ಮೋದಿಯ ಮಹತ್ವಾಕಾಂಕ್ಷಿ ಯೋಜನೆ ಬುಲೆಟ್ ರೈಲು ಯೋಜನೆ ಕುರಿತು ಬಿಜೆಪಿ ನಾಯಕಿ ಹೇಳಿದ್ದೇನು?

ಕೇಂದ್ರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ನನ್ನದು ಒಂದೇ ಒಂದು ವಿನಂತಿ. ಸಾಮಾನ್ಯ ಮನುಷ್ಯರ ಮೇಲೆ ಕರುಣೆ ಇರಲಿ. ಈ ರೈಲುಗಳ ಹಾಳಾಗಿವೆ. 24 ಗಂಟೆಗಳಿಂದ ನಾವು ತುಂಬಾ ಸಮಸ್ಯೆಗಳನ್ನು ಎದುರಿಸಿದ್ದೇವೆ. ರೈಲು ದಿಕ್ಕು ಬದಲಾಯಿಸಿ ನಿಧಾನವಾಗಿ ಚಲಿಸುತ್ತಿದೆ. ಆದರೆ, ಈ ಕುರಿತು ನಮಗೆ ಯಾರೊಬ್ಬರೂ ಸರಿಯಾದ ಮಾಹಿತಿ ನೀಡುತ್ತಿಲ್ಲ. 10 ಗಂಟೆಗಳಷ್ಟು ವಿಳಂಬವಾಗಿ ರೈಲು ಚಲಿಸುತ್ತಿದೆ. ಆದರೆ, ನಮಗೆ ಅವಶ್ಯಕ ಆಹಾರದ ವ್ಯವಸ್ಥೆಯನ್ನು ಮಾಡಿಲ್ಲ. ಗಂಟೆಗೆ 120 ಕಿಮೀ, 200 ಕಿಮೀ ವೇಗದಲ್ಲಿ ಸಂಚರಿಸುವ ರೈಲುಗಳ ಸಂಗತಿಯನ್ನು ಬಿಡಿ. ಜನ ಫುಟ್​ಪಾತ್​ನಲ್ಲಿದ್ದಾರೆ. ಕಾಯುವ ಜನರಿಗೆ ನಿರೀಕ್ಷಣಾ ಕೋಣೆ ಇಲ್ಲ. ಕೊರೆಯುವ ಚಳಿಯಲ್ಲಿ ಜನ ಮೇಲ್ಛಾವಣಿ ಕೂಡ ಇಲ್ಲದ ಸ್ಥಳದಲ್ಲೇ ಮಲಗುತ್ತಾರೆ. ಮೋದಿಜೀ ಮತ್ತು ಪೀಯುಷ್​​ಜೀ ಸಾಮಾನ್ಯ ಜನರತ್ತ ಗಮನ ನೀಡಿ. ರೈಲ್ವೇ ಅಧಿಕಾರಿಗಳು ಲಂಚ ಪಡೆದು ಭ್ರಷ್ಟಾಚಾರ ಎಸಗುತ್ತಿದ್ದಾರೆ. ರೈಲ್ವೇಯ ಸಹಾಯವಾಣಿಗೆ ಕರೆ ಮಾಡಿದರೂ, ಸಚಿವರಿಗೆ ಈಮೇಯ್ಲ್ ಮಾಡಿದರೂ ಯಾವುದೇ ರೀತಿಯಲ್ಲಿ ಪ್ರತಿಸ್ಪಂದನೆ ಸಿಗಲಿಲ್ಲ. ಸಹಾಯವಾಣಿಯ ಜಾಹಿರಾತು ಕೇವಲ ಸುದ್ದಿ ಪತ್ರಿಕೆಗಳಿಗೆ ಮಾತ್ರ ಮೀಸಲೇ?

ಶತಾಬ್ದಿ ಮತ್ತು ರಾಜಧಾನಿ ರೈಲುಗಳಿರುವುದು ಕೇವಲ ಸಿರಿವಂತರಿಗೆ ಮಾತ್ರ. ಬಡವರು, ಕಾರ್ಮಿಕರು ಮತ್ತು ಯೋದರು ಪ್ರಯಾಣಿಸುವ ರೈಲುಗಳ ಗತಿ ಏನು? ರೈಲ್ವೇ ಖಾತೆ ಸಚಿವರು ಇಂತಹ ರೈಲುಗಳಲ್ಲಿ ಪ್ರಯಾಣಿಸಿ ವಸ್ತು ಸ್ಥಿತಿ ಅರಿಯಲಿ. ಮೋದೀಜೀ, ಜನ ಬೇಸರಗೊಂಡಿದ್ದಾರೆ. ಯಾರಿಗೆ ಅಚ್ಚೇ ದಿನ್ ಬಂದಿದೆ ಎಂಬುದು ನನಗೆ ಗೊತ್ತಿಲ್ಲ. ಸಾಮಾನ್ಯ ಜನರ ಪಾಲಿಗಂತೂ ಅಚ್ಛೇ ದಿನ್ ಬಂದಿಲ್ಲ.

– ಲಕ್ಷಿ ಕಾಂತ ಚಾವ್ಲಾ, ಪಂಜಾಬ್​ನ ಮಾಜಿ ಸಚಿವೆ

2.20 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ರೈಲ್ವೇ ಇಲಾಖೆ, ರೈಲ್ವೇ ಸಚಿವ ಪೀಯುಷ್ ಗೋಯಲ್ ಅವರ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಬಿಜೆಪಿ ಮುಜುಗರಕ್ಕೆ ಈಡಾದಂತಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಿಗರು ಕಿಡಿಕಾರಿದ್ದಾರೆ.

0

Leave a Reply

Your email address will not be published. Required fields are marked *