ನೆಹರು ಕುಂಭಮೇಳಕ್ಕೆ ಬಂದಾಗ ಸಾವಿರಾರು ಜನ ಬಲಿ: ಮೋದಿ

ಲಖ್ನೋ: ನೆಹರು ಅವರು ಒಮ್ಮೆ ಕುಂಭಮೇಳಕ್ಕೆ ಬಂದಿದ್ದರು. ಆಗ ಅವ್ಯವಸ್ಥೆಯಿಂದಾಗಿ ಕಾಲ್ತುಳಿತ ಸಂಭವಿಸಿತ್ತು, ಸಾವಿರಾರು ಜನ ಸಾವಿಗೀಡಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಉತ್ತರಪ್ರದೇಶದ ಕೌಶಾಂಬಿಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಸಾವಿರಾರು ಜನ ಮಡಿದ ಸುದ್ದಿಯನ್ನು ಅಂದಿನ ಮಾಧ್ಯಮಗಳು ಪ್ರಸಾರ ಮಾಡಲಿಲ್ಲ. ಏಕೆಂದರೆ, ಸರ್ಕಾರದ ಮರ್ಯಾದೆಯನ್ನು ಉಳಿಸಲು, ನೆಹರು ಅವರಿಗೆ ಯಾವುದೇ ಕಳಂಕ ತಗುಲದಂತೆ ನೋಡಿಕೊಳ್ಳಲಾಯಿತು ಎಂದು ಅವರು ಆರೋಪಿಸಿದರು.

 ಫೆಬ್ರವರಿ 03, 1954 ಅಲಹಾಬಾದ್‍ನಲ್ಲಿ ನಡೆದ ಕಾಲ್ತುಳಿತಕ್ಕೆ 800 ಜನ ಸಾವಿಗೀಡಾಗಿ, 2,000 ನಾಗರಿಕರು ಗಾಯಗೊಂಡಿದ್ದರು. ಸ್ವಾತಂತ್ರ್ಯಾ ನಂತರದ ಮೊದಲ ಕುಂಭಮೇಳ ಆಯೋಜಿಸಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ 4-5 ಲಕ್ಷ ಜನ ಸೇರಿದ ಪರಿಣಾಮದಿಂದಾಗಿ ಈ ಅನಾಹುತ ಸಂಭವಿಸಿತ್ತು. 1840, 1906, 1954, 1986, 2003(39 ನಾಗರಿಕರ ಸಾವು), 2010 (7 ನಾಗರಿಕರ ಸಾವು), 2013ರಲ್ಲಿ 36 ನಾಗರಿಕರ ಸಾವು ಸಂಭವಿಸಿತ್ತು.

0

Leave a Reply

Your email address will not be published. Required fields are marked *