ತಾರಕಕ್ಕೇರಿದ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ…

ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ತಾರಕಕ್ಕೇರಿದ ಬೆನ್ನಲ್ಲೇ ಇಂದು ವಿರಕ್ತ ಮಠಾಧೀಶರು ದಿಢೀರ್ ಸಭೆ ಸೇರಿ ಸರ್ಕಾರದ ವಿರುದ್ದ ಹೋರಾಟದ ಸಂದೇಶ ಸಾರಿದ್ರು. ಅಲ್ಲದೇ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಮುಂದಾದ ಸ್ವಾಮೀಜಿಗಳ ವಿರುದ್ಧ ಕಾನೂನು ಸಮರಕ್ಕೆ ಕೂಡಾ ಮುಂದಾಗಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಇದೀಗ ನಿರ್ಣಾಯಕ ಘಟ್ಟ ತಲುಪಿದೆ. ನ್ಯಾ. ನಾಗಮೋಹನ್​ದಾಸ್ ಸಮಿತಿ ಶಿಫಾರಸು ಅಂಗೀಕರಿಸುವಂತೆ ಸಚಿವರು ಸೇರಿ ಕೆಲವು ಮಠಾಧೀಶರು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಬೆನ್ನಲ್ಲೇ, ಪ್ರತ್ಯೇಕ ಲಿಂಗಾಯತ ಧರ್ಮ ವಿರೋಧಿಸುತ್ತಿರುವ ವಿರಕ್ತ ಮಠಾಧೀಶರು ಇದೀಗ ಸರ್ಕಾರದ ಮೇಲೆ ಒತ್ತಡದ ತಂತ್ರಕ್ಕೆ ಮುಂದಾಗಿದ್ದಾರೆ. ಲಿಂಗಾಯತದ ಬದಲಿಗೆ ವೀರಶೈವ – ಲಿಂಗಾಯತ ಧರ್ಮವಾಗಬೇಕು ಎಂಬ ವಾದ ಮಂಡಿಸುತ್ತಿರುವ ವಿರಕ್ತ ಮಠಾಧೀಶರು, ಬಾಗಲಕೋಟೆ ಜಿಲ್ಲೆಯ ಶಿವಯೋಗಿ ಮಂದಿರದಲ್ಲಿ ಸಭೆ ನಡೆಸಿದ್ರು. ಸಂಗನಬಸವ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ 2 ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಇನ್ನು ವಿರಕ್ತ ಮಠಾಧೀಶರು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಬೆಂಬಲಕ್ಕೆ ನಿಂತ ಸ್ವಾಮಿಜಿಗಳ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಲು ನಿರ್ದರಿಸಿದ್ದಾರೆ. ಮತ್ತೊಂದೆಡೆ ವೀರಶೈವ ಎಂಬ ಹೆಸರನ್ನ ಬಳಸಿಕೊಂಡು ಆಸ್ತಿ ಪರಬಾರೆ ಮಾಡಿಕೊಂಡ ಬಗ್ಗೆ ಆರೋಪಿಸಿ ಗದುಗಿನ ತೊಂಟದಾರ್ಯ ಶ್ರೀ ಗಳ ವಿರುದ್ಧ ದಾಖಲೆ ಬಿಡುಗಡೆ ಮಾಡಿದ್ರಲ್ಲದೇ, ಅವ್ರ ವಿರುದ್ಧ ಕಾನೂನು ಹೋರಾಟ ನಡೆಸುವ ಮುನ್ಸೂಚನೆ ನೀಡಿದ್ದಾರೆ…..ಈ ಮಧ್ಯೆ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಬಸವರಾಜ ಹೊರಟ್ಟಿ ಚುನಾವಣೆ ಮುಗಿದ ಮೇಲೂ ಲಿಂಗಾಯತ ಹೋರಾಟ ನಿಲ್ಲಿಸೋದಿಲ್ಲ ಎಂದು ಮಠಾಧೀಶರ ಹೇಳಿಕೆಗೆ ತಿರುಗೇಟು ನೀಡಿದ್ರು. ಇದೇ ವೇಳೆ, ಪ್ರತ್ಯೇಕತೆ ವಿಚಾರದಲ್ಲಿ ಆರ್.ಎಸ್.ಎಸ್ ಮುಖ್ಯಸ್ಧ ಭಯ್ಯಾಜಿ ವಿರೋಧಿಸುವುದು ಯಾಕೆ ಎಂದು ಪ್ರಶ್ನಿಸಿದ್ರು. ಲಿಂಗಾಯತರಿಗೆ ದ್ರೋಹ ಬಗೆಯೋದಿಲ್ಲ ಅಂತಾ ಬಿಎಸ್ ವೈ ಹೇಳಿಕೊಂಡಿದ್ದರು. ಲಿಂಗಾಯತರಿಗೆ ಸಂವಿಧಾನದತ್ತ ಅವಕಾಶ‌ ಸಿಕ್ಕರೆ ಬಿಜೆಪಿಗರು ಯಾಕೆ ವಿರೋಧಿಸ್ತೀರಿ ಅಂತ ಕುಟುಕಿದ್ರು….ಒಟ್ಟಾರೆ, ಲಿಂಗಾಯಿತ ಪ್ರತ್ಯೇಕ ಧರ್ಮದ ವಿಚಾರಕ್ಕೆ ಸಂಬಂಧಿಸಿದ ವಿದ್ಯಮಾನಗಳು ಕುತೂಹಲ ಸೃಷ್ಠಿಸಿವೆ. ಈ ನಡುವೆಯೇ ನಾಳಿನ ಸಚಿವ ಸಂಪುಟ ಸಭೆಯೂ ಕೌತುಕ ಮೂಡಿಸಿದೆ…..

ಬ್ಯೂರೋ ರಿಪೋರ್ಟ್ ಸುದ್ದಿಟಿವಿ

0

Leave a Reply

Your email address will not be published. Required fields are marked *