36 ವರ್ಷಗಳ ಬಳಿಕ ಕೌತುಕಮಯವಾಗಲಿದೆ ಚಂದ್ರಗ್ರಹಣ

ಬರೋಬ್ಬರಿ 36 ವರ್ಷಗಳ ನಂತರ ಭಾರತದಲ್ಲಿ ಇಂದು ಮತ್ತೊಂದು ಖಗೋಳ ಕೌತುಕಕ್ಕೆ ಸಾಕ್ಷಿಯಾಗ್ತಿದೆ. 1982 ರಲ್ಲಿ ಗೋಚರಗೊಂಡಿದ್ದ ಸಂಪೂರ್ಣ ಚಂದ್ರಗ್ರಹಣ ಮತ್ತೊಮ್ಮೆ ಗೋಚರಿಸಲಿದೆ. ಸಂಜೆ 5.18ರ ಸುಮಾರಿಗೆ ಗೋಚರಿಸುವ ಸಂಪೂರ್ಣ ಚಂದ್ರಗ್ರಹಣ ವಿಶೇಷವಾಗಿದ್ದು, ರಕ್ತ ಕೆಂಪು ಬಣ್ಣದಲ್ಲಿ ಚಂದ್ರ ಕಾಣಿಸಿಕೊಳ್ಳಲಿದ್ದಾನೆ. ಈ ಬಾರಿಯ ಚಂದ್ರಗ್ರಹಣ ಮೂರು ಹಂತಗಳಲ್ಲಿ ಗೋಚರವಾಗಲಿದ್ದು, ನಗರದ ನೆಹರು ತಾರಾಲಯದಲ್ಲಿ ಚಂದ್ರಗ್ರಹಣ ವೀಕ್ಷಣೆಗೆ ನಾಳೆ ಸಂಜೆ 6.30ಕ್ಕೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಬಾರಿಯ ಸಂಪೂರ್ಣ ಚಂದ್ರಗ್ರಹಣ ಪ್ರಕ್ರಿಯೆ ಒಂದು ಗಂಟೆಗೂ ಅಧಿಕ ಸಮಯದಲ್ಲಿ ನಡೆಯಲಿದೆ.. ಸಂಜೆ 5.18ಕ್ಕೆ ಚಂದ್ರ ಭೂಮಿಯ ದಟ್ಟವಾದ ನೆರಳನ್ನು ಪ್ರವೇಶಿಸಲಿದ್ದು, ಉದಯ ಕಾಲದಲ್ಲಿಯೇ ಚಂದ್ರ ಗ್ರಹಣ ಗ್ರಸ್ಥವಾಗಿರುತ್ತಾನೆ. ಈ ಸಮಯದಲ್ಲಿ ಚಂದ್ರ ಕೆಂಪು ಬಣ್ಣದಲ್ಲಿ ಕಂಗೊಳಿಸುವ ಕಾರಣ ಇದನ್ನು ಬ್ಲಡ್​ ಮೂನ್​ ಅಂತನೂ ಕರೆಯಲಾಗುತ್ತೆ. ಅಲ್ಲದೇ ಒಂದೇ ತಿಂಗಳಲ್ಲಿ ಈ ಬಾರಿ ಎರಡೆರೆಡು ಬಾರಿ ಗ್ರಹಣ ಸಂಭವಿಸುತ್ತಿರುವ ಕಾರಣ ಬ್ಲೂ ಮೂನ್​ ಎಂದು ಕರೆಯಬಹುದಾಗಿದೆ.ಚಂದ್ರಗ್ರಹಣ ಇಂದು ಸಂಜೆ 5.18ಕ್ಕೆ ಆರಂಭವಾದರೂ ಬೆಂಗಳೂರಿನಲ್ಲಿ ಚಂದ್ರಗ್ರಹಣ ಸಂಜೆ 6.15ಕ್ಕೆ, ಮಂಗಳೂರಿನಲ್ಲಿ 6.27ಕ್ಕೆ, ಮೈಸೂರಿನಲ್ಲಿ 6.20ಕ್ಕೆ, ಧಾರವಾಡದಲ್ಲಿ 6.22ಕ್ಕೆ ಬಾಗಲಕೋಟೆಯಲ್ಲಿ 6.18ಕ್ಕೆ ಹಾಗೂ ಗುಲ್ಬರ್ಗದಲ್ಲಿ 6.12ಕ್ಕೆ ಚಂದ್ರಗ್ರಹಣ ಗೋಚರಿಸಲಿದೆ. ಸುಮಾರು ರಾತ್ರಿ 9.38ರ ಹೊತ್ತಿಗೆ ಸಂಪೂರ್ಣ ಗ್ರಹಣ ಅಂತ್ಯವಾಗಲಿದ್ದು, ಈ ವೇಳೆ ಚಂದ್ರ ತಾಮ್ರ ಬಣ್ಣಕ್ಕೆ ತಿರುಗಲಿದ್ದಾನೆ.

0

Leave a Reply

Your email address will not be published. Required fields are marked *