ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ…!

ಬನ್ನೇರುಘಟ್ಟ ಜೈವಿಕ ಉದ್ಯಾನವನ ಸದ್ಯದಲ್ಲೇ ಮತ್ತೊಂದು ವಿಶಿಷ್ಟ ಆಕರ್ಷಣೆಗೆ ಪಾತ್ರವಾಗಲಿದೆ.. ತೆರೆದ ಸ್ಥಳದಲ್ಲಿ ಬಿಡುವ ಚಿರತೆ ಸಫಾರಿ ಬನ್ನೇರು ಘಟ್ಟ ಉದ್ಯಾನವನದಲ್ಲಿ ಸ್ಥಾಪನೆಗೊಳ್ಳಲಿದೆ. ಈ ಮೂಲಕ ದೇಶದಲ್ಲೇ ಮೊದಲ ಚಿರತೆ ಸಫಾರಿ ಇರುವ ಹೆಗ್ಗಳಿಕೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪಾತ್ರವಾಗಲಿದೆ. 
ಚಿರತೆಗಳನ್ನ ತೆರದ ಪ್ರದೇಶದಲ್ಲಿ ಬಿಡುವುದು ಅಕ್ಷರಶಃ ಸಾಹಸ ಕಾರ್ಯ. ಚಿರತೆಗಳು ವೇಗವಾಗಿ ಓಡುವ, ಮರ ಏರುವ, ಎತ್ತರದ ಕಾಂಪೌಂಡ್​ಗಳನ್ನ ಜಂಪ್​ ಮಾಡುವುದರಲ್ಲಿ ಪರಿಣಿತಿ ಹೊಂದಿವೆ. ಹೀಗಾಗಿ ಚಿರತೆಗಳನ್ನ ತೆರೆದ ಪ್ರದೇಶಗಳಲ್ಲಿ  ಬಿಡುವುದು ಕಷ್ಟದ ಕೆಲಸ. ಈ ಎಲ್ಲಾ ಮಿತಿಗಳ ನಡುವೆಯೂ ಬನ್ನೇರುಘಟ್ಟ ಜೈವಿಕ ಉದ್ಯಾನವನ ಚಿರತೆ ಸಫಾರಿ ನಿರ್ಮಾಣಕ್ಕೆ ಮುಂದಾಗಿದೆ..
 ಇನ್ನು ಬನ್ನೇರುಘಟ್ಟ ಉದ್ಯಾನವನದ ಮೇಲಾಧಿಕಾರಿಗಳ ಪರಿಶ್ರಮದಿಂದ ಚಿರತೆ ಸಫಾರಿ ಯೋಜನೆಗೆ ಚಾಲನೆ ಸಿಕ್ಕಂತಾಗಿದೆ. 23 ದಿನಗಳ ಹಿಂದಷ್ಟೇ ಸಫಾರಿ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲು ಲೋಕೋಪಯೋಗಿ ಇಲಾಖೆ ಮತ್ತು ರಾಜ್ಯ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಇನ್ನೆರೆಡು ತಿಂಗಳಲ್ಲಿ ಚಿರತೆ ಸಫಾರಿಗೆ ತಂತಿ ಬೇಲಿಯನ್ನ ಹಾಕಲಾಗುತ್ತದೆ. ಈಗಾಗ್ಲೇ ಕರಡಿ ಮತ್ತು ಸಿಂಹ ಸಫಾರಿಗಳು ಈ ಉದ್ಯಾನವನದಲ್ಲಿವೆ. ಇದೀಗ ಚಿರತೆ ಸಫಾರಿ ಸೇರ್ಪಡೆಗೊಳ್ಳಲಿದೆ.. ಇನ್ನೊಂದೆಡೆ, ಬನ್ನೇರುಘಟ್ಟ ಮೃಗಾಲಯದಲ್ಲಿ ಪ್ರಾಣಿಗಳ ಪುನರ್ವಸತಿ ಕೇಂದ್ರ ಹಾಗೂ ಚಿರತೆ ಸಲಹೋ ಕೇಂದ್ರಗಳಿವೆ. ಇಲ್ಲಿ ಮರಿಗಳನ್ನೂ ಒಳಗೊಂಡಂತೆ 32 ಚಿರತೆಗಳಿವೆ. ಇವುಗಳಲ್ಲಿ 20 ಚಿರತೆಗಳನ್ನ ಸಫಾರಿಯಲ್ಲಿ ಬಿಡಬಹುದಾಗಿದೆ. ಈ ಯೋಜನೆಗೆ ಆರ್ಥಿಕ ನೆರವು ಕೋರಿ ರಾಜ್ಯ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಈ ಸಫಾರಿಗೆ ಒಟ್ಟು 5 ರಿಂದ 6 ಕೋಟಿ ರೂಪಾಯಿಗಳ ಮೊತ್ತವನ್ನ ನಿಗದಿಪಡಿಸಿದೆ. ಇನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೃಗಾಲಯದಲ್ಲಿ ಮೊನ್ನೆಯಷ್ಟೇ ಜೀಬ್ರಾ ಆವರಣ ಉದ್ಘಾಟನೆಯಾಗಿದೆ. ಇದರ ಜೊತೆಯಲ್ಲೇ ಚಿರತೆ ಸಫಾರಿ ಕೂಡಾ ಬರಲಿದ್ದು, ಪ್ರಾಣಿಪ್ರಿಯರಿಗೆ ಖುಷಿ ಹೆಚ್ಚಿಸಿದೆ. ಒಟ್ನಲ್ಲಿ ರಾಜ್ಯ ಪ್ರವಾಸೋಧ್ಯಮ ಪಟ್ಟಿಯಲ್ಲಿ ಚಿರತೆ ಸಫಾರಿ ಒಂದು ವಿಶಿಷ್ಟ ಮೈಲಿಗಲ್ಲಾಗುವುದಂತೂ ಸತ್ಯ

0

Leave a Reply

Your email address will not be published. Required fields are marked *