ಅಂಗೈಯಲ್ಲೇ ಲೀಗಲ್ ಮಾಹಿತಿ ಲಭ್ಯ

ಇನ್ಮುಂದೆ ಯಾವುದಾದ್ರೂ ಕಾನೂನಿಗೆ ಸಂಬಂಧಿಸಿದ ಮಾಹಿತಿ ಬೇಕಾದ್ರೆ ವಕೀಲರಾಗಲಿ ಅಥವಾ ಸಾಮಾನ್ಯ ಜನ್ರೇ ಆಗಲಿ.. ಕಾನೂನಿಗೆ ಸಂಬಂಧಿಸಿದ ಗಜ ಗಾತ್ರದ ಪುಸ್ತಕಗಳನ್ನ ಓದಬೇಕಿಲ್ಲ.. ಯಾವ ಕಾಯಿದೆ ಏನ್​ ಹೇಳುತ್ತೆ ಅನ್ನೋದನ್ನ ನೀವು ಕೂತಲ್ಲೇ ಮಾಹಿತಿ ಪಡೆಯಬಹುದು.. ಜೊತೆಗೆ ನೀವೆನಾದ್ರೂ ಲಾಯರ್​​ ಹುಡುಕುತ್ತಿದ್ದೀರಾ..? ಆಸ್ತಿ ಹಾಗೂ ಇತರೇ ವ್ಯವಹಾರಗಳಿಗೆ ಸಂಬಂಧ ಪಟ್ಟ ವ್ಯಾಜ್ಯಗಳ ಕುರಿತು ತಲೆ ಕೆಡಿಸಿಕೊಂಡು ಇದ್ದೀರಾ.. ಇನ್ಮೇಲೆ ಇದಕ್ಕೂ ಬ್ರೇಕ್​ ಬೀಳಲಿದೆ ಅಂತೆ.. ಯಾಕೆಂದ್ರೆ ಲೀಗಲ್​(LEGAL) ಎಂಬ ಸಂಸ್ಥೆಯು ಕಾನೂನುನಿಗೆ ಸಂಬಂಧಪಟ್ಟ ಮಾಹಿತಿಯನ್ನ ಮೊಬೈಲ್​ ಆ್ಯಪ್​ ಮೂಲಕ ತಂದಿದೆ..  ಈ ಆ್ಯಪ್​ ಈಗಾಗಲೇ ಲಭ್ಯವಿದ್ದು, ಇದ್ರಲ್ಲಿ ಕರ್ನಾಟಕಕ್ಕೆ ಸಂಬಂಧಿಸಿ ಕಾಯ್ದೆಗಳು ಕನ್ನಡದಲ್ಲಿ ಸಿಗಲಿವೆ.. ಇನ್ನು ಮೀಕೆಲ್ಲ ಇಂಗ್ಲೀಷ್​ ಭಾಷೆಯಲ್ಲಿದೆ.. ಲೀಗಲ್​ ಮೊಬೈಲ್​ ಆ್ಯಪ್​ ಮೂಲಕ ವಕೀಲರನ್ನ ಸುಲಭವಾಗಿ ದೊರಕಿಸುವ ವ್ಯವಸ್ಥೆ ಮಾಡಲಾಗುತ್ತೆ.. ನಿಮ್ಮ ಅಂಗೈಯಲ್ಲಿ ಕೇಂದ್ರೀಯ ಮತ್ತು ಕರ್ನಾಟಕ ರಾಜ್ಯ ಕಾನೂನುಗಳನ್ನ ಹುಡುಕುವ ಸೌಲಭ್ಯವಿದೆ.. ಹೊಸ ಉದ್ಯಮ, ಅಂತರಾಷ್ಟ್ರೀಯ ವ್ಯವಸ್ಥೆಗಳು, ಆಸ್ತಿ ಹಾಗೂ ಇತರೇ ವ್ಯವಹಾರಗಳು, ಕಾನೂನು ಸಲಹೆಗಳು ಸೇರಿದಂತೆ ಇತರೆ ಮಾಹಿತಿಗಳು ಲಭ್ಯವಿದೆ..ಇದು ಟೆಕ್ನಾಲಜಿ ಯುಗ ನೋಡಿ, ಈಗ ಅಂಗೈಯಲ್ಲಿ ಎಲ್ಲ ಮಾಹಿತಿ ಲಭ್ಯವಿದೆ.. ಒಟ್ಟಾರೆ, ಸರ್ವಂ ಮೊಬೈಲ್​ ಯುಗಂ ಆಗಿರೋದು ಅಂತ ಸತ್ಯ..

1+

Leave a Reply

Your email address will not be published. Required fields are marked *