ಪ್ರೀತಿಸಿ ಮನೆ ಬಿಟ್ಟು ಹೋದ ಯುವತಿ ರಸ್ತೆ ಅಪಘಾತದಲ್ಲಿ ಸಾವು

ಪ್ರೀತಿಸಿ ಮನೆ ಬಿಟ್ಟು ಹೋದ ಯುವತಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರೋ ಘಟನೆ ಶಿವಮೊಗ್ಗದಲ್ಲಿ ನಡೆದಿದೆ… ಗೀತಾ ಮೃತ ದುರ್ದೈವಿ.. ಶಿವಮೊಗ್ಗ ಜಿಲ್ಲೆ ಉಂಬ್ಳೆಬೈಲು ಗ್ರಾಮದ ಬಳಿ ನಿನ್ನೆ ರಾತ್ರಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್​ನಲ್ಲಿದ್ದ ಗೀತಾ ಸಾವನ್ನಪ್ಪಿದ್ದಾಳೆ. ಇನ್ನೂ ಈಕೆ ಪ್ರಿಯಕರನ ಲಕ್ಷ್ಮಣ್ ಜೊತೆ ಜೊತೆ 8 ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು. ಮಗಳ ಕಾಣದ ಕಾರಣ ಗೀತಾ ಪೋಷಕರು ಕೊಪ್ಪ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಮನೆಯವ್ರು ಮದುವೆಗೆ ಒಪ್ಪಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರೇಮಿಗಳು ಮನೆಗೆ ವಾಪಸಾಗ್ತಿದ್ರು. ಈ ವೇಳೆ ಈ ರಸ್ತೆ ಅಪಘಾತ ನಡೆದಿದೆ.

0

Leave a Reply

Your email address will not be published. Required fields are marked *