ರಾಂಚಿ ರ‍್ಯಾಂಬೋ ಮನೆಯಲ್ಲಿ ಏನ್ ಮಾಡ್ತಿದ್ದಾರೆ ಗೊತ್ತಾ..?

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಹಾಗೂ ಟಿ-20 ಸರಣಿ ಮುಗಿದ ಮೇಲೆ ತವರಿಗೆ ತೆರಳಿದ್ದು ಎಲ್ಲರಿಗೂ ಗೊತ್ತೇ ಇದೆ. ಆದ್ರೇ, ಮಾಹಿ ಸದ್ಯ ಮನೆಯಲ್ಲಿ ಏನ್ ಮಾಡ್ತಿದ್ದಾರೆ ಎಂಬುದಕ್ಕೆ ಸ್ವತಃ ಧೋನಿಯೇ ಇನ್ಸಸ್ಟ್ರಾಗ್ರಾಮ್ ಮೂಲಕ ಉತ್ತರ ಕೊಟ್ಟಿದ್ದಾರೆ.

ಮಾಹಿ ಟೀಮ್ ಇಂಡಿಯಾ ಕ್ಯಾಪ್ಟನ್ ಶಿಪ್​ಗೆ ಗುಡ್​ ಬೈ ಹೇಳಿದ ಮೇಲೆ ಸಖತ್ ರಿಲೀಫ್ ಆಗಿದ್ದಾರೆ. ತಮ್ಮ ಖಾಸಗಿ ಜೀವನವನ್ನ ಎಂಜಾಯ್ ಮಾಡ್ತಿದ್ದಾರೆ. ಧೋನಿಗೆ ಬೈಕ್, ಕಾರ್ ಕ್ರೇಜ್ ಜೊತೆಗೆ ನಾಯಿಗಳಂದ್ರೆ ಎಲ್ಲಿಲ್ಲದ ಪ್ರೀತಿ.

ಈ ಹಿಂದೆ ಕ್ರಿಕೆಟ್ ಮೈದಾನದಲ್ಲಿ ಸೆಕ್ಯೂರಿಟಿ ಡಾಗ್​ಗಳ ಜೊತೆ ಸಮಯ ಕಳೆಯುತ್ತಿದ್ದ ಮಾಹಿ, ನಾಯಿಗಳ ಜೊತೆ ಸಖತ್ ಎಂಜಾಯ್ ಮಾಡಿದ್ರು. ಅಲ್ದೆ, ನಾಯಿಗಳ ಮೇಲೆ ಅಪಾರ ಪ್ರೀತಿ ಇರೋ ಧೋನಿ, ತಮ್ಮ ಮನೆಯಲ್ಲೂ ಕೂಡ ಹಲವಾರು ನಾಯಿಗಳನ್ನ ಸಾಕಿದ್ದಾರೆ. ಈ ಹಿಂದೆ ಧೋನಿ ಮನೆಯಲ್ಲಿ ನಾಯಿಗಳಿಗೆ ಬೌಲ್ ಹಿಡಿಯೋದನ್ನ ಹೇಳಕೊಡ್ತಿರೋ ವಿಡಿಯೋಂದನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡಿದ್ರು. ಆದ್ರೀಗ, ಕಿವೀಸ್ ಸರಣಿ ಬಳಿಕ ಮನೆಯಲ್ಲೇ ರಿಲ್ಯಾಕ್ಸ್ ಮಾಡ್ತಿರೋ ಎಂಎಸ್​ಡಿ ನಾಯಿಗಳಿಗೆ ಸ್ಟಂಟ್ ಮಾಡೋದನ್ನ ಪ್ರಾಕ್ಟೀಸ್ ಮಾಡ್ತಿದ್ದಾರೆ.

ಸದ್ಯಕ್ಕೆ ರಿಲ್ಯಾಕ್ಸ್ ಮೂಡ್​​​​ನಲ್ಲಿರೋ ಧೋನಿ, ಸದ್ಯ ಶ್ರೀಲಂಕಾ ಏಕದಿನ ಸರಣಿಗೂ ಮುನ್ನ ಸಖತ್ ಎಂಜಾಯ್ ಮಾಡ್ತಿದ್ದಾರೆ. ಅಲ್ದೆ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನ ತೊಡಗಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

ಶಿವಕುಮಾರ್, ಕೆ ಸ್ಪೋರ್ಟ್ಸ್ ಬ್ಯೂರೋ ಸುದ್ದಿಟಿವಿ

0

Leave a Reply

Your email address will not be published. Required fields are marked *