ಪತ್ನಿ ಆರೋಪಗಳ ಬಗ್ಗೆ ತನಿಖೆ ನಡೆಯಲಿ..

ತಮ್ಮ ವಿರುದ್ಧ ಪತ್ನಿ ಮಾಡಿರುವ ಆರೋಪಗಳ ಬಗ್ಗೆ. ಸಂಪೂರ್ಣ ತನಿಖೆ ನಡೆಸುವಂತೆ ಭಾರತದ ಕ್ರಿಕೆಟಿಗ ಮೊಹಮ್ಮದ್‌ ಶಮಿ ಒತ್ತಾಯಿಸಿದ್ದಾರೆ. ದಿನದಿಂದ ದಿನಕ್ಕೆ ನನ್ನ ವಿರುದ್ಧ ಹಸೀನಾ ಜಹಾನ್‌ ಮಾಡುತ್ತಿರುವ ಆರೋಪಗಳು ಹೆಚ್ಚತ್ತಿವೆ. ಆದರೆ ನಾನು ಈ ಬಗ್ಗೆ ಏನನ್ನು ಹೇಳಲು ಇಷ್ಟಪಡುವುದಿಲ್ಲ. ಹಸೀನಾ ಮಾಡುತ್ತಿರುವ ಆರೋಪಗಳ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಮೊಹಮ್ಮದ್‌ ಶಮಿ ಹೇಳಿದ್ದಾರೆ..ಇದೇ ವೇಳೆ ಬಿಸಿಸಿಐ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಬಸಿಸಿಐ ಮೇಲೆ ತಮಗೆ ಪೂರ್ಣ ನಂಬಿಕೆ ಇದೆ ಎಂದಿದ್ದಾರೆ. ನನ್ನ ವಿರುದ್ಧದ ಆರೋಪಗಳ ತನಿಖೆ ಪೂರ್ಣಗೊಂಡ ನಂತರ ಬಿಸಿಸಿಐ ತಿರ್ಮಾನ ತೆಗೆದುಕೊಳ್ಳಲಿ ಎಂದು ಶಮಿ ಮನವಿ ಮಾಡಿದ್ದಾರೆ…ಮತ್ತೊಂದೆಡೆ ಶಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಹಸೀನಾ ಜಹಾನ್, ಶಮಿ ಎಲ್ಲಾ ಎಲ್ಲೆಗಳನ್ನು ಮೀರಿದ್ದಾರೆ. ಭಯದಿಂದ ಶಮಿ ಒಳ್ಳೆ ರೀತಿ ವರ್ತಿಸುತ್ತಿದ್ದಾರೆ. ನನ್ನ ಆರೋಪಗಳ ವಿರುದ್ಧ ಸಂಪೂರ್ಣ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ,

0

Leave a Reply

Your email address will not be published. Required fields are marked *