ಬಾಯಿಹುಣ್ಣು ಹೋಗಿಸಲು ಇದನ್ನ ಮಾಡಿ..

ನಮ್ಮ ದೇಹವೇ ನಮಗೆ ದೊಡ್ಡ ಆಸ್ತಿ ಇದ್ದಂತೆ. ಕ್ಷಣ ಕ್ಷಣಕ್ಕೂ ಬದಲಾಗುವ ಈ ವಾತಾವರಣದಲ್ಲಿ ನಾವು ಎಲ್ಲ ಕಾಲಗಳಲ್ಲಿಯೂ ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ರಸ್ತೆ ಅಕ್ಕ-ಪಕ್ಕದಲ್ಲಿನ ತಿಂಡಿ ತಿನಿಸು, ಜಾಸ್ತಿ ಎಣ್ಣೆ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಸಾಮಾನ್ಯವಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಜಾಸ್ತಿ ಕಾಣಿಸಿಕೊಳ್ಳುತ್ತವೆ. ಇದರಿಂದ ಅನೇಕ ರೋಗಗಳನ್ನು ಎದುರಿಸಬೇಕಾಗುತ್ತದೆ.

ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆಗಳಲ್ಲಿ ಬಾಯಿಹುಣ್ಣು ಕೂಡ ಒಂದು. ನೋಡುವವರಿಗೆ ಕಾಣದ, ಆದರೆ ಅನುಭವಿಸುವವರಿಗೆ ಚಿತ್ರಹಿಂಸೆ ನೀಡುವ ಸಮಸ್ಯೆ ಇದು. ಸರಿಯಾಗಿ ತಿನ್ನಲೂ ಸಾಧ್ಯವಾಗುವುದಿಲ್ಲ. ಏನನ್ನೂ ಕುಡಿಯಲೂ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಕೆಟ್ಟ ಲೈಫ್​​​ಸ್ಟೈಲ್​​ನಿಂದ ಕೂಡ ಈ ಬಾಯಿಹುಣ್ಣು ಕಾಣಿಸಿಕೊಳ್ಳುತ್ತದೆ. ವೈದ್ಯರ ಬಳಿ ಹೋದರೆ ಅವರು ಮಲ್ಟಿವಿಟಮಿನ್​​ ಮಾತ್ರೆಗಳನ್ನು ನೀಡುತ್ತಾರೆ. ಇದು ಕ್ರಮೇಣವಾಗಿ ಬಾಯಿ ಹುಣ್ಣನ್ನು ಕಡಿಮೆ ಮಾಡುತ್ತದೆ. ಆದರೆ ಬೇಗ ಬಾಯಿಹುಣ್ಣಿನ ನೋವು ಕಡಿಮೆಯಾಗಬೇಕಾದರೆ ಈ ಉಪಾಯಗಳನ್ನು ಅನುಸರಿಸಿ.

ದೇಹದ ಉಷ್ಣತೆ ಹೆಚ್ಚಾಗುವುದರಿಂದ ಈ ಬಾಯಿಹುಣ್ಣು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಆಗಾಗ ನೀರನ್ನು ಕುಡಿಯುತ್ತಾ ಇರಿ. ಇದರಿಂದಾಗಿ ನಿಮ್ಮ ದೇಹದ ಉಷ್ಣತೆ ನಿಯಂತ್ರಣದಲ್ಲಿರುತ್ತದೆ.

ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ. ಇದರಿಂದ ಬಾಯಿ ಸ್ವಚ್ಛವಾಗುತ್ತದೆ, ಜೊತೆಗೆ ತಂಪಾದ ಪಾನೀಯಗಳನ್ನು ಹೆಚ್ಚಾಗಿ ಬಳಸಿ. ಮೊಸರು, ಮಜ್ಜಿಗೆ, ಹಣ್ಣಿನ ಜ್ಯೂಸ್​​​ಗಳನ್ನು ತೆಗೆದುಕೊಳ್ಳಿ. ಐಸ್​​​​ ಕ್ರೀಮ್​​ ತಿನ್ನುವುದರಿಂದಲೂ ಸ್ವಲ್ಪ ಹಾಯ್​​​ ಎನ್ನಿಸುತ್ತದೆ.

ಆದಷ್ಟು ಬಿಸಿ ವಸ್ತುಗಳಿಂದ ದೂರ ಇರಿ. ಮಸಾಲೆ ಪದಾರ್ಥಗಳ ಸೇವನೆ ಬೇಡವೇ ಬೇಡ. ಉಪ್ಪಿನ ಆಹಾರದಿಂದ ಕೂಡ ದೂರವಿರಿ.

ಟೀ-ಕಾಫಿಯನ್ನು ಸೇವಿಸಲು ಹೋಗಬೇಡಿ. ಇದರಿಂದ ಸಮಸ್ಯೆ ಮತ್ತಷ್ಟು ದೊಡ್ಡದಾಗುತ್ತದೆ. ಮಲಬದ್ದತೆ ಕಾಣಿಸಿಕೊಂಡು ಹುಣ್ಣು ಗುಣವಾಗಲು ಮತ್ತಷ್ಟು ಕಾಲ ಹಿಡಿಯುತ್ತದೆ.

ಅರಿಶಿಣದಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಹಾಗಾಗಿ ಆಹಾರದಲ್ಲಿ ಸಾಕಷ್ಟು ಅರಿಶಿಣವನ್ನು ಬಳಸಿ. ಹನಿ ನೀರಿಗೆ ಅರಿಶಿಣದ ಪುಡಿಯನ್ನು ಹಾಕಿ ಪೇಸ್ಟ್​​​​​​​​​​​​​​ ಮಾಡಿ ಅದನ್ನು ಹುಣ್ಣಾದ ಜಾಗಕ್ಕೆ ಹಚ್ಚಿ. ತಕ್ಷಣ ನೋವು ಶಮನವಾಗುತ್ತದೆ. ಜೊತೆಗೆ ಮತ್ತೆ ಬಾಯಿಹುಣ್ಣು ಬರುವುದನ್ನು ಇದು ತಪ್ಪಿಸುತ್ತದೆ.

ತುಳಸಿಯಲ್ಲಿ ಕೂಡ ನೋವು ನಿವಾರಕ ಶಕ್ತಿ ಇದೆ. ಹಾಗಾಗಿ ದಿನದಲ್ಲಿ ಆಗಾಗ ತುಳಸಿ ಎಲೆಗಳನ್ನು ಜಗಿದು ನುಂಗುತ್ತಿರಿ. ಇದರಿಂದ ನೋವು ಕಡಿಮೆಯಾಗುವುದಲ್ಲದೆ ಗುಳ್ಳೆ ಕೂಡ ಕಡಿಮೆಯಾಗುತ್ತದೆ.

0

Leave a Reply

Your email address will not be published. Required fields are marked *