ಪ್ರಧಾನಿ ಮೋದಿ ಕಾಳಿದಾಸನಂತೆ… ಮಮತಾ ಬ್ಯಾನರ್ಜಿ ವ್ಯಂಗ್ಯ

ಮೋದಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಅಂತ ಆಗ್ರಹಿಸಿದ್ದಾಯ್ತು..ನೋಟ್​ ಬ್ಯಾನ್​ ವಿರುದ್ಧ ಸಮರ ಸಾರಿ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ಮಾಡಿದ್ದೂ ಆಯ್ತು..ಇದೀಗ ದೀದಿ ತಮ್ಮ ಬತ್ತಳಿಕೆಯಿಂದ ಪ್ರಧಾನಿ ವಿರುದ್ಧ ಮತ್ತೆ ಹೊಸ ಬಾಣ ಹೂಡಿದ್ದಾರೆ. ಮೋದಿ ಒಂದು ರೀತಿ ಕಾಳಿದಾಸನ ರೀತಿ ತಾವು ಕುಳಿತಿರುವ ಮರದ ಟೊಂಗೆಯನ್ನು ತಾವೇ ಕಡಿದುಕೊಂಡಿದ್ದಾರೆ.ಮೋದಿ ಜಾಗದಲ್ಲಿ ಎಲ್​.ಕೆ.ಅಡ್ವಾಣಿ,ರಾಜ್​ನಾಥ್​ ಸಿಂಗ್​,ಅರುಣ್​ ಜೇಟ್ಲಿ ಯಾರಾದ್ರೂ ದೇಶವನ್ನು ಮುನ್ನಡೆಸಿದ್ರೆ ನನಗೆ ಅಭ್ಯಂತರವಿಲ್ಲ ಅಂತ ವೈಯಕ್ತಿಕವಾಗಿ ಮೋದಿಯನ್ನೇ ಮಮತಾ ಟಾರ್ಗೆಟ್​ ಮಾಡಿದ್ದಾರೆ. ಸದ್ಯ ದೇಶ ಇರುವ ಪರಿಸ್ಥಿತಿಯನ್ನು ನೋಡಿದ್ರೆ,ನಮ್ಮ ದೇಶ ರಕ್ಷಿಸಲು ರಾಷ್ಟ್ರಪತಿ ಆಳ್ವಿಕೆಯೇ ಜಾರಿಗೆ ಬರಬೇಕು ಅಂತ ಮಮತಾ ಆಗ್ರಹಿಸಿದ್ದಾರೆ.
ಇನ್ನು ನೋಟ್​ ಬ್ಯಾನ್​ ವಿಚಾರವಾಗಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ 1 ಕೋಟಿಗೂ ಹೆಚ್ಚು ಜನಕ್ಕೆ ನೋಟ್​ ಬ್ಯಾನ್​ ಪರಿಣಾಮ ಬೀರಿದೆ. 81.5 ಲಕ್ಷ ಜನ ಉದ್ಯೋಗ ವಂಚಿತರಾಗಿದ್ದಾರೆ ಎಂದಿದ್ದಾರೆ. ಇನ್ನೊಂದೆಡೆ ಕಳೆದೆರೆಡು ದಿನಗಳ ಹಿಂದೆ ತಮ್ಮ ಸರ್ಕಾರದ ಸಂಸದರ ಮೇಲೆ ಸಿಬಿಐ ದಾಳಿ ಮಾಡಿದ್ದನ್ನು ಖಂಡಿಸಿದ ದೀದಿ, ಮೋದಿ ನೇರವಾಗಿ ನನ್ನನ್ನೇ ಗುರಿಯಾಗಿಸಿ ಈ ದಾಳಿ ನಡೆಸಿದ್ದಾರೆ ಅಂತ ಆರೋಪಿಸಿದ್ದಾರೆ.

0

Leave a Reply

Your email address will not be published. Required fields are marked *