ಮೋದಿ ಕುರಿತು ಸತೀಶ್ ಆಚಾರ್ಯ ಬರೆದ ವ್ಯಂಗ್ಯಚಿತ್ರ ವೈರಲ್

ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಬರೆದ ಕಾರ್ಟೂನ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕೇಂದ್ರ ಸರ್ಕಾರ ಯುಪಿಎ ಅವಧಿಯ ಜಿಡಿಪಿ ದರವನ್ನು ತಗ್ಗಿಸಿತ್ತು. ಈ ಕ್ರಮವನ್ನು ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ಮತ್ತು ದೇಶದ ನಾಗರಿಕರು ಟೀಕಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಸತೀಶ್ ಆಚಾರ್ಯ, ಎತ್ತರದ ಪೀಠದಲ್ಲಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿಯವರ ಕುಬ್ಜ ಪ್ರತಿಮೆ ಮತ್ತು ಅವರಿಗಿಂತ ಎತ್ತರ ಇರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರತಿಮೆಯ ತಲೆಯ ಮೇಲೆ ಹಣಕಾಸು ಸಚಿವ ಅರುಣ್ ಜೇಟ್ಲಿ ಜೆಸಿಬಿ ಕ್ರೇನ್​ನಲ್ಲಿ ಸುತ್ತಿಗೆಯಿಂದ ಹೊಡೆಯುತ್ತಿರುವ ಕಾರ್ಟೂನ್ ರಚಿಸಿದ್ದರು. ಇದೀಗ ಈ ಚಿತ್ರವನ್ನು ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು,  ಮೋದಿ – ಮಾಸ್ಟರ್ ಆಫ್ ಡಾಟಾ ಮ್ಯಾನಿಪುಲೇಶನ್ ಎಂದಿದ್ದಾರೆ. ಈ ಟ್ವೀಟ್​ಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, 5 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಸಾವಿರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

1+

Leave a Reply

Your email address will not be published. Required fields are marked *