ನಮ್ಮ ಜೊತೆ ಬನ್ನಿ.. ಇಲ್ಲ ಮಠ ಬಿಡಿ – ಮತ್ತೆ ಹೋರಾಟ ಆರಂಭಿಸಲು ಲಿಂಗಾಯಿತ ಮುಖಂಡರ ತೀರ್ಮಾನ..

ನಮ್ಮ ಜೊತೆ ಬನ್ನಿ.. ಇಲ್ಲ ಮಠ ಬಿಡಿ…! ಇಂಥದೊಂದು ಘೋಷ ವಾಕ್ಯ ಇಟ್ಟುಕೊಂಡು ಲಿಂಗಾಯಿತ ಮುಖಂಡರು ಹೋರಾಟ ಆರಂಭಿಸಲು ತೀರ್ಮಾನಿಸಿದ್ದಾರೆ. ಈ ಮೂಲಕ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಮತ್ತಷ್ಟು ತಿರುವುಗಳನ್ನು ಪಡೆಯೋ ಸಾಧ್ಯತೆಗಳಿವೆ.ಪ್ರತ್ಯೇಕ ಧರ್ಮದ ವಿಚಾರವಾಗಿ ಇಂದು ಮತ್ತೆ ಸಭೆ ಸೇರಲು ಲಿಂಗಾಯಿತ- ವೀರಶೈವ ಮುಖಂಡರು ತೀರ್ಮಾನಿಸಿದ್ದಾರೆ. ಸಚಿವ ಶರಣ್ ಪ್ರಕಾಶ್ ಪಾಟೀಲ್ ಕರೆದಿರೋ ಈ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ಬಸವರಾಜ್ ಹೊರಟ್ಟಿ ಸೇರಿದಂತೆ ಎಲ್ಲಾ ಲಿಂಗಾಯತ ಮುಖಂಡರು ಭಾಗವಹಿಸಲು ತೀರ್ಮಾನಿಸಿದ್ದಾರೆ. ಇದಲ್ಲದೇ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ ನೀಡದೇ ಇದ್ರೆ ನಮ್ಮ ಪಾಡಿಗೆ ನಾವು, ನಿಮ್ಮ ಪಾಡಿಗೆ ನೀವು ಅನ್ನೋ ಸಂದೇಶವನ್ನು ಲಿಂಗಾಯತ ಮುಖಂಡರಿಗೆ ರವಾನಿಸಲು ಕೂಡ ನಿರ್ಧರಿಸಿದ್ದಾರೆ.

ಪದೇ ಪದೇ ಸಭೆ ಸೇರಿ ಗೊಂದಲ ಸೃಷ್ಟಿಯಾಗೋದನ್ನು ತಡೆಯಲು ಲಿಂಗಾಯತ ಮುಖಂಡರು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇನ್ನು ಲಿಂಗಾಯಿತ ಪ್ರತ್ಯೇಕ ಧರ್ಮದ ವಿಚಾರಕ್ಕೆ ಬಿಜೆಪಿ ಶಾಸಕರು ಪರೋಕ್ಷವಾಗಿಯೇ ಬೆಂಬಲಕ್ಕೆ ನಿಂತಿದ್ದಾರೆ. ಧರ್ಮದ ವಿಚಾರವಾಗಿ ತುಟಿಪಿಟಿಕ್ ಅನ್ನ ಬಾರದು ಎಂಬ ಆರ್‌ಎಸ್‌ಎಸ್ ಕಟ್ಟಾಜ್ಞೆ ಒಂದು ಕಡೆಯಾದ್ರೇ ಹೇಗಾದ್ರು ಸರಿ ನಮ್ಮ ಸಮುದಾಯ ಹಾಗೂ ಸಮುದಾಯದ ಮತಗಳನ್ನು ಉಳಿಸಿಕೊಳ್ಳಬೇಕು ಅಂತ ಬಿಜೆಪಿ ಶಾಸಕರು ಹೋರಾಟಕ್ಕೆ ನಿಂತಿದ್ದಾರೆ.

ಇನ್ನು ಲಿಂಗಾಯತ ಸಮಾವೇಶ ಎಲ್ಲಿ ನಡೆದ್ರೂ ಕೂಡ ಪರೋಕ್ಷವಾಗಿ ಬಿಜೆಪಿ ಶಾಸಕರು ಸಾರಿಗೆ ವ್ಯವಸ್ಥೆ ಮಾಡಿಕೊಡ್ತದ್ರಂತೆ. ಅಲ್ಲದೇ ಪ್ರತಿ ಸಮಾವೇಶಕ್ಕೂ ೩೦ ರಿಂದ ೪೦ ಬಸ್‌ಗಳಲ್ಲಿ ತಮ್ಮ ಸಮುದಾಯದ ಮುಖಂಡರನ್ನು ಕಳುಹಿಸಿಕೊಡುವ ಮೂಲಕ ಬೆಂಬಲ ನೀಡಿದ್ದಾರೆ..ಒಟ್ನಲ್ಲಿ ಲಿಂಗಾಯತ – ವೀರಶೈವರಲ್ಲಿ ಪ್ರತ್ಯೇಕ ಧರ್ಮದ ಕಾವು ದಿನೇ ದಿನೇ ಹೆಚ್ಚಾಗ್ತಿದೆ. ಇದ್ರ ಮದ್ಯೆ ಪ್ರತ್ಯೆಕ ಲಿಂಗಾಯತ ಧರ್ಮಕ್ಕೆ ಬಿಜೆಪಿಯ ಶಾಸಕರು ಪರೋಕ್ಷವಾಗಿ ಬೆಂಬಲಿಸುತ್ತಿರುವುದು ರಾಜ್ಯ ಬಿಜೆಪಿ ನಾಯಕರಾದ ಬಿಎಸ್‌ವೈ ಹಾಗೇ ಶೆಟ್ಟರ್ ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
==============
ಪೊಲಿಟಿಕಲ್‌ ಬ್ಯೂರೋ ಸುದ್ದಿಟಿವಿ

0

Leave a Reply

Your email address will not be published. Required fields are marked *