ಸಚಿವ ಜಾರ್ಜ್ ವಿಚಾರದಲ್ಲಿ ಕಾಂಗ್ರೆಸ್- ಜೆಡಿಎಸ್ ಒಗ್ಗಟ್ಟಿನ ಮಂತ್ರ…

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್​ಐಆರ್​ ದಾಖಲಿಸುತ್ತಿದ್ದಂತೆ ಕಾಂಗ್ರೆಸ್​​ ನಾಯಕರು, ಜೆಡಿಎಸ್ ನಾಯಕರು ಒಟ್ಟಾಗಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.. ಎರಡು ಪಕ್ಷಗಳು ಒಂದಾಗುತ್ತಿದ್ದಂತೆ, ತತ್ತರಿಸಿದ ಬಿಜೆಪಿ ಜಾರ್ಜ್ ವಿರುದ್ಧ ನಡೆಸಲು ಹೊರಟಿದ್ದ ಹೋರಾಟವನ್ನು ಕೈಬಿಟ್ಟಿದೆ.ಸಚಿವ ಕೆ.ಜೆ ಜಾರ್ಜ್ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ತಣ್ಣಗಾಗಿದೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ, ಜಾರ್ಜ್​ ವಿರುದ್ಧ ಸಿಬಿಐ, ಎಫ್​ಐಆರ್​ ದಾಖಲಿಸುತ್ತಿದ್ದಂತೆ, ಬಿಜೆಪಿ, ಸಚಿವರ ರಾಜೀನಾಮೆಗೆ ಆಗ್ರಹಿಸಿ ಹೋರಾಟಕ್ಕೆ ತಂತ್ರ ರೂಪಿಸಿತ್ತು. ಆದ್ರೆ ಈಗ ಪ್ರತಿಭಟನೆ ನಡೆಸದಿರು ನಿರ್ಧರಿಸಿದೆ.

ಸಚಿವ ಜಾರ್ಜ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಒಟ್ಟಾಗಿ ಹೋರಾಟಕ್ಕೆ ಸಿದ್ಧರಾಗಿದ್ದರು.. ಜೆಡಿಎಸ್ ಸಹ ಜಾರ್ಜ್ ಬೆಂಬಲಕ್ಕೆ ನಿಂತಿತ್ತು.. ಇದನ್ನು ಮನಗಂಡ ಬಿಜೆಪಿ ಮೆತ್ತಗಾಗಿದೆ.. ಸಚಿವ ಜಾರ್ಜ್ ವಿರುದ್ಧದ ಪ್ರತಿಭಟನೆ ನಿಲ್ಲಿಸಲು ತೀರ್ಮಾನಿಸಿದೆ.. ಬಿಜೆಪಿ ಹೈಕಮಾಂಡ್ ಸೂಚನೆ ಮೆರೆಗೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.. ಸಿಎಂ ಸಿದ್ದರಾಮಯ್ಯ ಮತ್ತು ಅವರ ಟೀಂ, ಕಳಂಕಿತ, ಕ್ರಿಮಿನಲ್ ಆರೋಪ ಹೊತ್ತಿರುವ ಕೇಂದ್ರದ ಬಿಜೆಪಿ ಸಚಿವರ, ಸಂಸದರ ಲಿಸ್ಟ್ ತಯಾರಿಸಿ ಜಾರ್ಜ್ ವಿರುದ್ಧದ ಹೋರಾಟಕ್ಕೆ ಪ್ರತ್ಯಾಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿತ್ತು. ಕಾಂಗ್ರೆಸ್‌ನ ಕಾನೂನು ಅಸ್ತ್ರಕ್ಕೆ ಹೆದರಿದ ಜಾರ್ಜ್ ವಿರುದ್ಧದ ಹೋರಾಟ ಸ್ಥಗಿತಗೊಳಿಸಲು ತೀರ್ಮಾನಿಸಿದೆ. ಇದರಿಂದ ಪಕ್ಷಕ್ಕೆ ಇನ್ನಷ್ಟು ಡ್ಯಾಮೆಜ್ ಆಗಬಹುದೆಂಬ ಕಾರಣಕ್ಕೆ ಈ ನಿರ್ಧಾರ ತಳೆದಿದೆ.

ಇನ್ನು ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಜಾರ್ಜ್ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುಪ್ರಿಂಕೋರ್ಟ್​ನಲ್ಲಿ ಗಣಪತಿ ತಂದೆ ಕುಶಾಲಪ್ಪ ಎಸ್​.ಎಲ್​.ಪಿ ಹಾಕಿದ್ದು, ಅದ್ರಂತೆ ಸುಪ್ರಿಂಕೋರ್ಟ್​ ತನಿಖೆಗೆ ಸೂಚಿಸಿದೆ. ಆದ್ರೆ ಇದ್ರಲ್ಲಿ ಎಲ್ಲೂ ಜಾರ್ಜ್ ಹೆಸ್ರು ಪ್ರಸ್ತಾಪವಾಗಿಲ್ಲ. ಹಳೆಯ ಎಫ್.ಐ.ಆರ್ ಮುಂದುವರೆದಿದ್ದು, ಜಾರ್ಜ್ ರಾಜೀನಾಮೆ ಕೊಡುವ ಅವಶ್ಯಕತೆಯೇ ಇಲ್ಲ. ಸಿಬಿಐ ತನಿಖೆಗೆ ಸಚಿವರು ಸಹಕರಿಸೋದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ.ಇತ್ತ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಹ ಬಿಜೆಪಿಯವ್ರಿಗೆ ಅಲ್ಪಸಂಖ್ಯಾತರಿಗೆ ಕಿರುಕುಳ ಕೊಡುವುದೇ ಕೆಲಸವಾಗಿದೆ. ಆದ್ರೆ ಇದ್ಯಾವುದಕ್ಕೂ ನಾವು ಬಗ್ಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.ಇತ್ತ ಸಿಬಿಐ ತನಿಖೆ ಕುರಿತು ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಜಾರ್ಜ್​ ವಿಚಾರದಲ್ಲಿ ರಾಜಕೀಯ ಬೆರೆಸೋಕೆ ತಾವು ಸಿದ್ಧವಿಲ್ಲ. ಸಿಬಿಐ ತನಿಖೆ ನಿಷ್ಪಕ್ಷವಾಗಿ ನಡೆಯಲೀ ಎಂದು ಆಗ್ರಹಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳಿಂದ ಬೆದರಿದ ಬಿಜೆಪಿ ಪಡೆ, ಇರೋ ವರ್ಚಸ್ಸುನ್ನು ಕಳೆದುಕೊಂಡು 150 ರಿಂದ 50ಸ್ಥಾನಕ್ಕೆ ಕುಸಿಯುವ ಭಯದಲ್ಲಿ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಟ್ಟಿದೆ.. ಕಾಂಗ್ರೆಸ್ ಪ್ರತಿ ಅಸ್ತ್ರಕ್ಕೆ ಕಮಲಪಾಳಯ ತಣ್ಣಗಾಗಿದೆ.

ನ್ಯೂಸ್ ಡೆಸ್ಕ್, ಸುದ್ದಿಟಿವಿ

0

Leave a Reply

Your email address will not be published. Required fields are marked *