ಮೋಡಿಯ ಆಟ ಆಡಿದ ಮಯಾಂಕ್​,​ ಸಮರ್ಥ್​​

ಇಂದು ನಾಗ್ಪುರ್​ ಅಂಗಳದಲ್ಲಿ ನಡೆಯಲಿರುವ ಪ್ರಸಕ್ತ ಸಾಲಿನ ರಣಜಿ ಋತುವಿನ ಪಂದ್ಯದಲ್ಲಿ, ಮಾಜಿ ಚಾಂಪಿಯನ್​ ಕರ್ನಾಟಕ ಹಾಗೂ ದಾಖಲೆಯ ರಣಜಿ ಟ್ರೋಫಿ ಎತ್ತಿರುವ ಮುಂಬೈ ತಂಡಗಳು ಕಾದಾಟ ನಡೆಸಲಿವೆ. ಇನ್ನು ಕರ್ನಾಟಕ ತಂಡ ಲೀಗ್​ನಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದೊಂದಿಗೆ ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಇಟ್ಟಿದೆ. ಮುಂಬೈ ತಂಡ ಲೀಗ್​ನಲ್ಲಿ ನೀರಸ ಪ್ರದರ್ಶನ ನೀಡಿದೆ. ಸದ್ಯ ಕರ್ನಾಟಕ ತಂಡದ ಆಟಗಾರರು ಭರ್ಜರಿ ಲಯದಲ್ಲಿದ್ದಾರೆ. ವಿನಯ್​ ಪಡೆಯ ಬ್ಯಾಟ್ಸ್​​ಮನ್​ಗಳು ರನ್​ ಕೊಳ್ಳೆ ಹೊಡೆಯುತ್ತಿದ್ದಾರೆ.

ಆರಂಭಿಕ ಮಯಾಂಕ್​ ಅಗರ್​ವಾಲ್​ ಹಾಗೂ ಆರ್​ ಸಮರ್ಥ್​​ ಮೋಡಿಯ ಆಟ ಆಡ್ತಿದ್ದಾರೆ. ಮಯಾಂಕ್​ ಪ್ರಸಕ್ತ ವರ್ಷ ಎಲ್ಲರ ಚಿತ್ತ ಕದ್ದ ಆಟಗಾರ. ಬೌಂಡರಿ, ಸಿಕ್ಸರ್​ ಹಾಗೂ ಶತಕ ದಾಖಲಿಸಿ ಮಿಂಚ್ತಿದ್ದಾರೆ. ಅಲ್ಲದೆ ಪ್ರಸಕ್ತ ವರ್ಷ ಸಾವಿರ ರನ್​​ಗಳ ಸರದಾರ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಸಮರ್ಥ್​​, ಕರುಣ್​ ನಾಯರ್​, ಮನೀಶ್​ ಪಾಂಡೆ ಎದುರಾಳಿ ಯೋಜನೆಯನ್ನು ಬುಡಮೇಲು ಮಾಡುವ ತಾಕತ್ತು ಹೊಂದಿದ್ದಾರೆ. ಅಲ್ಲದೆ ಸಮಯೋಚಿತ ಬ್ಯಾಟಿಂಗ್ ಮಾಡುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಸ್ಟುವರ್ಟ್​​ ಬಿನ್ನಿ, ವಿನಯ್​ ಕುಮಾರ್, ಅಭಿಮನ್ಯು ಮಿಥುನ್​ ಶಿಸ್ತು ಬದ್ಧ ದಾಳಿಯ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಸ್ಪಿನ್​ ವಿಭಾಗದಲ್ಲಿ ಕೆ.ಗೌತಮ್​ ಹಾಗೂ ಶ್ರೇಯಸ್​ ಅಯ್ಯರ್​ ಫಿರ್ಕಿಯಿಂದ ಎದುರಾಳಿಗಳನ್ನು ಕಟ್ಟಿಹಾಕಬಲ್ಲರು.

ಮುಂಬೈ ರಣಜಿ ತಂಡ ನಂಬಿಕಸ್ಥ ಬ್ಯಾಟ್ಸ್​ಮನ್​ ಸಿದ್ಧಾರ್ಥ್​ ಲಾಡ್​. ಸಿದ್ಧಾರ್ಥ್​​ 6 ಪಂದ್ಯಗಳಲ್ಲಿ 2 ಶತಕ ಹಾಗೂ 3 ಅರ್ಧಶತಕಗಳ ಸಹಾಯದಿಂದ 613 ರನ್​ ಕಲೆ ಹಾಕಿದ್ದಾರೆ. ಇನ್ನು ಲೀಗ್​ ಪಂದ್ಯಗಳಲ್ಲಿ ಮಿಂಚಿದ್ದ ಪೃಥ್ವಿ ಶಾ ಅಂಡರ್​ 19 ವಿಶ್ವಕಪ್​​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಶ್ರೇಯಸ್​ ಅಯ್ಯರ್​, ಜಯ್​ ಬಿಸ್ತಾ, ನಾಯಕ ಆದಿತ್ಯ ತಾರೆ ರನ್​ ಕಲೆ ಹಾಕುತ್ತಿದ್ದು ತಂಡದ ಚಿಂತೆಯನ್ನು ದೂರ ಮಾಡಿದೆ. ಮುಂಬೈ ತಂಡಕ್ಕೆ ಬೌಲಿಂಗ್​ನಲ್ಲಿ ಅನುಭವಿ ವೇಗಿ ಧವಳ್​ ಕುಲಕರ್ಣಿ ಹಾಗೂ ಆಕಾಶ್​ ಎದುರಾಳಿಗಳನ್ನು ಕಾಡಬಲ್ಲರು. ಇನ್ನೊಂದು ಪಂದ್ಯದಲ್ಲಿ ಕೇರಳ, ವಿದರ್ಭ ಹಾಗೂ ದೆಹಲಿ- ಮಧ್ಯಪ್ರದೇಶ ಮತ್ತು ಗುಜರಾತ್​​- ಬೆಂಗಾಲ್​ ತಂಡಗಳು ಎಂಟರ ಘಟ್ಟದ ಪಂದ್ಯದಲ್ಲಿ ಕಾದಾಟ ನಡೆಸಲಿವೆ.

ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *