14 ವರ್ಷಗಳ ಕ್ರಿಕೆಟ್ ಜರ್ನಿಗೆ ಬೀಳಲಿದೆ ಬ್ರೇಕ್..!

ಕ್ರಿಕೆಟ್ ಲೋಕದ ಎವರ್​ಗ್ರೀನ್ ಸ್ಟಾರ್ ಪ್ಲೇಯರ್, ಆತನ ಯಾರ್ಕರ್​ಗಳಿಗೆ ಬ್ಯಾಟ್ಸಮನ್​ಗಳೆ ತಬ್ಬಿಬ್ಬಾಗುತ್ತಿದ್ರು. ಆದ್ರೀಗ, ಆ ಸ್ಟಾರ್ ಬೌಲರ್ ಕ್ರಿಕೆಟ್ ಕರಿಯರ್​ಗೆ ಗುಡ್ ಬೈ ಹೇಳೋಕೆ ರೆಡಿಯಾಗಿದ್ದಾರೆ.ಶ್ರೀಲಂಕಾ ತಂಡದ ಸ್ಟಾರ್​ ಪ್ಲೇಯರ್​.ಇವರಿಗೆ ಭೂಷಣವಾಗಿದ್ದೇ ಹೇರ್​​… ಬೌಲಿಂಗ್​​​ನಲ್ಲಿತ್ತು ಇವರದ್ದೇ ಆದ ಖದರ್​​.. ನಿರಾಯಾಸವಾಗಿ ಎಸೆಯುತ್ತಿದ್ದರು ಯಾರ್ಕರ್​​.. ಸಿಂಹಳಿಯ ನಾಡಿನ ನೆಚ್ಚಿನ ಪೇಸರ್​​.ಆತ ವಿಶ್ವ ಕ್ರಿಕೆಟ್​ನಲ್ಲಿ ತನ್ನ ಮಾರಕ ಯಾರ್ಕರ್​ ಮೂಲಕವೇ ಫೇಮಸ್​ ಆದಾತ.. ಯಾರ್ಕರ್ ಎಸೆಯುತ್ತಲ್ಲೇ ಒಂದೆಡೆ ಎದುರಾಳಿಗಳ ಹೃದಯ ಬಡಿತ ಹೆಚ್ಚಿಸಿದ್ರೆ.. ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುವ ಅಭಿಮಾನಿಗಳ ಹೃದಯ ಕದ್ದಾತ.. ತನ್ನ ಡಿಫ್ರೆಂಟ್ ಬೌಲಿಂಗ್ ಸ್ಟೈಲ್​.. ಡಿಫ್ರೆಂಟ್​ ಹೇರ್​ಸ್ಟೈಲ್ ಮೂಲಕವೇ ಬಹುಬೇಗ ಪ್ರಚಲಿತನಾದ.. ಯೆಸ್​ ಅವರೇ ಲಂಕಾದ ಲಸಿತ್ ಮಾಲಿಂಗ.

ಕಳೆದ ವರ್ಷ ತವರಿನಲ್ಲೇ ನಡೆದ ಭಾರತ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್​ನಲ್ಲಿ 300ನೇ ವಿಕೆಟ್ ಪಡೆದ ಸಾಧನೆ ಮಾಡಿದ್ರು.. ಆದ್ರೆ ಲಂಕಾ ತಂಡ ಆ ಪಂದ್ಯದಲ್ಲೂ 168 ರನ್​ಗಳಿಂದ ಹೀನಾಯ ಸೋಲು ಕಂಡಿತು.ವಿಶ್ವದ ಎದುರಾಳಿ ಬ್ಯಾಟ್ಸ್​ಮನ್​​​​ಗಳನ್ನ ತನ್ನ ಬೌಲಿಂಗ್ ಮೂಲಕವೇ ಭಯ ಪಡಿಸಿದ್ದ ಲಸಿತ್ ಮಾಲಿಂಗ, ಇದೀಗ ವೈಯಕ್ತಿಕ ಪ್ರದರ್ಶನದಿಂದ ಬೇಸತ್ತಿದ್ದಾರೆ. ಜಿಂಬಾಬ್ವೆ ಹಾಗೂ ಭಾರತದ ವಿರುದ್ಧದ ಸರಣಿಯಲ್ಲಿ ವಿಕೆಟ್ ಪಡೆಯುವಲ್ಲಿ ಪರದಾಡಿದ್ದಾರೆ. ಆದ್ರೆ ವಿಶ್ವಕಪ್​​ವರೆಗೂ ತಂಡದ ಜೊತೆ ಇರುವ ಆಸೆ ಹೊಂದಿದ್ರು.. ಆದ್ರೀಗ ಆ ಆಸೆ ಕಮರತೊಡಗಿದೆ.

ಇದೀಗ, ಮಾಲಿಂಗಾ 2019 ರ ಏಕದಿನ ವಿಶ್ವಕಪ್​ಗೂ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರಂತೆ. ಈ ಹಿಂದೆಯೂ ಲಸಿತ್ ತಮ್ಮ ಪ್ರದರ್ಶನದ ಬಗ್ಗೆ ಮಾತಾಡಿದ್ರು. ನನಗೆ ಎಷ್ಟು ವರ್ಷಗಳ ಅನುಭವವಿದೆ ಎಂಬುದು ಮುಖ್ಯವಲ್ಲ.. ನನ್ನಿಂದ ತಂಡಕ್ಕೆ ಎಷ್ಟು ಅನುಕೂಲವಾಗುತ್ತಿದೆ.. ತಂಡಕ್ಕೆ ಅಗತ್ಯವಿರುವ ಜಯ ತಂದುಕೊಡಲು ಸಾಧ್ಯವಾಗದೇ ಇದ್ದರೆ ನಾನಿಲ್ಲಿರುವುದು ಸೂಕ್ತವಲ್ಲ..ಎಂದಿದ್ರು. ಇನ್ನು, ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್ ಟೇಕರ್ ಎನಿಸಿಕೊಂಡಿರೋ ಮಾಲಿಂಗಾ, 11ನೇ ಆವೃತ್ತಿಯಲ್ಲೂ ಹರಾಜಾಗದೆ ಇರೋದು ಅವರನ್ನ ಮತ್ತಷ್ಟು ಕುಗ್ಗಿಸಿದೆ. ಹೀಗಾಗಿ ಮಲಿಂಗಾ ವಿಶ್ವಕಪ್​ಗೂ ಮುನ್ನವೇ ನಿವೃತ್ತಿ ಘೋಷಿಸುವ ನಿರ್ಧಾರ ಮಾಡಿದ್ದಾರೆ.
ಸ್ಪೋರ್ಟ್ಸ್ ಬ್ಯೂರೋ ಸುದ್ದಿಟಿವಿ

0

Leave a Reply

Your email address will not be published. Required fields are marked *