ಮಾರ್ಚ್​ 14ಕ್ಕೆ ಜಾಮೀನು ತೀರ್ಪು ಕಾಯ್ದಿರಿಸಿದ ನ್ಯಾಯಪೀಠ..!

ವಿದ್ವತ್​ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಹಕ್ಕಿಯಾಗಿರುವ ನಾಲಪಾಡ್​​​ ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್​​ನಲ್ಲಿ ನಡೆಯಿತು. ಸರ್ಕಾರದ ವಿಶೇಷ ಅಭಿಯೋಜಕ ಹಾಗೂ ನಾಲಪಡ್​ ಪರ ವಕೀಲರ ವಾದ ಪ್ರತಿವಾದ ನ್ಯಾಯಪೀಠದ ಮುಂದೆ ತಾರಕಕ್ಕೆ ಏರಿತ್ತು. ವಿದ್ವತ್​​ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಶಾಸಕ ಹ್ಯಾರಿಸ್​ ಪುತ್ರ ಮೊಹಮ್ಮದ್​ ನಲಪ್ಪಾಡ್​​​ ಜಾಮೀನು ಸಿಗದೇ ಪರದಾಡುವಂತಾಗಿದೆ. ಇಂದು ಈ ಪ್ರಕರಣದ ಕುರಿತು ಹೈಕೋರ್ಟ್​​ನಲ್ಲಿ ವಿಚಾರಣೆ ನಡೆದಿದ್ದು, ಉಭಯ ವಕೀಲರು ಕೂಡ ನ್ಯಾಯಪೀಠದ ಮುಂದೆ ತಮ್ಮ ತಮ್ಮ ವಾದ ಮಂಡಿಸಿದ್ರು. ಇಂದು ಮುಖ್ಯವಾಗಿ ವೈದ್ಯಕೀಯ ದಾಖಲೆ ಕುರಿತಾಗಿ ವಾದ ಪ್ರತಿವಾದ ನಡೀತು. ನಲಪ್ಪಾಡ್​​ ನೇರವಾಗಿ ವಿದ್ವತ್​ ಮೇಲೆ ಹಲ್ಲೆ ನಡೆಸಿಲ್ಲ. ಹೊರತಾಗಿ ನಲಪ್ಪಾಡ್​​​ ಸಹಚರರಯ ಹಲ್ಲೆ ನಡೆಸಿದ್ದಾರೆ ಅಷ್ಟೇ ಎಂದು ನಲಪಾಡ್​ ಪರ ವಕೀಲ ಸಿವಿ ನಾಗೇಶ್​​ ತಮ್ಮ ವಾದವನ್ನ ಮುಂದಿಟ್ಟರು.

ಈ ವೇಳೆ ಇದಕ್ಕೆ ಕೌಂಟರ್​ ನೀಡಿದ ಸರ್ಕಾರಿ ವಿಶೇಷ ಅಭಿಯೋಜಕ ಶ್ಯಾಂ ಸುಂದರ್​​​​​​​​​​​ ವಿಧ್ವತ್ ಮೇಲೆ ಯಾರು ಹಲ್ಲೆ ಮಾಡಿದ್ದಾರೆ ಅನ್ನೋದು ಸಿಸಿಟಿವಿಯಲ್ಲಿ ಸಂಪೂರ್ಣವಾಗಿ ಸೆರೆಯಾಗಿದ್ದು ಅದರ ಸಿಡಿ ಈಗಾಗಲೇ ನ್ಯಾಯಪೀಠದ ಮುಂದೆ ಸಲ್ಲಿಸಲಾಗಿದೆ ಎಂದ್ರು. ಎಸ್ಪಿಪಿ ವಾದಕ್ಕೆ ವಿರೋಧ ತೋರಿದ.. ಸಿಟಿ ಸಿವಿಲ್​ ಕೋರ್ಟ್​​ನಲ್ಲಿ ವಿಚಾರಣೆ ನಡೀತು.. ಎಸಿಎಂಎಂ ನ್ಯಾಯಾಲಯದಲ್ಲೂ ವಿಚಾರಣೆ ನಡೀತು. ಆದ್ರೆ ಆ ಸಿಡಿಯನ್ನ ವಿದ್ವತ್​​ ಪರ ವಕೀಲರು ಸಲ್ಲಿಸಿದ್ದು ಹೈಕೋರ್ಟ್​​​​ನಲ್ಲಿ. ಇದ್ರಿಂದಲೇ ಗೊತ್ತಾಗುತ್ತೆ, ಯಾವ ಉದ್ದೇಶದಿಂದ ಎಸ್ಪಿಪಿ ಅವರು ವಾದ ಮಾಡುತ್ತಿದ್ದಾರೆ ಎಂದು ನಾಗೇಶ್​ ಹೇಳಿದ್ರು. ಇನ್ನು ವೈದ್ಯರು ಡಿಸ್ಚಾರ್ಜ್​​​​​​ಗೆ ಹೇಳಿದ್ರು ಕೂಡ ವಿಧ್ವತ್​​ ಆಸ್ಪತ್ರೆಯಲ್ಲೇ ಕೆಲವು ದಿನಗಳು ಕಾಲ ಕಳೆದಿದ್ರು. ಫೆಬ್ರವರಿ 25ಕ್ಕೆ ವಿದ್ವತ್​​​ರನ್ನ ಪರಿಶೀಲಿಸಿದ ಡಾಕ್ಟರ್​ ಆನಂದ್​ ಅವರು ವಿಧ್ವತ್​ ಫಿಟ್​ ಆ್ಯಂಡ್​ ಫೈನ್​​ ಅಂತ ಹೇಳಿದ್ರು. ವಿದ್ವತ್​​ ಈ ರೀತಿ ನಡೆದುಕೊಂಡಿದ್ದು ನಲಪಾಡ್​​ಗೆ ಜಾಮೀನು ಸಿಗಬಾರದು ಅಂತ ತಾನೆ ಅಂತ ನಲಪಾಡ್​ ಪರ ವಕೀಲರು ನ್ಯಾಯಧೀಶರ ಮುಂದೆ ವಾದ ಮಂಡಿಸಿದ್ರು..

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಕೀಲ ಉಸ್ಮಾನ್​​​​, ನಾವು ತನಿಖೆಯ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಮೊದಲು ಸೆಕ್ಷನ್​​​​ 326 ಹಾಕಲಾಗಿತ್ತು. ಆದ್ರೆ ಯಾವಾಗ ಆರ್​ ಅಶೋಕ್​​​​​​​ ಆಸ್ಪತ್ರೆಗೆ ಭೇಟಿ ನೀಡಿದ್ರೋ ಆಗ ಕೆಲವೊಂದು ಬದಲಾವಣೆ ಆಯ್ತು. ನಾವು ಪ್ರಕರಣದ ನಿಜಸ್ಥಿತಿಯ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದೇವೆ. ಕೋರ್ಟ್​​ ಬುಧವಾರಕ್ಕೆ ಜಾಮೀನು ತೀರ್ಪನ್ನ ಕಾಯ್ದಿರಿಸಿದೆ ಎಂದ್ರು.ಇನ್ನು ಉಭಯ ಕಕ್ಷಿಧಾರರ ವಾದ ಆಲಿಸಿದ ಶ್ರೀನಿವಾಸ್​​ ಹಾಗೂ ಹರೀಶ್​ ಕುಮಾರ್​​ ಅವರನ್ನೊಳಗೊಂಡ ನ್ಯಾಯಪೀಠ ಜಾಮೀನು ತೀರ್ಪನ್ನ ಬುಧವಾರಕ್ಕೆ ಅಂದ್ರೆ, ಮಾರ್ಚ್​ 14ಕ್ಕೆ ಕಾಯ್ದಿರಿಸಿದೆ. ಬುಧವಾರದದಂದು ಮಧ್ಯಾಹ್ನ 2:30ಕ್ಕೆ ಮತ್ತೆ ವಿಚಾರಣೆಯ ಬಳಿಕ ಜಾಮೀನು ತೀರ್ಪನ್ನ ನ್ಯಾಯಪೀಠ ನೀಡಲಿದೆ. ​

ಕ್ರೈಂ ಬ್ಯೂರೋ ರಿಪೋರ್ಟ್​​​​​​​​ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *