ಪಾಲಿಕೆ ಅಧಿಕಾರಿಗಳು ಗುಂಡಿ ಬಿದ್ದ ಸ್ಥಳಕ್ಕೆ ಮಣ್ಣು ಹಾಕಿ ಜೆಸಿಬಿ ಮೂಲಕ ಸಮತಟ್ಟು ಮಾಡಿದರು. ಇದರಿಂದ ತಾತ್ಕಾಲಿಕವಾಗಿ ಗಾಂಧಿಗಿರಿ ಕೈ ಬಿಟ್ಟ ಸಿದ್ಧಲಿಂಗೇಗೌಡ ಸಂಪೂರ್ಣ ರಸ್ತೆ ಗುಂಡಿಗಳು ಮುಚ್ಚದಿದ್ದರೆ ಹೋರಾಟದ ಎಚ್ಚರಿಕೆಯನ್ನೂ ನೀಡಿದರು.

0

Leave a Reply

Your email address will not be published. Required fields are marked *