ವರುಣ ಅಬ್ಬರಕ್ಕೆ ಬಲಿಯಾದ ಕುಟುಂಬದ ಒಬ್ಬೊಬ್ಬರಿಗೂ ಬಿಬಿಎಂಪಿಯಲ್ಲಿ ನೌಕರಿ…

ಸಿಲಿಕಾನ್ ಸಿಟಿಯಲ್ಲಿ ವರುಣ ಅಬ್ಬರಕ್ಕೆ ಬಲಿಯಾದ ನಾಲ್ವರ ಕುಟುಂಬಗಳಿಗೂ ಬಿಬಿಎಂಪಿಯಲ್ಲಿ ಯಾವುದಾದರೂ ನೌಕರಿ ನೀಡೋದಾಗಿ ಮೇಯರ್ ಪದ್ಮಾವತಿ ತಿಳಿಸಿದ್ದಾರೆ.. ಈಗಾಗಲೇ ನೌಕರಿ ನೀಡುವ ಬಗ್ಗೆ ಕಮಿಷನರ್ ಹಾಗೂ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಕೂಡಾ ಘೋಷಣೆ ಮಾಡಿದ್ದಾರೆ. ಹೀಗಾಗಿ ಸೋಮವಾರ ಮೃತರ ಕುಟುಂಬವನ್ನು ಮತ್ತೆ ಭೇಟಿ ಮಾಡುತ್ತೇವೆ. ಇದ್ರ ಜೊತೆಗೆ ಕುಟುಂಬಕ್ಕೆ 5 ಲಕ್ಷ ಪರಿಹಾರದ ಚೆಕ್​ನ್ನು ನೀಡುತ್ತೇವೆ ಎಂದ್ರು.. ಕಾರಿನ ಮೇಲೆ ಮರ ಬಿದ್ದು ಸಾವನ್ನಪ್ಪಿದ ಭಾರತಿ ಕುಟುಂಬಸ್ಥರ ಮನವೊಲಿಸಿದ ಮೇಯರ್, ಶೀಘ್ರ ಪರಿಹಾರ ನೀಡೋದಾಗಿ ಭರವಸೆ ನೀಡಿದ್ರು. ಬಳಿಕ ಕುಟುಂಬಸ್ಥರು ಶವ ಸಾಗಿಸಲು ಒಪ್ಪಿದ್ರು.

0

Leave a Reply

Your email address will not be published. Required fields are marked *