ಕರಾಟೆಗೂ ಸೈ, ಡ್ಯಾನ್ಸ್​​​ಗೂ ಸೈ ಎಂದ ಮೇಯರ್​​ ಕವಿತಾ

ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಬರೀ ಕರಾಟೆ ಕುಂಗ್ಫು ಮಾತ್ರ ಕಲಿತಿಲ್ಲ. ಜೊತೆಗೆ ಮ್ಯೂಸಿಕ್ ಹಾಕಿದ್ರೆ ಸಖತ್ ಸ್ಟೆಪ್ಸ್​​​ ಹಾಕಿ, ನಾನು ಕರಾಟೆಗೂ ಸೈ ಡ್ಯಾನ್ಸ್​​​ಗೂ ಸೈ ಎಂದು ತೋರಿಸಿಕೊಟ್ಟಿದ್ದಾರೆ.

ಭಾನುವಾರ ಮಂಗಳೂರಿನ ಮಂಗಳ ಸ್ಟೇಡಿಯಂನಲ್ಲಿ ನಡೆದ ಪಾಲಿಕೆ ಕ್ರೀಡಾಕೂಟದ ಸಂದರ್ಭದಲ್ಲಿ ಮೇಯರ್ ಕರಾವಳಿಯ ಫೇಮಸ್ ಸಂಗೀತಕ್ಕೆ ಹುಲಿ ವೇಷದ ಸ್ಟೆಪ್ಸ್ ಹಾಕ್ತಾ ಎಂಜಾಯ್ ಮಾಡಿದ್ರು. ಇನ್ನು ಮೇಯರ್ ಗೆ ನಾವೇನು ಕಮ್ಮಿ ಎಂಬಂತೆ ಪಾಲಿಕೆ ಮಹಿಳಾ ಸದಸ್ಯರೂ ಮಂಗಳೂರ್ದ ಜವನೆರಾ ಪಾಂಚಾಲಿ ಹಾಡಿಗೆ ಡ್ಯಾನ್ಸ್ ಮಾಡಿ ಸಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡ್ರು. ಮೇಯರ್ ಹಾಗೂ ಪಾಲಿಕೆ ಸದಸ್ಯರ ಡಾನ್ಸ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

0

Leave a Reply

Your email address will not be published. Required fields are marked *