ಕೆ.ಎಸ್​. ಈಶ್ವರಪ್ಪ ಈಗ ಸಿಎಂ ಈಶ್ವರಪ್ಪ ?

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ ಅಂದುಕೊಂಡಿದ್ದ ಬಿಜೆಪಿ ಅಭಿಮಾನಿಗಳ ಪಾಲಿಗೆ ಶಾಕ್ ನ್ಯೂಸ್ ಕಾದಿದೆ.  ಇದು ಅಚ್ಚರಿಯಾದ್ರೂ ಸತ್ಯ. ಹೌದು, ಬಿಎಸ್ ವೈಗೆ ಪರ್ಯಾಯ ನಾಯಕ ಅಂತ ಗುರುತಿಸಿಕೊಂಡಿರೋ ಕೆ.ಎಸ್ .ಈಶ್ವರಪ್ಪ ಮುಂದಿನ ಸಿಎಂ ಆಗ್ತಾರಂತೆ. ಹಾಗಂತ  ಈ ಮಾತನ್ನ ನಾವು ಹೇಳ್ತಿಲ್ಲ. ಇದನ್ನ ಹೇಳಿರೋದು ರಾಯಣ್ಣ ಬ್ರಿಗೇಡ್ ಸದಸ್ಯರು. ಅರಸೀಕೆರೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸದಸ್ಯರು ನೂತನ ವರ್ಷಾಚರಣೆಯ ಶುಭಾಷಯ ಸಂದೇಶದಲ್ಲಿ. ಮುಂದಿನ ಮುಖ್ಯಮಂತ್ರಿ ಈಶ್ವರಪ್ಪನವರಿಂದ ನಾಡಿನ ಜನತೆಗೆ ಶುಭಾಷಯ ಕೋರಿದ್ದಾರೆ. ಒಂದೆಡೆ ಬಣರಾಜಕಾರಣದ ಗುದ್ದಾಟದಲ್ಲಿ ಈಗಾಗಲೇ ಮುಖ ತಿರುಗಿಸಿಕೊಂಡಿರೋ ಬಿಎಸ್ ವೈ ಮತ್ತು ಈಶ್ವರಪ್ಪರಿಗೆ ಈ ವಿಚಾರ ಮತ್ತೊಂದು ಸಂಕಷ್ಟ ತಂದಿಟ್ಟಿದೆ. ಅಭಿಮಾನಿಗಳ ಅಂಧಾಬಿಮಾನ ಈಶ್ವರಪ್ಪರಿಗೆ ಮತ್ತೇನು ಕಂಟಕ ತರತ್ತೋ ಗೊತ್ತಿಲ್ಲ .ಆದರೆ ಸಮಯಕ್ಕೆ ತಕ್ಕ ಪ್ರಚಾರ ಕೊಟ್ಟಿದ್ದು ಮಾತ್ರ ಸುಳ್ಳಲ್ಲ.

 

0

Leave a Reply

Your email address will not be published. Required fields are marked *