ಮಾಗಡಿ ರೋಡ್​ ಅಂಡರ್ ಪಾಸ್ ಉದ್ಘಾಟನೆಗೆ ಸಿದ್ಧ..

ಕಡೆಗೂ ಮಾಗಡಿ ರಸ್ತೆ ಕೆಳಸೇತುವೆ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಕಾಮಗಾರಿ ಅಂತಿಮ ಹಂತ ತಲುಪಿದ್ದು ಇದೇ 22 ನೇ ತಾರೀಕಿಗೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.ರಾಜಾಜಿನಗರ ಹೌಸಿಂಗ್ ಬೋರ್ಡ್​ ಬಳಿಯ ಮಾಗಡಿ ರೋಡ್​ ಕೆಳಸೇತುವೆ ಉದ್ಘಾಟನೆಗೆ ಸಿದ್ಧವಾಗಿದೆ. ರಸ್ತೆ ಕಾಮಗಾರಿ ಮುಗಿದಿದ್ದು, ಪೈಂಟಿಂಗ್ ಕೆಲಸ ಕೂಡಾ ಮುಗಿದಿದೆ. ಇದೀಗ ರಸ್ತೆ ವಿಭಜಕ ಹಾಗೂ ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯ ನಡೀತಿದ್ದು ಇನ್ನೇನು ನಾಲ್ಕೈದು ದಿನದೊಳಗೆ ಪೂರ್ಣಗೊಳ್ಳಲಿದೆ. ಅಂಡರ್​ಪಾಸ್ ನಿರ್ಮಾಣದ ವೇಳೆ ಬಂಡೆಕಲ್ಲು ಅಡ್ಡ ಬಂದಿದ್ದರಿಂದ ಕಾಮಗಾರಿ ವಿಳಂಬವಾಗಿತ್ತು. ಇನ್ನೇನು ಎಲ್ಲಾ ಕಾಮಗಾರಿ ಮುಗಿದಿದ್ದು, ಇದೇ ತಿಂಗಳ 22 ರಂದು ಮಾಗಡಿ ರಸ್ತೆ ಅಂಡರ್​ಪಾಸ್​ ಮುಖ್ಯಮಂತ್ರಿ ಸಿದ್ಧರಾಮಯ್ಯರಿಂದ ಲೋಕಾರ್ಪಣೆಗೊಳ್ತಿದೆ ಅಂತ ಮೇಯರ್ ಜಿ ಪದ್ಮಾವತಿ ತಿಳಿಸಿದ್ರು.

ನೂತನವಾಗಿ 24.76 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೋ ನಾಲ್ಕು ಪಥದ ಮಾಗಡಿ ರಸ್ತೆ ಅಂಡರ್​ಪಾಸ್, 60 ಅಡಿ ಉದ್ದ, 15 ಅಡಿ ಆಳ ಹಾಗೂ 50 ಅಡಿ ಅಗಲವಿದೆ. ​ಈ ಅಂಡರ್​ ಪಾಸ್​ ಮುಖಾಂತರ ಮಾಗಡಿ ರೋಡ್ ಮೇನ್ ಕಾರಿಡಾರ್​ನ ಎಲ್ಲಾ ವಾಹನಗಳು ಚಲಿಸಲಿವೆ. ಅಂದ್ರೆ ಈಗಿರೋ ಟ್ರಾಫಿಕ್​ ಫ್ಲೋನ ಶೇಕಡಾ 85 ವಾಹನಗಳು ಅಂಡರ್​ಪಾಸ್​ ಮೂಲಕ ಸಿಗ್ನಲ್​ ಫ್ರೀಯಾಗಿ ಚಲಿಸಲಿವೆ. ಇದ್ರಿಂದ ಮೆಜೆಸ್ಟಿಕ್​ನಿಂದ ಮಾಗಡಿ ರಸ್ತೆಯಲ್ಲಿ ಚಲಿಸುವ ವಾಹನಗಳು ಹಾಗೂ ಮೈಸೂರು ರಸ್ತೆ ಕಡೆಗೆ ಚಲಿಸುವ ವಾಹನಗಳಿಗೆ ಬಿಗ್​ ರಿಲೀಫ್​ ಸಿಕ್ಕಲಿದೆ. ಇನ್ನು ಎಮ್​ ಸಿ ಲೇಔಟ್ ಹಾಗೂ ಬಸವೇಶ್ವರ ನಗರ ಭಾಗದ ವಾಹನಗಳು ಈ ಅಂಡರ್​ ಪಾಸ್​ ಮೇಲಿನ ಡೆಕ್​ನಲ್ಲಿ ಚಲಿಸಲಿದೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಟ್ನಲ್ಲಿ ಆಮೆಗತಿಯಲ್ಲಿ ಸಾಗುತ್ತಿದ್ದ ಅಂಡರ್​ಪಾಸ್​ ಕಾಮಗಾರಿಯಿಂದ ಬೇಸತ್ತಿದ್ದ ವಾಹನ ಸವಾರರಿಗೆ ಇನ್ನು ಹತ್ತೇ ದಿನದಲ್ಲಿ ಸಂಚಾರ ದಟ್ಟಣೆ ಕಿರಿಕಿರಿ ತಪ್ಪಲಿದೆ..

ಸೌಮ್ಯಶ್ರೀ, ಸುದ್ದಿ ಟಿವಿ, ಬೆಂಗಳೂರು

0

Leave a Reply

Your email address will not be published. Required fields are marked *