ಧೋನಿಯ ಲೈಫ್​ ಸ್ಟೈಲ್​ ಫುಲ್​ ಬಿಂದಾಸ್…!

 ಮಹೇಂದ್ರ ಸಿಂಗ್ ಧೋನಿಗೆ ಕ್ರಿಕೆಟ್ ಎಲ್ಲವನ್ನು ಕೊಟ್ಟಿದೆ. ಎಲ್ಲವೂ ಬಯಸದೇ ಬಂದ ಭಾಗ್ಯ. ಅದನ್ನೆಲ್ಲಾ ಧೋನಿ ಸಮರ್ಥವಾಗಿ ಸದುಪಯೋಗಪಡಿಸಿಕೊಂಡಿದ್ದಾರೆ. ಯಶಸ್ಸಿನ ಉತ್ತುಗಕ್ಕೆರಿದ ಧೋನಿಗೆ ನೇಮ್, ಫೇಮ್, ದುಡ್ಡು ಎಲ್ಲವೂ ಸಿಕ್ಕಿದೆ. ಲೈಫ್ ಅನ್ನು ಬಿಂದಾಸ್ ಆಗಿ ಎಂಜಾಯ್ ಮಾಡುವ ಧೋನಿಗೆ ಅತೀಯಾದ ಆಸೆ ಇಲ್ಲ. ಈ ನಿಟ್ಟಿನಲ್ಲಿ ಧೋನಿ ಇತರೆ ಕ್ರಿಕೆಟಿಗರಿಗಿಂತ ಭಿನ್ನ , ವಿಭಿನ್ನ . ರಾಂಚಿ ರಾಂಬೋ ಎಂಬ ಅಡ್ಡ ಹೆಸರಿಗೆ ತಕ್ಕಂತೆ ಧೋನಿ ವಿಭಿನ್ನ ಹವ್ಯಾಸವನ್ನ ಹೊಂದಿದ್ದಾರೆ.

ಹೌದು, ಧೋನಿಯ ಸ್ಟೈಲ್ಲೇ ಬೇರೆ.. ಲುಕ್ಕೇ ಬೇರೆ… ಎಲ್ಲವೂ ಡಿಫರೆಂಟ್.. ಅದಕ್ಕಾಗಿಯೇ ಎಮ್. ಎಸ್. ಧೋನಿ ಎಲ್ರಿಗೂ ಇಷ್ಟ. ಧೋನಿಗೆ ಬೈಕ್ ಅಂದ್ರೆ ಪಂಚ ಪ್ರಾಣ.. ಹೊಸ ಬೈಕ್ ಗಳ ಮೇಲೆ ಜಾಲಿ ರೈಡ್ ಮಾಡೋದು ಅಂದ್ರೆ ಏನೋ ಒಂಥರಾ ಖುಷಿ. ಹಾಗೇ, ಬೈಕ್ ಗಳ ಸಂಗ್ರಹದಲ್ಲೂ ಮಾಹಿ ಒಂದು ಹೆಜ್ಜೆ ಮುಂದು. ಈಗಾಗಲೇ ಈ ಕೂಲ್ ಕ್ಯಾಪ್ಟನ್ ಮನೆಯಲ್ಲಿ 40 ಕ್ಕೂ ಹೆಚ್ಚು ಬೈಕ್ ಗಳು ಸಾಲಾಗಿ ನಿಂತಿವೆ. ಇದ್ರಲ್ಲಿ ಯಮಹಾ, ಟಿವಿಎಸ್, ಹಾರ್ಲಿ ಡೇವಿಡ್ಸ್ನ್ ಬೈಕ್ಗಳು ಕೂಡ ಸೇರಿಕೊಂಡಿವೆ. ಬಿಡುವಿನ ವೇಳೆಯಲ್ಲಿ ಬೈಕ್ ಏರಿ ನೂರಾರು ಕಿಲೋ ಮೀಟರ್ ಸವಾರಿ ನಡೆಸುವುದು ಧೋನಿಯ ಹಾಬಿ. ವಿದೇಶಿ ಪ್ರವಾಸದ ವೇಳೆ ಬೈಕ್​ಗಳ ಬಿಡಿ ಭಾಗಗಳನ್ನ ಪರ್ಚೆಸ್ ಮಾಡಿ ತನ್ನ ಬೈಕ್​ಗಳನ್ನು ಶೃಂಗಾರ ಕೂಡ ಮಾಡ್ತಾರೆ. ಅಷ್ಟೇ ಅಲ್ಲ, ಪಂದ್ಯಗಳಲ್ಲಿ ಬಹುಮಾನವಾಗಿ ಯಾರೇ ಬೈಕ್ ಗೆದ್ರೂ ಅದನ್ನು ಮೊದಲು ಓಡಿಸುವುದು ಧೋನಿಯೇ…

ಇನ್ನು, ಧೋನಿ ಟೀಮ್ ಇಂಡಿಯಾಗೆ ಎಂಟ್ರಿಯಾದಾಗ ಹೆಚ್ಚು ಗಮನ ಸೆಳೆದದ್ದು ತನ್ನ ಉದ್ದನೆಯ ಕೂದಲಿನಿಂದ. ಧೋನಿಯ ಹೇರ್ ಸ್ಟೈಲ್ಗೆ ಯುವತಿಯರು ಕ್ಲೀನ್ ಬೌಲ್ಡಾದ್ರೆ, ಯುವಕರು ಧೋನಿಯ ಹೇರ್ ಸ್ಟೈಲ್ ಅನ್ನೇ ಅನುಕರಣೆ ಮಾಡಿದ್ರು. ಅಷ್ಟೇ ಯಾಕೆ, ಪಾಕ್​ ಮಾಜಿ ಅಧ್ಯಕ್ಷ ಪರ್ವೇಜ್ ಮುಶ್ರರಫ್ ಕೂಡ ಧೋನಿಯ ಹೇರ್ ಸ್ಟೈಲ್ಗೆ ಕಾಂಪ್ಲಿಮೆಂಟರಿ ನೀಡಿದ್ರು. ಆದ್ರೆ ಧೋನಿಗೆ ಈ ಉದ್ದ ಕೂದಲು ಯಾಕೋ ಬೋರ್ ಹೊಡಿಸಿತ್ತು ಅನ್ಸುತ್ತೆ. ಅದ್ರಲ್ಲೂ ಟ್ವೆಂಟಿ ಟ್ವೆಂಟಿ ವಿಶ್ವಕಪ್ ಗೆದ್ದ ನಂತ್ರ ಧೋನಿ ತನ್ನ ಕೂದಲಿಗೆ ಕತ್ತರಿ ಹಾಕಿದ್ರು. ಟ್ರಿಮ್ ಮಾಡ್ಕೊಂಡ ಧೋನಿ ಮದುವೆಯ ಸಮಯದಲ್ಲೂ ಕೂದಲಿನ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಆದ್ರೂ ಆಗಾಗ ಮಾಹಿ ತನ್ನ ಹೇರ್ ಸ್ಟೈಲ್ ಅನ್ನು ಚೆಂಚ್ ಮಾಡ್ತಾನೇ ಇರ್ತಾರೆ.

ಇನ್ನೊಂದೆಡೆ, ಧೋನಿಗೆ ದೇವ್ರ ಮೇಲೆ ಅಪಾರ ಭಕ್ತಿ. ಹಾಗೇ ದೇವಿಯ ಆರಾಧಕರು ಹೌದು. ಬಿಡುವಿನ ವೇಳೆಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್​ಗಳಿಗೆ ಭೇಟಿ ನೀಡ್ತಾರೆ. ಹಾಗೇ ಬಿಡುವಿನ ವೇಳೆಯಲ್ಲಿ ಅಡುಗೆ ಮಾಡಿಕೊಂಡು ತನಗೆ ಇಷ್ಟವಾದ ತಿಂಡಿಗಳನ್ನು ಮಾಡಿ ತಿಂತಾರೆ. ಇದೀಗ ಪುಟಾಣಿ ಮಗಳ ಹಾಯಾಗಿ ಕಾಲ ಕೂಡ ಕಳೆಯುತ್ತಾರೆ. ಮಗಳ ತೊದಳು ನುಡಿಯನ್ನು ಕೇಳಿಸಿಕೊಂಡು ಒಬ್ಬ ಅಪ್ಪನಾಗಿ ನಾನು ನನ್ನ ಕನಸು ಅನ್ನೋ ಮಾದರಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಜಾಹೀರಾತು ಲೋಕದ ಕಣ್ಮಣಿ

ಆಟದಿಂದಲೇ ಜನಪ್ರಿಯತೆಯ ಉತ್ತುಂಗಕ್ಕೇರಿದ ಎಮ್. ಎಸ್.ಧೋನಿ ಜಾಹಿರಾತು ಪ್ರಪಂಚದ ಕಣ್ಮಣಿ. ಪೆಪ್ಸಿ, ಏರ್ ಸೆಲ್, ರಿಲಯಾನ್ಸ್, ಬೂಸ್ಟ್ , ವಿಡಿಯೋಕಾನ್, ಟಿವಿಎಸ್ ಸೇರಿದಂತೆ ಪ್ರತಿಷ್ಠಿತ ಕಂಪೆನಿಗಳಿಗೆ ಈ ಕೂಲ್ ಕ್ಯಾಪ್ಟನ್ ಬ್ರಾಂಡ್ ಅಂಬಾಸಿಡರ್. ಹಾಗೇ ಟಿವಿಎಸ್ ಜಾಹಿರಾತಿನಲ್ಲಿ ಧೋನಿ ಪತ್ನಿ ಸಾಕ್ಷಿ ಜತೆ ಕೂಡ ಕಾಣಿಸಿಕೊಂಡ್ರು. ಹೀಗೆ ಬಿಂದಾಸ್ ಆಗಿರುವ ಧೋನಿ ನಟನೆಯಲ್ಲೂ ಮುಂದಿದ್ದಾರೆ. ಮತ್ತೊಂದೆಡೆ, ಧೋನಿ ಸಾಹಸ ಕ್ರೀಡೆಗಳನ್ನ ಇಷ್ಟಪಡುತ್ತಾರೆ. ಕುದುರೆ ಸವಾರಿ ಮಾಡ್ತಾರೆ. ಮಿಲಿಟರಿ ಕ್ಯಾಂಪ್​ಗಳಿಗೆ ಭೇಟಿ ನೀಡ್ತಾರೆ. ಸೈನಿಕರನ್ನ ಭೇಟಿ ಮಾಡಿ ಅವ್ರ ಜತೆ ಕಾಲ ಕಳೆಯುತ್ತಾರೆ. ಜತೆಗೆ ತನ್ನ ನೆಚ್ಚಿನ ಅಭಿಮಾನಿಯ ಮನೆಗೆ ಹೋಗಿ ಅಡುಗೆ ಮಾಡಿ, ಗಲ್ಲಿ ಕ್ರಿಕೆಟ್ ಕೂಡ ಆಡ್ತಾರೆ.

0

Leave a Reply

Your email address will not be published. Required fields are marked *