ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಬೆಂಬಲಿಸಿ ಸ್ಟೇಟ್ ವೆಲ್ಫೇರ್ ಏರೋಸ್​ನಿಂದ ಪತ್ರ ಚಳವಳಿ

ಕೃಪೆ: ಡೆಕ್ಕನ್ ಹೆರಾಲ್ಡ್

ಬೆಂಗಳೂರು: ಸ್ಟೇಟ್ ವೆಲ್ಫೇರ್ ಏರೋಸ್ (SWAEROES) ಸಂಸ್ಥೆಯು ರಾಜ್ಯ ಸರ್ಕಾರದ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಡೆಸುವ ಪ್ರಸ್ತಾವನೆಯನ್ನು ಬೆಂಬಲಿಸಿದೆ. ಇದಕ್ಕಾಗಿ ಪತ್ರ ಚಳವಳಿ ನಡೆಸಲು ಸಂಸ್ಥೆ ಮುಂದಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಬೆಂಬಲಿಸಿದೆ. ಇದಕ್ಕಾಗಿ ಪತ್ರವನ್ನು ತಯಾರಿಸಿದ್ದು, ಮುಖ್ಯಮಂತ್ರಿಗಳಿಗೆ ಅಡ್ರೆಸ್ ಮಾಡಿರುವ ಪತ್ರವನ್ನು ಪೋಸ್ಟ್ ಮಾಡಿ, ಪೋಸ್ಟ್ ಮಾಡುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಮನವಿ ಮಾಡಿದೆ.

ಸರ್ಕಾರದ ನಡೆಯನ್ನು ಕಸಾಪ, ಕನ್ನಡದ ಸಾಹಿತಿಗಳಾದ ಪ್ರೊ. ಚಂದ್ರಶೇಖರ ಪಾಟೀಲ, ಎಸ್ ಎಲ್ ಭೈರಪ್ಪ, ಎಲ್ ಹನುಮಂತಯ್ಯ, ಕಸಾಪ ಅಧ್ಯಕ್ಷ ಮನು ಬಳಿಗಾರ್ ಸೇರಿದಂತೆ ಕೆಲವು ಸಾಹಿತಿಗಳು ವಿರೋಧಿಸಿದ್ದರು. ಜೊತೆಗೆ ಸರ್ಕಾರದ ನಿರ್ಧಾರ ವಿರೋಧಿಸಿ ಗೋಕಾಕ್ ಮಾದರಿಯಲ್ಲಿ ಚಳವಳಿ ನಡೆಸಲು ಮುಂದಾಗಿದ್ದರು. ಆದರೆ, ದಲಿತ ಪರ ಚಿಂತಕರು ಸರ್ಕಾರದ ನಡೆಯನ್ನು ಸ್ವಾಗತಿಸಿದ್ದರು. ಜೊತೆಗೆ ಕನ್ನಡ ಚಳವಳಿಗಾರರು ಮತ್ತು ಕನ್ನಡ ಸಾಹಿತಿಗಳು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಿದ್ದಾರೆ. ಅವರ ಮಕ್ಕಳು ವಿದೇಶಗಳಲ್ಲಿದ್ದಾರೆ. ಆದರೆ, ಬಡವರ ಮತ್ತು ದಲಿತರ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಏಕೆ ಕಲಿಯಬೇಕು? ಎಂದು ವಾದಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಸ್ಟೇಟ್ ವೆಲ್ಫೇರ್ ಏರೋಸ್ ಸರ್ಕಾರ ನಡೆಯನ್ನು ಬೆಂಬಲಿಸಿದೆ.  ಪತ್ರದ ಮಾದರಿ ಇಂತಿದೆ:

ಮಾನ್ಯ ಮುಖ್ಯಮಂತ್ರಿಗಳು

ಕರ್ನಾಟಕ ಸರ್ಕಾರ

ವಿಧಾನಸೌಧ

ಬೆಂಗಳೂರು

 

ಮಾನ್ಯರೇ,

ಮನವಿ ಕರ್ನಾಟಕದ ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಯನ್ನು ಪ್ರಾರಂಭಿಸುತ್ತಿರುವುದು ಸ್ವಾಗತಾರ್ಹ ಸಂಗತಿ. ಹಾಗೆಯೇ ಕರ್ನಾಟಕದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುವಂತೆ ಮಾಡಿದರೆ ಸಾಮಾಜಿಕವಾಗಿ – ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳ ಜೀವನ ಮಟ್ಟವನ್ನು ಹೆಚ್ಚಿಸಿ,  ಸಾಮಾಜಿಕ ಬದಲಾವಣೆಗೆ ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಇಂಗ್ಲಿಷ್ ಮಾಧ್ಯಮದ ಶಿಕ್ಷಣವನ್ನು ತಕ್ಷಣ ಜಾರಿಗೆ ತರಬೇಕೆಂದು ಕೋರುತ್ತೇನೆ.

ವಂದನೆಗಳೊಂದಿಗೆ

ಸಹಿ

ವಿಳಾಸ…

0

Leave a Reply

Your email address will not be published. Required fields are marked *