ಇಂದು ದೇಶದಾದ್ಯಂತ ಮಹಾತ್ಮ ಗಾಂಧಿ 148ನೇ ಜಯಂತಿ…

ನಗರದ ರಾಜ ಭವನದಲ್ಲಿ ನಿನ್ನೆ ಸಂಜೆ ಗಾಂಧಿ ಜಯಂತಿ-ಅಹಿಂಸಾ ಮಹೋತ್ಸವ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು… ಶ್ರೀಲಂಕಾ, ನೇಪಾಳ ಮತ್ತು ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಶಾಂತಿ ಸಾರುವ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದ್ರು.ಮಹಾತ್ಮ ಗಾಂಧಿಜಿ ನಮ್ಮ ರಾಷ್ಟ್ರಕ್ಕೆ ಶಾಂತಿ ರೂಪದಲ್ಲೇ ಸ್ವಾತಂತ್ರವನ್ನ ತಂದುಕೊಟ್ಟ ಮಹಾನ್ ವ್ಯಕ್ತಿ.. ನಾಳೆ ಆ ಮಹಾನ್ ವ್ಯಕ್ತಿಯ 148ನೇ ಜನ್ಮದಿನಾಚರಣೆ.. ಈ ಹಿನ್ನೆಲೆಯಲ್ಲಿ ನಗರದ ರಾಜಭವನದಲ್ಲಿ ಇಂದು ಸಂಜೆ ಮಹಾತ್ಮ ಗಾಂಧಿ ಜಯಂತಿ ಹಾಗು ಅಂತರಾಷ್ಟ್ರೀಯ ಅಹಿಂಸಾ ದಿನಾಚರಣೆಯನ್ನ ಹಮ್ಮಿಕೊಳ್ಳಲಾಗಿತ್ತು.

ರಾಜ್ಯಪಾಲ ವಜುಭಾಯಿವಾಲ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದ್ರು. ಈ ವೇಳೆ ಕೊಳದ ಮಠದ ಮಠಾಧಿಪತಿ ಶಾಮತವೀರ ಮಹಾ ಸ್ವಾಮಿಜಿ, ಗುರುಸಿಂಗ್ ಸಭಾಧ್ಯಕ್ಷ ಪ್ರಬ್ಜೋತ್ ಸಿಂಗ್, ಮಹಾಬೋಧಿ ಸೊಸೈಟಿಯ ಆನಂದ್ ಭಂತೇಜಿ ಸೇರಿದಂತೆ ಇನ್ನಿತರ ಧರ್ಮಗುರುಗಳು ಭಾಗಿಯಾಗಿದ್ರು.. ಇನ್ನು ಮುಖ್ಯ ಅಥಿತಿಗಳಾಗಿ ಸಭಾಪತಿ ಡಿ.ಎಚ್ ಶಂಕರ್ ಮೂರ್ತಿ, ಗೃಹ ಸಚಿವ ರಾಮಲಿಂಗಾರೆಡ್ಡಿ, ಕೆ.ಬಿ ಕೋಳಿವಾಡ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡಿದ್ರು.

ಇನ್ನು ಈ ನೃತ್ಯ ಹಾಗೂ ಗೀತ ನಮನ ಸಮಾರಂಭದಲ್ಲಿ ಧರ್ಮ ಗುರುಗಳು ಶಾಂತಿ ಸಂದೇಶ ಸಾರಿದರು. ಅಲ್ಲದೇ ಕಾರ್ಯಕ್ರಮಕ್ಕೆ ಬಂದಿದ್ದ ವಿವಿಧ ದೇಶದ ವಿದ್ಯಾರ್ಥಿಗಳು ನೃತ್ಯ ಹಾಗೂ ಗೀತೆಗಳ ಮೂಲಕ ಗಾಂಧೀಜಿಯವರಿಗೆ ನಮನ ಸಲ್ಲಿಸಿದ್ರು.ಒಟ್ಟಾರೆ.. ಇಂದು ರಾಜಭವನದ ಗಾಜಿನ ಮನೆ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿತ್ತು. ನೆರೆದಿದ್ದ ಗಾಂಧಿ ಪ್ರಿಯರನ್ನು ಕೊಂಚ ಕಾಲ ಮನರಂಜನೆಗೊಳಿಸಿತು.

ಮಂಜುನಾಥ್ ಹೊಸಹಳ್ಳಿ ಸುದ್ದಿಟಿವಿ ಬೆಂಗಳೂರು.

0

Leave a Reply

Your email address will not be published. Required fields are marked *