2008ರ ವರೆಗೆ ಸಾಲ ಮನ್ನಾ ವಿಸ್ತರಿಸಿದ ಮಹಾರಾಷ್ಟ್ರ

ಮುಂಬೈ: ಮಹಾರಾಷ್ಟ್ರ ಸರ್ಕಾರ ರೈತರ ಸಾಲ ಮನ್ನಾವನ್ನು 2008ರವರೆಗೆ ವಿಸ್ತರಿಸಿದೆ. ಮಹತ್ವದ ಈ ನಿರ್ಧಾರವನ್ನು ಸಿಎಂ ದೇವೇಂದ್ರ ಫಡ್ನವೀಸ್ ಕೈಗೊಂಡಿದ್ದಾರೆ. ರೈತರ ಭಾರೀ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಛತ್ರಪತಿ ಶಿವಾಜಿ ಮಹಾರಾಜ್ ಸನ್ಮಾನ್ ಹೆಸರಿನಲ್ಲಿ ಸಾಲ ಮನ್ನಾ ಮಾಡಿದ್ದ ರಾಜ್ಯ ಸರ್ಕಾರ ಏಪ್ರಿಲ್ 1, 2012 – ಜೂನ್ 30, 2016ರವರೆಗಿನ ಸಾಲವನ್ನು ಮನ್ನಾ ಮಾಡಿತ್ತು. ಆದರೆ, ಈಗ ಈ ಸೌಲಭ್ಯವನ್ನು 2008ರಿಂದ ಸಾಲ ಮಾಡಿದ ರೈತರಿಗೆ ಕೂಡ ವಿಸ್ತರಿಸಿದೆ. ಈ ಮೂಲಕ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಕ್ರಮ ಕೈಗೊಂಡಿದೆ. ಈ ವಿಷಯವನ್ನು ದೇವೇಂದ್ರ ಫಡ್ನವೀಸ್ ಅವರು ಹದಿನೈದು ದಿನಕ್ಕೊಮ್ಮೆ ಜನರೊಂದಿಗೆ ಸಂಪರ್ಕಿಸುವ ಕಾರ್ಯಕ್ರಮವೊಂದರಲ್ಲಿ ಘೋಷಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಮನಮೋಹನ್ ಸಿಂಗ್ ಅವಧಿಯ ಯುಪಿಎ ಸರ್ಕಾರ 2008ರಲ್ಲಿ 71,000 ಕೋಟಿ ರೂ. ಸಾಲ ಮನ್ನಾ ಮಾಡಿತ್ತು. ಫೆಬ್ರವರಿ 29, 2008ರವರೆಗಿನ ಸಾಲವನ್ನು ಮನ್ನಾ ಮಾಡಲಾಗಿತ್ತು. ಆದರೆ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಲಮನ್ನಾ ಸಾಧ್ಯವಿಲ್ಲ ಎಂದಿತ್ತು.

ಈ ನಡುವೆ ಕರ್ನಾಟಕ, ಮಹಾರಾಷ್ಟ್ರ ಮೊದಲಾದ ರಾಜ್ಯಗಳು ರೈತರ ಸಾಲವನ್ನು ಮನ್ನಾ ಮಾಡಿದ್ದವು.

0

Leave a Reply

Your email address will not be published. Required fields are marked *