ರೈತರ ಹೋರಾಟಕ್ಕೆ ಬೆಚ್ಚಿ ಬಿದ್ದ ಮಹಾ ಸರ್ಕಾರ…

ಕಳೆದ 7 ದಿನಗಳಿಂದ ಮಹಾರಾಷ್ಟ್ರದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ರೈತರ ಪ್ರತಿಭಟನೆ ಇಂದು ಮುಂಬೈಗೆ ಲಗ್ಗೆ ಇಟ್ಟಿತ್ತು..ಮಂಗಳವಾರ ನಾಸಿಕದಿಂದ ಪ್ರಾರಂಭವಾದ ರೈತರ ಪಾದಯಾತ್ರೆ ಇಂದು ಮುಂಬೈನಲ್ಲಿ ಅಂತ್ಯವಾಯ್ತು..ಕೊನೆಗೂ ಅನ್ನದಾತರ ಪ್ರತಿಭಟನೆಗೆ ಮಣಿದ ಮಹಾ ಸರ್ಕಾರ ರೈತರ ಭಾಗಶಃ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ಸೂಚಿಸಿದೆ..ರೈತರ ನಿಯೋಗ ಮಹಾರಾಷ್ಟ್ರ ಸರ್ಕಾರದ ಪ್ರತಿನಿಧಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿತು..ಈ ವೇಳೆ ಮಹಾರಾಷ್ಟ್ರ ಸರ್ಕಾರ ರೈತರ ಬೇಡಿಕೆಗಳಲ್ಲಿ ಒಂದಾದ ಅರಣ್ಯ ಭೂಮಿಯನ್ನು ರೈತರಿಗೆ ನೀಡಲು ಒಪ್ಪಿಗೆ ಸೂಚಿಸಿದ್ದು,6 ತಿಂಗಳ ಕಾಲಾವಕಾಶ ಕೇಳಿದೆ..ಹಾಗೆ ರೈತರ ಸಾಲಮನ್ನಾದ ಬಗ್ಗೆಯೂ ಗಮನಹರಿಸಿರುವ ಮಹಾರಾಷ್ಟ್ರ ಸರ್ಕಾರ ಸಾಲಮನ್ನಾದ ಬಗ್ಗೆಯೂ ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ.ಬರವಣಿಗೆ ಮೂಲಕ ಆಶ್ವಾಸನೆ ನೀಡಿದೆ..ಸರ್ಕಾರ ಈ ಭರವಸೆ ನೀಡಿದ ಬಳಿಕ ರೈತರು ತಮ್ಮ ಪ್ರತಿಭಟನೆ ಕೈ ಬಿಟ್ಟಿದ್ದಾರೆ..ಈ ಮೂಲಕ ದೇಶದ ಬೆನ್ನೆಲುಬು ರೈತರ ಕೂಗಿಗೆ ಬೆಲೆ ಸಿಕ್ಕಂತಾಗಿದೆ..ಇಷ್ಟೆಲ್ಲಾ ದಿನಗಳ ಬಳಿಕ ಮಹಾರಾಷ್ಟ್ರ ಸರ್ಕಾರ ಎಚ್ಚೆತ್ತುಕೊಂಡಿರುವುದಕ್ಕೆ ಮೈತ್ರಿ ಪಕ್ಷ ಶಿವಸೇನೆ ಸೇರಿದಂತೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

0

Leave a Reply

Your email address will not be published. Required fields are marked *