ಹೆಂಗಳೆಯರ ಮೋಹಕ ಆ್ಯಂಟಿಕ್ ಜ್ಯುವೆಲ್ಲರಿ…

ಸಿಲಿಕಾನ್​ ಸಿಟಿಯಲ್ಲಿ ಒಂದಲ್ಲ ಒಂದು ವೇರೈಟಿ ಸೆಲೆಬ್ರೇಷನ್​ಗಳು ನಡೆದೆ ನಡೆಯುತ್ವೆ. ಇದ್ರಂತೆಯೇ ನಗರದಲ್ಲಿನ ಮಂಗಳೂರು ಜ್ಯೂವೆಲ್ಸ್​​ಗೆ​​​ ಒಂದು ವರ್ಷದ ಸಂಭ್ರಮ ಹಿನ್ನೆಲೆ, ಜ್ಯೂವೆಲ್​​ ಮಳಿಗೆಯಲ್ಲಿ ಫ್ಯಾಷನ್ ಶೋ ಆಯೋಜನೆ ಮಾಡೋ ಮೂಲಕ ಆಭರಣ ಪ್ರಿಯರನ್ನ ತನ್ನತ್ತ ಆಕರ್ಷಿಸಲಾಯ್ತು…ಹೀಗೆ ಎತ್ತ ನೋಡಿದ್ರೂ ಕಾಣ್ತಿರುವ ಡಿಫ್ರೆಂಟ್​..ಡಿಫ್ರೆಂಟ್​ ಜ್ಯೂವೆಲ್ಸ್​​.. ಯಾವುದನ್ನ ಕೊಂಡು ಕೊಳ್ಳಬೇಕು ಅನ್ನೋ ಕನ್ಫ್ಯೂಸ್​​ನಲ್ಲಿರೋ ಗ್ರಾಹಕರು..ಮತ್ತೊಂದೆಡೆ ಆಭರಣ ಧರಿಸಿ ರ್ಯಾಂಪ್​ ಮೇಲೆ ಹೆಜ್ಜೆ ಹಾಕ್ತಿರೋ ಮಾಡೆಲ್​ಗಳು…ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು, ಜೆ.ಪಿ. ನಗರದಲ್ಲಿರೋ ಮಂಗಳೂರು ಜುವೆಲ್ಸ್​​ನಲ್ಲಿ…

ಅಂದಹಾಗೇ ಒಂದು ವರ್ಷದ ಸಂತಸದಲ್ಲಿದ್ದ ಮಂಗಳೂರು ವಿಭಿನ್ನವಾಗಿ ಫ್ಯಾಷನ್ ಷೋ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮಾಡೆಲ್​ಗಳು ವೆರೈಟಿ ಆ್ಯಂಟಿಕ್ ಡಿಸೈನ್ಸ್ ಡೈಮಂಡ್ಸ್​​ ತೊಟ್ಟು ರ್ಯಾಂಪ್​ ಮೇಲೆ ಹೆಜ್ಜೆ ಹಾಕಿದ್ರು.ಒಟ್ನಲ್ಲಿ ವಿಕೆಂಡ್​​ ಮೂಡ್​​ನಲ್ಲಿದ್ದ ಸಿಲಿಕಾನ್​​ ಮಂದಿ ಇಲ್ಲಿಗೆ ಭೇಟಿ ಕೊಡುವ ಮೂಲಕ, ಮಸ್ತ್​​, ಮಸ್ತ್​ ಫ್ಯಾಷನ್ ಶೋವನ್ನ ಕಣ್ತುಂಬಿಕೊಂಡು, ತಮಗಿಷ್ಟವಾದ ಆಭರಣ ಖರೀದಿಸಿದ್ರು…
======
ಪ್ರಕಾಶ್ ಡಿ.ರಾಂಪೂರ್ ಸುದ್ದಿಟಿವಿ ಬೆಂಗಳೂರು
======

0

Leave a Reply

Your email address will not be published. Required fields are marked *