ಹಲವು ದೇಗುಲಗಳಿಗೆ ತಟ್ಟಿದ ಖಗ್ರಾಸ ಚಂದ್ರಗ್ರಹಣ…

ಇವತ್ತು ಖಗ್ರಾಸ ಚಂದ್ರಗ್ರಹಣ.. ಈ ಹಿನ್ನೆಲೆ ಇವತ್ತು ಎಲ್ಲೆಡೆ ಗ್ರಹಣದ್ಧೇ ಮಾತು ಮಾತು ಮಾತು.. ಆದ್ರೆ ಕೆಲವೆಡೆ ಗ್ರಹಣದ ಬಿಸಿ ತಟ್ಟಿಲ್ಲ.. ಹಾಗಾದ್ರೆ ಯಾವೆಲ್ಲ ದೇಗುಲ್ಲಕ್ಕೆ ಗ್ರಹಣದ ಕಾಟ ತಟ್ಟಿದೆ.. ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ ರಾಜ್ಯದ ಬಹುತೇಕ ದೇವಾಲಯಗಳಿಗೆ ಬೀಜ ಜಡಿಯಲಾಗಿದೆ.. ನಾಳೆ ಬೆಳಿಗ್ಗೆಯ ವರೆಗೂ ಪೂಜೆಪುರಾಸ್ಕಾರಗಳು ನಡೆಸದಿರಲು ದೇವಾಲಯಗಳ ಆಡಳಿತ ಮಂಡಳಿ ನಿರ್ಧರಿಸಿವೆ.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಘಾಟಿ ಸುಬ್ರಹ್ಮಣ್ಯ ದೇವಾಲ, ನೆಲಮಂಗಲ ಸಮೀಪದ ದಕ್ಷಿಣಕಾಶಿ ಶಿವಗಂಗೆ ದೇಗುಲ, ಶ್ರಿರಂಗಪಟ್ಟಣದ ಗಂಜಾಂನ ನಿಮಿಷಾಂಭ ದೇವಾಲಯಕ್ಕೂ ಗ್ರಹಣದ ಕಾಟ ತಟ್ಟಿದೆ..

ಇತ್ತ ಬಾಗಲಕೋಟೆ ಜಿಲ್ಲೆಯ ಹಲವು ದೇವಾಲಯಗಳಿಗೆ ಬೀಗ ಜಡಿಯಲಾಗಿದೆ. ಸಾಗರ ತಾಲೂಕಿನ ಸಿಂಗಧೂರು ಚೌಡೇಶ್ವರಿ ದೇವಸ್ಥಾನವೂ ಸಂಪೂರ್ಣ ಸ್ತಬ್ಧವಾಗಿದೆ.. ಇನ್ನು ಪುರಾಣ ಪ್ರಸಿದ್ದ ಶ್ರೀ ಗಂಗಾಧರೇಶ್ವರ ಹಾಗೂ ಹೊನ್ನಾದೇವಿ ದೇವಾಲಯದಲ್ಲಿ ಭಕ್ತರ ಆಗಮನಕ್ಕೆ ನಿಷೇಧವೇರಿದ್ದು, ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.. ಇತ್ತ ಕರಾವಳಿಯ ಪ್ರಸಿದ್ಧ ಯಾತ್ರಾ ಸ್ಥಳವಾದ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯಕ್ಕೂ ಗ್ರಹಣದ ಕಾಟ ತಟ್ಟಿದೆ.. ಮಧ್ಯಾಹ್ನ 2.30ರವೆರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ರಾತ್ರಿ ವೇಳೆ ಸಂಪೂರ್ಣ ದರ್ಶನ ಸ್ಥಗಿತಮಾಡಲಾಗಿದೆ.. ಇನ್ನೂ ಅನ್ನಪೂರ್ಣ ಛತ್ರದಲ್ಲಿ ಊಟದ ವ್ಯವಸ್ಥೆಯನ್ನೂ ನಿಷೇಧಿಸಲಾಗಿದೆ.. ಇತ್ತ ಕದ್ರಿ ಮಂಜುನಾಥ ದೇವಾಲಯಕ್ಕೆ ಮಾತ್ರ ಗ್ರಹಣದ ಕಾಟ ತಟ್ಟಿಲ್ಲ.. ಇತ್ತ ದಾವಣಗೆರೆಯ ಹರಪ್ಪನಹಳ್ಳಿ ಹುಚ್ಚಂಗಿ ದುರ್ಗದಲ್ಲಿ ಭರತ ಹುಣ್ಣಿಮೆ ಹಿನ್ನೆಲೆ ಅದ್ಧೂರಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಭಕ್ತರ ದರ್ಶನದಲ್ಲಿ ಯಾವುದೇ ವ್ಯತ್ಯಾಸವಿಲ್ಲ..  ಒಟ್ನಲ್ಲಿ ಚಂದ್ರ ಗ್ರಹಣದ ಕಾಟ ಹಲವು ದೇವಾಯಲಗಳಿಗೆ ತಟ್ಟಿದ್ರೆ, ಇನ್ನೂ ಹಲವು ದೇಗುಲಗಳಿಗೆ ತಟ್ಟಿಲ್ಲ..

ನ್ಯೂಸ್​ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *