50 ಕೋಟಿ ಭಾರತೀಯರಿಗೆ ಆರೋಗ್ಯ ಸೇವೆ ಯೋಜನೆ ಘೋಷಿಸಿದ ಪ್ರಧಾನಿ ಮೋದಿ

ದೆಹಲಿ: ಸರ್ಕಾರ ಆರೋಗ್ಯ ಉಪಕ್ರಮಗಳನ್ನು ಕೈಗೊಂಡಿದ್ದು, 50 ಕೋಟಿ ಭಾರತೀಯರಿಗೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಆರೋಗ್ಯ ಸೇವೆಗಾಗಿ ಹಣ ವ್ಯಯಿಸಲಾಗದ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದರು. ಪ್ರಧಾನ ಮಂತ್ರಿ ಜನ್ ಆರೋಗ್ಯ ಅಭಿಯಾನವನ್ನು ಸೆಪ್ಟಂಬರ್ 25ರಂದು ಜಾರಿಗೆ ತರಲಾಗುವುದು. ಇದರ ಮೂಲಕ ದೇಶದ ಬಡವರು ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗಲಿದೆ ಎಂದರು.

ಸರ್ಕಾರ ಆರೋಗ್ಯ ಉಪಕ್ರಮಗಳನ್ನು ಕೈಗೊಂಡಿದ್ದು, 50 ಕೋಟಿ ಭಾರತೀಯರಿಗೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಆರೋಗ್ಯ ಸೇವೆಗಾಗಿ ಹಣ ವ್ಯಯಿಸಲಾಗದ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದರು. ಪ್ರಧಾನ ಮಂತ್ರಿ ಜನ್ ಆರೋಗ್ಯ ಅಭಿಯಾನವನ್ನು ಸೆಪ್ಟಂಬರ್ 25ರಂದು ಜಾರಿಗೆ ತರಲಾಗುವುದು. ಇದರ ಮೂಲಕ ದೇಶದ ಬಡವರು ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗಲಿದೆ ಎಂದರು. ನಾವು ಮನೆಯ ಮೇಲೆ ಗೆರೆ ಕೊರೆಯುವವರಲ್ಲ, ಕಲ್ಲಿನ ಮೇಲೆ ಗೆರೆ ಕೊರೆಯುವವರು ಎಂದರು.

ಆರ್ಥಿಕ ಅಭಿವೃದ್ಧಿ ವೈಯಕ್ತಿಕವಾಗಿ ವ್ಯಕ್ತಿಯ ಘನತೆ ಗಮನಾರ್ಹ ಸಂಗತಿ. ನಮ್ಮ ಉಜ್ವಲ ಮತ್ತು ಸೌಭಾಗ್ಯದಂತ ಯೋಜನೆಗಳು ಭಾರತೀಯರ ಘನತೆಯನ್ನು ಹೆಚ್ಚಿಸುತ್ತಿವೆ ಎಂದು ಸರ್ಕಾರದ ಯೋಜನೆಗಳ ಮಹತ್ವವನ್ನು ಹೊಗಳಿದರು. ಸ್ವಚ್ಛ ಭಾರತ್ ಮಿಷನ್​ನಿಂದಾಗಿ ಲಕ್ಷಾಂತರ ಮಕ್ಕಳು ಆರೋಗ್ಯವಂತರಾಗಿದ್ದಾರೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡ ಪ್ರಶಂಸಿಸಿದೆ ಎಂದರು.

ಕಪ್ಪು ಹಣ ಹೊಂದಿರುವವರನ್ನು, ಭ್ರಷ್ಟರನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಅವರು ದೇಶವನ್ನು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು. ದೆಹಲಿ ರಸ್ತೆಗಳು ಈಗ ಅಧಿಕಾರದ ದಲ್ಲಾಳಿಗಳಿಂದ ಮುಕ್ತವಾಗಿವೆ. ಈಗ ಅಧಿಕಾರದ ದಲ್ಲಾಳಿಗಳ ಬದಲು ಜನರ ದನಿ ಕೇಳುತ್ತಿದೆ ಎಂದರು. ಭಾರತೀಯ ಪ್ರಾಮಾಣಿಕ ತೆರಿಗೆದಾರರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಿಂದ ಸಂತ್ರಸ್ಥರಾಗಿದ್ದ ಜನರಿಗೆ ನೆರವಾಗಿದೆ ಎಂದರು.

ಅತ್ಯಾಚಾರದ ಅಸಹ್ಯಕರ ಮನಸ್ಥಿತಿಯಿಂದ ನಮ್ಮ ಸಮಾಜವನ್ನು ಮುಕ್ತವಾಗಿಸಬೇಕು ಎಂದು ಕರೆ ನೀಡಿದ ಅವರು, ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಅತ್ಯಾಚಾರಿಗಳಿಗೆ ತ್ವರಿತ ಕೋರ್ಟ್​ನಲ್ಲಿ ಗಲ್ಲಿಗೇರಿಸಲಾಗಿದೆ. ಇಂಥ ಸುದ್ದಿಗಳನ್ನು ನಾವು ಪ್ರಚಾರ ಮಾಡುವ ಮೂಲಕ ಅರಿವು ಮೂಡಿಸಬೇಕು. ಕಾನೂನಿನ ನಿಯಮಗಳು ಸರ್ವೋಚ್ಛ, ಯಾರೊಬ್ಬರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಕರೆ ನೀಡಿದರು.

ತ್ರಿಪುರಾ, ಮೇಘಾಲಯ ಮತ್ತು ಅರುಣಾಚಲದ ಅನೇಕ ಪ್ರದೇಶಗಳಲ್ಲಿ ಐತಿಹಾಸಿಕ ಶಾಂತಿ ನೆಲೆಸಿದೆ. 126 ಜಿಲ್ಲೆಗಳಲ್ಲಿದ್ದ ಎಡ ಉಗ್ರ ಸಂಘಟನೆಗಳನ್ನು 90ಕ್ಕೆ ಇಳಿಸಲಾಗಿದೆ. ನಾವು ದೇಶಾದ್ಯಂತ ಶಾಂತಿ ನೆಲೆಸಲು ಕೆಲಸ ಮಾಡುತ್ತಿದ್ದೇವೆ ಎಂದರು. ನಾವು ಗುಂಡು ಮತ್ತು ಬೈಗುಳದ ರಸ್ತೆಯಲ್ಲಿಲ್ಲ, ಹೆಗಲಿಗೆ ಹೆಗಲು ಕೊಟ್ಟು ಮುಂದೆ ಸಾಗಲು ಬಯಸುತ್ತೇವೆ. ಬರುವ ಕೆಲವೇ ತಿಂಗಳುಗಳಲ್ಲಿ ಕಾಶ್ಮೀರದ ಜನರಿಗೆ ತಮ್ಮ ಹಕ್ಕು ಚಲಾಯಿಸಲು ಅವಕಾಶ ಸಿಗಲಿದೆ ಮತ್ತು ಪಂಚಾಯಿತಿ ಚುನಾವಣೆಗಳು ನಡೆಯಲಿವೆ ಎಂದು ಅವರು ಹೇಳಿದರು. ಈ ಮೂಲಕ ಪರೋಕ್ಷವಾಗಿ ಕಣಿವೆ ರಾಜ್ಯದಲ್ಲಿ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ ಎಂಬ ಸೂಚನೆಯನ್ನು ನೀಡಿದರು.

ಜಿಎಸ್​ಟಿಯನ್ನು ಕೆಲವು ವರ್ಷಗಳಿಂದ ಜಾರಿಗೆ ತರದೆ ಇರುವವರು, ಬಾಕಿ ಉಳಿಸಿದವರು, ಕಳೆದ ವರ್ಷ ವಾಸ್ತವವನ್ನು ಅರಿತಿದ್ದಾರೆ. ನಾನು ಜಿಎಸ್​ಟಿಯನ್ನು ಯಶಸ್ವಿಗೊಳಿಸಿದ ಉದ್ಯಮಿಗಳಿಗೆ ಧನ್ಯವಾದಗಳನ್ನು ಅರ್ಪಿಸಬಯಸುತ್ತೇನೆ ಎಂದು ಅವರು ವಿಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಕೆಲವು ವರ್ಷಗಳಿಂದ ಭೂ ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆಯಾಗಿದೆ. ನಾವು ಆರ್ಥಿಕ ಪ್ರಗತಿಯಲ್ಲಿ ದಾಖಲಿಸಿದ್ದೇವೆ ಎಂದು ಕೂಡ ಅವರು ಅಭಿಪ್ರಾಯಪಟ್ಟರು.

ನಮ್ಮ ಸೇನೆ ಅನೇಕ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿ ನೆರವು ನೀಡುತ್ತದೆ. ಸಂಕಟದ ಸಮಯದಲ್ಲಿ ಮಾನವರ ರಕ್ಷಣೆಗಾಗಿ ನಮ್ಮ ಸೇನೆ ಕರುಣೆ, ಮಮತೆಯಿಂದ ಧಾವಿಸುತ್ತದೆ. ಇಲ್ಲಿಗೆ ಹೋಗುತ್ತದೆ ಎಂದಾದರೆ, ನಿರ್ದಿಷ್ಟ ದಾಳಿ ನಡೆಸಿ, ಶತೃಗಳ ಹಲ್ಲು ಮುರಿದು ಬರುತ್ತದೆ ಎಂದು ಸೇನೆಯ ಸೇವೆಯನ್ನು ಶ್ಲಾಘಿಸಿದರು. ಒಂದು ವೇತನ ಒಂದು ಪಿಂಚಣಿ ಬೇಡಿಕೆ ದಶಕಗಳಿಂದ ಬಾಕಿ ಉಳಿದಿತ್ತು. ಭಾರತದ ನಾಗರಿಕರು, ನಮ್ಮ ಸೇನೆ ನಮ್ಮ ಮೇಲೆ ವಿಶ್ವಾಸ ಇಟ್ಟಿದೆ. ನಾವು ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯಿತು. ನಮ್ಮ ದೇಶದ ಹಿತಾಸಕ್ತಿಗಾಗಿ ನಾವು ಸದಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

2013ರಲ್ಲಿ ಶೌಚಾಲಯಗಳನ್ನು ಕಟ್ಟಿದ ವೇಗದಲ್ಲಿ ಕಟ್ಟಿದಲ್ಲಿ, ಪೂರ್ಣಗೊಳಿಸಲು ದಶಕಗಳ ಕಾಲದ ಅವಧಿಯ ಅಗತ್ಯವಿದೆ. ರೈತರ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಬೇಡಿಕೆ ಬಹಳ ದಿನಗಳಿಂದ ಇತ್ತು. ರೈತರು, ರಾಜಕಾರಣಿಗಳು, ಕೃಷಿ ತಜ್ಞರು ಇದಕ್ಕಾಗಿ ಒತ್ತಾಯಿಸುತ್ತಿದ್ದರು. ಆದರೆ ಈ ವಿಷಯದಲ್ಲಿ ಏನೂ ಆಗಿರಲಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಕನಿಷ್ಠ ಬೆಂಬಲ ಬೆಲೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದರು.

ತ್ರಿವಳಿ ತಲಾಖ್ ಆಚರಣೆ ಮುಸ್ಲಿಂ ಮಹಿಳೆಯರಿಗೆ ದೊಡ್ಡ ಅನ್ಯಾಯವಾಗಿತ್ತು. ಈ ಆಚರಣೆಗೆ ಅಂತ್ಯ ಹೇಳಲು ನಾವು ಪ್ರಯತ್ನಿಸಿದೆವು. ಆದರೆ, ಕೆಲವರು ಇದು ಕೊನೆಯಾಗಬಾರದು ಎಂದು ಬಯಸಿದ್ದರು. ನಾನು ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದೆ. ಇದನ್ನು ಈಡೇರಿಸಲಾಗಿದೆ ಎಂದು ಅವರು ಹೇಳಿದರು.

ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡ, ಮನಮೋಹನ್ ಸಿಂಗ್, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಜೆ ಪಿ ನಡ್ಡಾ, ಬಿಜೆಪಿಯ ಹಿರಿಯ ನಾಯಕ ಎಲ್​ ಕೆ ಅಡ್ವಾಣಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಹಿರಿಯ ನಾಯಕ ಗುಲಾಂ ನಬಿ ಆಜಾದ್ ಮತ್ತಿತರ ನಾಯಕರು ಇಂದಿನ ಸಮಾರಂಭದಲ್ಲಿ ಹಾಜರಿದ್ದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *