ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಡಿಸ್ಟಾರ್ಜ್..

ಚಾಕು ಇರಿತಕ್ಕೆ ಒಳಗಾಗಿದ್ದ ಲೋಕಾಯುಕ್ತ ನ್ಯಾಯಾಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ಕಳೆದ ೮ ದಿನಗಳಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ ಮಲ್ಯ ಆಸ್ಪತ್ರೆಯ ವೈದ್ಯರು ವಿಶ್ವನಾಥ್ ಅವರನ್ನು ಡಿಸ್ಜಾರ್ಜ್ ಮಾಡಿದ್ದಾರೆ. ಇನ್ನು ಕೆಲವು ತಿಂಗಳುಗಳ ಕಾಲ ನ್ಯಾಯಾಮೂರ್ತಿಗಳು ಮನೆಯಲ್ಲಿ ರೆಸ್ಟ್ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಇದೇ ತಿಂಗಳು 7 ನೇ ತಾರೀಖಿನಂದು ಚಾಕು ಇರಿತಕ್ಕೆ ಒಳಗಾಗಿದ್ದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರನ್ನ, ಇಂದು ಬೆಳಿಗ್ಗೆ ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯ್ತು. ಕಳೆದ 8 ದಿನಗಳಿಂದಲೂ ಲೋಕಾಯುಕ್ತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಈ ಹಿನ್ನೆಲೆಯಲ್ಲಿ ಅವರ ಸ್ನೇಹಿತರು ಸೇರಿದಂತೆ ಹಲವಾರು ಗಣ್ಯ ವ್ಯಕ್ತಿಗಳು ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದು ಹೋಗುತ್ತಿದ್ದರು. ಇಂದು ನ್ಯಾಯಾಮೂರ್ತಿಗಳ ಆರೋಗ್ಯವನ್ನು ವಿಚಾರಿಸಲು ಸಚಿವ ಹೆಚ್. ಕೆ ಪಾಟೀಲ್ ಆಸ್ಪತ್ರೆಗೆ ಬಂದಿದ್ದರು.

ನ್ಯಾಯಾಮೂರ್ತಿ ವಿಶ್ವನಾಥ್ ಶೆಟ್ಟಿ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ರಾಜ್ಯದ ಜನ ಆತಂಕ ಪಡುವ ಅಗತ್ಯ ಇಲ್ಲ. ಅವರ ಗಾಯ ಮಾಯ್ತಾ ಇದೆ . ಘಟನೆ ಬಗ್ಗೆ ಹೇಳಿದ್ದಾರೆ. ಸದ್ಯಕ್ಕೆ ಪೊಲೀಸರ ವಿಚಾರಣೆ ಬಗ್ಗೆ ನಾನು ಹೇಳೊದು ಸೂಕ್ತ ಅಲ್ಲ ಅನ್ನೊದು ಅನಿಸಿಕೆ. ನನ್ನ ಬಳಿ ಲೋಕಾಯುಕ್ತರು ಚೆನ್ನಾಗಿ ಮಾತನಾಡಿದ್ದಾರೆ. ಇಂತಹ ಘಟನೆಗಳು ರಾಜ್ಯದ ಜನ ಆತಂಕಕ್ಕೆ ಒಳಪಡುವಂತೆ ಮಾಡಿದೆ. ಲೋಕಯುಕ್ತ ಸಂಸ್ಥೆ ಮೇಲೆ ಭಯೋತ್ಪಾದನಾ ರೀತಿ ಕೃತ್ಯ ಖಂಡನೀಯ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಬೇಕಿದೆ, ರಾಜ್ಯ ಸರ್ಕಾರ ಕೂಲಂಕುಷ ತನಿಖೆಯನ್ನ ಮಾಡಿಸ್ತಿದೆ. ಇದರ ಹಿಂದೆ ಯಾರಿದ್ದಾರೆ ಅನ್ನೋದರ ಬಗ್ಗೆ ತಿಳಿಯಬೇಕಿದೆ. ಸದ್ಯ ಅವರು ಸಾಕಷ್ಟು ಗುಣಮುಖರಾಗಿದ್ದಾರೆಂದು ತಿಳಿಸಿದ್ರು..ಸಚಿವ ಹೆಚ್.ಕೆ ಪಾಟೀಲ್ ಲೋಕಾಯುಕ್ತರನ್ನ ಭೇಟಿಯಾಗಿ ಹೋದ ಅರ್ಧ ಗಂಟೆಯಲ್ಲೇ ಲೋ. ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದರು. ಆಸ್ಪತ್ರೆಯಿಂದಲ್ಲೇ ಪೊಲೀಸ್ ಬೆಂಗಾವಲಿನಲ್ಲಿ ಹೊರಬಂದ ನ್ಯಾಯಾಧೀಶರು ಆಸ್ಪತ್ರೆಯಲ್ಲಿ ತಮ್ಮನ್ನ ಚೆನ್ನಾಗಿ ನೋಡಿಕೊಂಡಿದ್ದಾರೆ. ಇನ್ನೂ ವಿಶ್ರಾಂತಿಯ ಅವಶ್ಯಕತೆ ಇರುವುದಾಗಿ ಹೇಳಿದ್ರು, ಮಲ್ಯ ಆಸ್ಪತ್ರೆ ವೈದ್ಯರಿಗೆ ಹಾಗೂ ರಾಜ್ಯದ ಜನತೆಗೆ ಧನ್ಯವಾದದ ಮಾತುಗಳನ್ನಾಡಿದ್ರು…ಒಟ್ಟಿನಲ್ಲಿ ತುಮಕೂರು ಮೂಲದ ತೇಜಸ್ ಶರ್ಮಾರಿಂದ ಚಾಕು ಇರಿತಕ್ಕೊಳಗಾದ ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ತಮ್ಮ ನಿವಾಸಕ್ಕೆ ತೆರಳಿದ್ರು. ವೈದ್ಯರ ಸೂಚನೆಯ ಮೇರೆಗೆ ಮುಂದಿನ ಮೂರು ತಿಂಗಳು ಕಾಲ ವಿಶ್ರಾಂತಿ ಪಡೆಯಲು ಲೋಕಾಯುಕ್ತರು ನಿರ್ಧರಿಸಿದ್ದಾರೆ.

ಆಶಿಕ್ ಮುಲ್ಕಿ ಕ್ರೈಂ ಬ್ಯೂರೋ ಸುದ್ದಿ ಟಿವಿ

0

Leave a Reply

Your email address will not be published. Required fields are marked *