ಕೊನೆಯ ಟೆಸ್ಟ್​​ ಸೋಲಿನ ಸುಳಿಯಲ್ಲಿ ಟೀಮ್ ಇಂಡಿಯಾ

ಮೂರನೇ ದಿನ 2 ವಿಕೆಟ್​ ನಷ್ಟಕ್ಕೆ 114 ರನ್​ ಕಲೆಹಾಕಿ ಡ್ರೈವರ್​ ಸೀಟ್​​ನಲ್ಲಿದ್ದ ಇಂಗ್ಲೆಂಡ್ ನಾಲ್ಕನೇ ದಿನ ಭಾರತಕ್ಕೆ ಕಠಿಣ ಗುರಿ ನೀಡುವ ಲೆಕ್ಕಾಚಾರ ಹಾಕಿಕೊಂಡಿತ್ತು. ಮತ್ತೊಂದೆಡೆ ಟೀಮ್ ಇಂಡಿಯಾ ಆದಷ್ಟು ಬೇಗ ಈ ಇಬ್ಬರು ಆಟಗಾರರ ವಿಕೆಟ್​ ಪಡೆದು ಪಂದ್ಯದ ಮೇಲೆ ಹಿಡಿತ ಸಾಧಿಸುವ ಯೋಚನೆಯಲ್ಲಿತ್ತು. ಆದ್ರೆ ಜೊ ರೂಟ್ ಹಾಗೂ ಅಲಿಸ್ಟರ್​ ಕುಕ್ ಜೋಡಿ, ಆರಂಭದಿಂದಲೇ ವಿರಾಟ್ ಪಡೆಯ ಆಸೆಗೆ ತಣ್ಣೀರು ಎರಚುವಂತೆ ಆಡಿದ್ರು. ಭಾರತದ ದಾಳಿಯನ್ನ ಸಮರ್ಥವಾಗಿ ಎದುರಿಸದ ಈ ಇಬ್ಬರು ಸ್ಟಾರ್​ ಬ್ಯಾಟ್ಸ್​​ಮನ್ಸ್ ಮೊದಲ ಸೆಷೆನ್​ ಪೂರ್ತಿ ಅಮೋಘ ಆಟದ ಮೂಲಕ ಅಬ್ಬರಿಸಿದ್ರು. ಆಡಿದ ಕುಕ್ ಅತ್ಯಂತ ತಾಳ್ಮೆಯಕೆ ಹೆಚ್ಚು ಒತ್ತು ನೀಡಿದ್ರೆ, ರೂಟ್ ವೇಗದ ಆಟದ ಮೂಲಕ ತಂಡದ ಸ್ಕೋರ್​ ಹೆಚ್ಚಿಸುತ್ತಾ ಹೋದ್ರು.

ಈ ಇಬ್ಬರು ಟೆಸ್ಟ್​ ಸ್ಪೆಷಲಿಸ್ಟ್​ ಬ್ಯಾಟ್ಸ್​ಮನ್ಸ್​ ಕ್ಲಾಸ್​ ಶಾಟ್​ಗಳ ಮೂಲಕ ಮೈದಾನದಲ್ಲಿ ನೆರೆದಿದ್ದ ಸಹಸ್ರಾರು ಕ್ರಿಕೆಟ್​ ಪ್ರೇಮಿಗಳನ್ನ ರಂಜಿಸಿದ್ರು. ಟೀಮ್ ಇಂಡಿಯಾದ ಬೌಲಿಂಗ್ ದಾಳಿಯನ್ನ ಅತ್ಯಂತ ಸಮರ್ಥವಾಗಿ ಎದುರಿಸಿ, ಮೈದಾನದಲ್ಲಿ ಝೆಂಡಾ ಹೂಡಿದ್ರು. ಇವರ ವಿಕೆಟ್ ಪಡೆಯಲು ಭಾರತದ ಬೌಲರ್​ಗಳು ಸಾಕಷ್ಟು ಪರದಾಡಿದ್ರೂ, ಯಾವುದೇ ಪ್ರಯೋಜನವಾಗಲಿಲ್ಲ. ಇದೇ ವೇಳೆ ವಿದಾಯದ ಪಂದ್ಯ ಆಡ್ತಿರುವ ಕುಕ್​ ತಮ್ಮ ಕೊನೆಯ ಇನ್ನಿಂಗ್ಸ್​ನಲ್ಲಿ ಟೆಸ್ಟ್ ಕರಿಯರ್​ನ 32ನೇ ಶತಕದ ಮೈಲಿಗಲ್ಲು ತಲುಪಿದ್ರು.

ಲಂಚ್ ಬ್ರೇಕ್​ನ ನಂತರವೂ ಈ ಜೋಡಿ ಪಟ್ಟು ಸಡಿಲಿಸಲಿಲ್ಲ. ಲೀಲಾಜಾಲವಾಗಿ ಬ್ಯಾಟಿಂಗ್ ಮಾಡಿದ ಈ ಕ್ಲಾಸ್​ ಪ್ಲೇಯರ್ಸ್​ ಮುನ್ನಡೆ ಹೆಚ್ಚಿಸುತ್ತಾ ಕೊಹ್ಲಿಯ ಮುಖದಲ್ಲಿ ನಿರಾಸೆಯ ಗೆರೆ ಮೂಡಿಸಿದ್ರು. ನೋಡು ನೋಡ್ತಾ ಮೂರನೇ ವಿಕೆಟ್​ಗೆ 200 ರನ್​ ಕಲೆಹಾಕಿ ದಾಖಲೆ ಬರೆದ್ರು. ಈ ನಡುವೆ ರೂಟ್ ಕೂಡ ಟೆಸ್ಟ್​ನಲ್ಲಿ ತಮ್ಮ 14ನೇ ಶತಕ ಪೂರೈಸಿ ಸಂಭ್ರಮಿಸಿದ್ರು. ಈ ಜೊತೆಯಾಟಕ್ಕೆ ಲಗಾಮು ಹಾಕುವ ಅನಿವಾರ್ಯತೆಯಲ್ಲಿದ್ದ ಕೊಹ್ಲಿ ಪದೇ ಪದೇ ಬೌಲಿಂಗ್​ನಲ್ಲಿ ಬದಲಾವಣೆ ಮಾಡಿದ್ರೂ ಯಾವುದೇ ಫಲ ಸಿಗಲಿಲ್ಲ. ಕೊನೆಗೆ ಡೆಬ್ಲೂ ಪ್ಲೇಯರ್​ ಹನುಮ ವಿಹಾರಿ ಇವರ ಆಟಕ್ಕೆ ಬ್ರೇಕ್​ ಹಾಕುವಲ್ಲಿ ಯಶಸ್ವಿಯಾದ್ರು. 125 ರನ್​ಗಳಿಸಿದ್ದ ರೂಟ್ ವಿಹಾರಿ ಎಸೆತದಲ್ಲಿ ಬಿಗ್​ ಶಾಟ್ ಬಾರಿಸಲು ಹೋಗಿ, ಸಬ್ಸಿಟಿಟ್ಯೂಟ್ ಫೀಲ್ಡರ್​ ಹಾರ್ದಿಕ್ ಪಾಂಡ್ಯಾಗೆ ಕ್ಯಾಚ್ ನೀಡಿದ್ರು. ಇಲ್ಲಿಗೆ 259 ರನ್​ಗಳ ಸುದೀರ್ಘ ಜೊತೆಯಾಟ ಕೊನೆಗೊಂಡಿತು. ಇದಾದ ಮರು ಎಸೆತದಲ್ಲೇ 147 ರನ್ ಬಾರಿಸಿದ್ದ ಕುಕ್ ಸಹ ವಿಹಾರಿಗೆ ವಿಕೆಟ್​ ಒಪ್ಪಿಸಿದ್ರು.

ಆದ್ರೆ ಅಷ್ಟೊತ್ತಿಗಾಗಲೆ ಇಂಗ್ಲೆಂಡ್​ 350 ಕ್ಕೂ ಹೆಚ್ಚು ಮುನ್ನಡೆ ಗಳಿಸಿ ಸುಭದ್ರ ಸ್ಥಿತಿಗೆ ತಲುಪಿತ್ತು. 5ನೇ ವಿಕೆಟ್​ಗೆ ಜಾನಿ ಬೇರ್​ಸ್ಟೋ ಹಾಗೂ ಬೆನ್​ ಸ್ಟೋಕ್ಸ್​ ಉತ್ತಮ ಜೊತೆಯಾಟವಾಡುವ ಭರವಸೆ ಮೂಡಿಸದ್ರು.ಆದ್ರೆ 18 ರನ್ ಗಳಿಸಿದ ಬೇರ್​ಸ್ಟೋರನ್ನ ಬೌಲ್ಡ್​ ಮಾಡಿದ್ರು. ಜೋಸ್ಟ್​ ಬಟ್ಲರ್​ ಈ ಭಾರಿ ಬಂದಷ್ಟೇ ಬೇಗೆ ಪೆವಿಲಿಯನ್ ಹಾದಿ ಹಿಡಿದ್ರು. ಕೊನೆಯಯಲ್ಲಿ ಸ್ಟೋಕ್ಸ್ ಹಾಗೂ ಸ್ಯಾಮ್ ಕರಾನ್ ಕೆಲ ಟೀಮ್ ಇಂಡಿಯಾ ಬೌಲರ್​​ಗಳನ್ನ ಕಾಡಿದ್ರು. ಅಂತಿಮವಾಗಿ ಇಂಗ್ಲೆಂಡ್​ 8 ವಿಕೆಟ್​ ನಷ್ಟಕ್ಕೆ 423 ರನ್ ಗಳಸಿದ್ದಾಗ ಇನ್ನಿಂಗ್ಸ್​ ಡಿಕ್ಲೇರ್ ಮಾಡಿಕೊಳ್ತು. ಈ ಮೂಲಕ ಭಾರತದ ಗೆಲುವಿಗೆ 464 ರನ್ ಭಾರಿ ಗುರಿ ನೀಡಿತು.

ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತದ ಆರಂಭ ತೀರಾ ಕಳಪೆಯಾಗಿತ್ತು. ಶಿಖರ್​ ಧವನ್​ ಜೇಮ್ಸ್​ ಆ್ಯಂಡರ್​ಸನ್​ರ ಎಲ್​ಬಿಡಬ್ಲ್ಯೂಬಲೆಗೆ ಬಿದ್ದು ತಮ್ಮ ಬ್ಯಾಡ್​ ಫಾರ್ಮ್ ಮುಂದುವರೆಸಿದ್ರು. ನಂತರ ಬಂದ ಪೂಜಾರಾ ಕೂಡ ಆ್ಯಂಡರ್​ಸನ್​ ಅದ್ಭುತ ಇನ್​ಸ್ವಿಂಗ್ ಎಸೆತ ಅರಿಯದೆ ಡಕೌಟ್​ ಆದ್ರು ಸರಣಿಯಲ್ಲಿ ಭರ್ಜರಿ ಲಯದಲ್ಲಿರುವ ಕೊಹ್ಲಿಯೂ ಎದುರಿಸದ ಮೊದಲ ಎಸೆತದಲ್ಲೇ ಔಟಾಗಿ ಸೊನ್ನೆ ಸುತ್ತಿದ್ರು. ಟೀಮ್ ಇಂಡಿಯಾ ಕೇವಲ 2 ರನ್​ಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿತು. ಇದರಿಂದ ಟೀಮ್ ಇಂಡಿಯಾ ನಾಲ್ಕನೇ ದಿನವೇ ರೂಟ್ ಪಡೆಗೆ ಶರಣಾಗುವ ಭೀತಿ ಎದುರಾಗಿತ್ತು.

ಆದ್ರೆ ನಾಲ್ಕನೇ ವಿಕೆಟ್​ಗೆ ಕೆಎಲ್​ ರಾಹುಲ್ ಹಾಗೂ ಉಪನಾಯಕ ಅಜಿಂಕ್ಯಾ ರಹಾನೆ ತಂಡದ ಮಾನ ಕಾಪಾಡಿದ್ರು. ಮೂರನೇ ವಿಕೆಟ್​ಗೆ ಈ ಇಬ್ಬರು 56 ರನ್​ ಸೇರಿಸಿದ್ರು. ಇದರೊಂದಿಗೆ ಭಾರತ ದಿನದಾಟ ಅಂತ್ಯಕ್ಕೆ 3 ವಿಕೆಟ್​ ನಷ್ಟಕ್ಕೆ 58 ರನ್ ಗಳಿಸಿದೆ.ಈಗಾಗಲೇ ಪಂದ್ಯದಲ್ಲಿ ಗೆಲುವಿನ ಆಸೆ ಕೈ ಬಿಟ್ಟಿರುವ ಭಾರತ ಕೊನೆಯ ದಿನ ಡ್ರಾ ಮಾಡಿಕೊಳ್ಳಲು ಹೋರಾಡಲಿದೆ. ಆದ್ರೆ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ರಾಹುಲ್, ರಹಾನೆ ಹೇಗೆ ಆಡ್ತಾರೆ ಅನ್ನೋದರ ಮೇಲೆ ಟೀಮ್ ಇಂಡಿಯಾದ ಭವಿಷ್ಯ ನಿಂತಿದೆ.

0

Leave a Reply

Your email address will not be published. Required fields are marked *