ಕರಾವಳಿ ರಕ್ಷಣೆಗೆ ‘ಹೋವರ್‌ ಕ್ರಾಫ್ಟ್‌’…

ದೇಶದಲ್ಲಿ ಭಯೋತ್ಪಾಧನಾ ಚಟುವಟಿಕೆ ಹೆಚ್ಚಾಗ್ತಿರೋ ಸಂದರ್ಭದಲ್ಲಿ ದೇಶ ರಕ್ಷಣೆಗೆ ಆದ್ಯತೆ ನೀಡಬೇಕಾಗುತ್ತೆ. ಅದ್ರಲ್ಲೂ ಸಮುದ್ರ ಮೂಲಕ ನುಗ್ಗುವ ಶತ್ರುಗಳ ಮೇಲೆ ಕಣ್ಣಿಡೋದು ಸುಲಭದ ಕೆಲಸವಲ್ಲ. ಈ ಕಾರಣಕ್ಕಾಗಿಯೇ ಹಗಲೂ ರಾತ್ರಿ ಕರಾವಳಿಯ ತೀರ ಪ್ರದೇಶದಲ್ಲಿ ಕಣ್ಗಾವಲಿಡಲು ಅತ್ಯಾಧುನಿಕ ನೌಕೆಗಳಿವೆ.ಭಾರತ ವಿಶ್ವದಲ್ಲೇ ಅತೀ ಉದ್ದದ ಸಮುದ್ರ ತೀರವನ್ನು ಹೊಂದಿದೆ. ಅದ್ರಲ್ಲೂ ಅರಬ್ಬೀ ಸಮುದ್ರವನ್ನು ಹೊಂದಿರೋ ನಮ್ಮ ಕರಾವಳಿ ತೀರದ ರಕ್ಷಣೆ ಕೂಡಾ ಸವಾಲಿನ ಸಂಗತಿ. ಆದ್ರೆ ಗಡಿ ಕಾಯೋ ಸೈನಿಕರಿಗೆ ಇಂತಹಾ ಸವಾಲಿನ ಸಂಗತಿಗೆ ಸಹಕಾರಿಯಾಗಿರುವುದು ಅತ್ಯಾಧುಕಿನ ನೌಕೆಗಳು. ಹೌದು ತಮ್ಮ ರಾಜ್ಯದ ಕರಾವಳಿಯ ತಟ ರಕ್ಷಣೆಯಲ್ಲಿ ಆಧುನಿಕ ಹೋವರ್ ಕ್ರಾಫ್ಟ್ ನೌಕೆಗಳ ಪಾತ್ರ ಬಹಳಷ್ಟಿದೆ. ನೀವು ನೋಡೋ ಈ ಹೋವರ್ ಕ್ರಾಫ್ಟ್ ನೌಕೆ ಇಂಡಿಯನ್ ಕೋಸ್ಟ್ ಗಾರ್ಡ್ ಗೆ ಸೇರಿದ ನೌಕೆ. ಮಂಗಳೂರಿನಲ್ಲಿ ಇಂತಹಾ ಎರಡು ಅತ್ಯಾಧುನಿಕ ಹೋವರ್ ಕ್ರಾಫ್ಟ್ ನೌಕೆಗಳಿವೆ. ಈ ನೌಕೆಗಳು ಸಾಕಷ್ಟು ವಿಶೇಷತೆಯನ್ನೂ ಹೊಂದಿವೆ. ಇವು ಸಮುದ್ರದಲ್ಲಿ ಮಿಂಚಿನ ವೇಗದಲ್ಲಿ ಚಲಿಸಬಲ್ಲವು. ಲಂಡನ್ ನಿರ್ಮಿತ ಏರ್ ಕುಶನ್ ಎಚ್. 196 ಹೋವರ್ ಕ್ರಾಫ್ಟ್ ಸಮುದ್ರದಲ್ಲಿ ಪ್ರತಿ ಗಂಟೆಗೆ 90 ಕಿಲೋ ಮೀಟರ್ ವೇಗದಲ್ಲಿ ಚಲಿಸೋ ಸಾಮರ್ಥ್ಯ ಹೊಂದಿದೆ.

ಇನ್ನು ಈ ಅತ್ಯಾಧುನಿಕ ಎಸಿವಿ ಐಸಿಜಿಎಸ್‌ ಎಚ್‌ – 196 ಹಾಗೂ ಎಚ್‌-198 ಹೋವರ್‌ಕ್ರಾಫ್ಟ್ ಗಳು 21 ಮೀಟರ್‌ ಉದ್ದವಿದೆ. ಅಲ್ದೆ 31 ಟನ್‌ ಭಾರವಿದೆ. ಗಂಟೆಗೆ 45 ನಾಟಿಕಲ್‌ ಮೈಲು ವೇಗದಲ್ಲಿ ಚಲಿಸಲಿದೆ. ಈ ಹೋವರ್ ಕ್ರಾಫ್ಟ್ ನಲ್ಲಿ ಇಬ್ಬರು ಅಧಿಕಾರಿಗಳು ಹಾಗೂ 11 ಸಿಬಂದಿಗಳು ಸೇರಿ ಒಟ್ಟು 13 ಮಂದಿ ಇರುತ್ತಾರೆ. ಇನ್ನು ಇದು ಅತ್ಯಾಧುನಿಕ ನೇವಿಗೇಶನ್‌ ಹಾಗೂ ಮಾಹಿತಿ ಸಾಧನಗಳನ್ನು ಹಾಗೂ ಮೀಡಿಯಂ ರೆಂಜ್‌ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಸಾಗರದಲ್ಲಿ ಕಣ್ಗಾವಲು, ಸಾಗರದಲ್ಲಿ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಶೋಧ ಹಾಗೂ ರಕ್ಷಣೆ ಮುಂತಾದ ಕಾರ್ಯಾಚರಣೆಗಳನ್ನು ನಡೆಸಲು ಶಕ್ತವಾಗಿವೆ. ಈ ಹೋವರ್‌ ಕ್ರಾಫ್ಟ್ ನ್ನ ಇಂಗ್ಲೆಂಡ್‌ನ‌ ಗ್ರಿಫೂನ್‌ಹೊವರ್‌ವರ್ಕ್ಸ್ ಲಿಮಟೆಡ್ ಸಂಸ್ಥೆ ನಿರ್ಮಿಸಿದೆ. ಸದ್ಯ ಎರಡು ಹೋವರ್ ಕ್ರಾಫ್ಟ್ ನೌಕೆಗಳು ಕರಾವಳಿಯ ಸಮುದ್ರ ತಟದ ರಕ್ಷಣೆ ಮಾಡ್ತಿದ್ದು ಶತ್ರುಗಳ ಮೇಲೆ ನಿಗಾ ಇಟ್ಟಿದೆ.ಕೇವಲ ತಟ ರಕ್ಷಣೆ ಅಲ್ದೆ ಅಪಾಯದಲ್ಲಿರೋ ಮೀನುಗಾರರ ರಕ್ಷಣೆಗೂ ಈ ಹೋವರ್ ಕ್ರಾಫ್ಟ್ ಕೆಲವೊಮ್ಮೆ ಧಾವಿಸುತ್ತೆ. ಇದರ ಮತ್ತೊಂದು ವಿಶೇಷತೆ ಅಂದರೆ ಇದು ಕೇವಲ ನೀರ ಮೇಲೆ ಸಂಚಾರ ಮಾಡೋದಷ್ಟೇ ಅಲ್ದೆ ಸಮುದ್ರ ತೀರದ ನೆಲದ ಮೇಲೂ ಸಂಚಾರ ಮಾಡೋ ಸಾಮರ್ಥ್ಯ ಹೊಂದಿದೆ.

ಇರ್ಷಾದ್ ಉಪ್ಪಿನಂಗಡಿ ಸುದ್ದಿ ಟಿವಿ ಮಂಗಳೂರು

0

Leave a Reply

Your email address will not be published. Required fields are marked *