ಪಕ್ಷದ ಬಲವರ್ಧನೆಗೆ ಕೆ.ಸಿ. ವೇಣುಗೋಪಾಲ್​ ಕಾರ್ಯತಂತ್ರ….

ಚುನಾವಣೆಗೆ ಸಜ್ಜಾಗೋ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಪಡೆಯನ್ನ ಸನ್ನದ್ಧಗೊಳಿಸಲು ಉಸ್ತುವಾರಿ ವೇಣುಗೋಪಾಲ್ ನಡೆಸುತ್ತಿರೋ ಸಭೆ ಎರಡನೇ ದಿನ ಪೂರೈಸಿದೆ. ಪಕ್ಷದೊಳಗಿನ ಆಂತರಿಕ ಅಸಮಾಧಾನಗಳನ್ನ ಮುಖಂಡರುಗಳ ನಡುವಿನ ಭಿನ್ನಾಭಿಪ್ರಾಯಗಳನ್ನ ಶಮನಗೊಳಿಸುವ ಕಾರ್ಯದಲ್ಲಿ ಸದ್ಯಕ್ಕೆ ವೇಣುಗೋಪಾಲ್ ಯಶಸ್ವಿಯಾಗಿದ್ದಾರೆ. ಇನ್ನು ರಾತ್ರಿ ಬಂಡಾಯ ನಾಯಕ ಜಮೀರ್ ಅಹ್ಮದ್, ವೇಣುಗೋಪಾಲ್‌ರನ್ನು ಭೇಟಿಯಾಗಿದರು.ಪಕ್ಷ ಸಂಘನೆಯನ್ನ ಬಲಗೊಳಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನಡೆಸುತ್ತಿರೋ ಸಭೆ ಫಲಪ್ರಧವಾಗುತ್ತಿದೆ. ಕೆಪಿಸಿಸಿ ಕಚೇರಿಯಲ್ಲಿ ವೇಣುಗೋಪಾಲ್ ಕಳೆದ 2 ದಿನಗಳಿಂದ ಕಾಂಗ್ರೆಸ್ ಭರ್ಜರಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ವೇಣುಗೋಪಾಲ್ ಪ್ರವಾಸದ ಕೊನೆದಿನವಾದ ಇಂದು ಹಲವು ಮುಖಂಡರೊಂದಿಗೆ ಚರ್ಚೆ ನಡೆಸಲಿದ್ದಾರೆ.

ಇನ್ನು ಇತ್ತ ರಾತ್ರಿ ವೇಳೆ ಜೆಡಿಎಸ್ ಬಂಡಾಯ ನಾಯಕ ಜಮೀರ್ ಅಹ್ಮದ್, ಕಾಂಗ್ರೆಸ್ ರಾಜ್ಯ ಉಸ್ತುವಾರಿಯನ್ನು ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಭೇಟಿಯಾಗಿ ಚರ್ಚಿಸಿದ್ರು. ಕಾಂಗ್ರೆಸ್ ಗೆ ಅಧಿಕೃತ ಸೇರ್ಪಡೆಯಾಗೋ ಕುರಿತು ಚರ್ಚೆ ನಡೆದಿದ್ದು, ಜನವರಿಯಲ್ಲಿ ಸೇರ್ಪಡೆಯಾಗುವ ಸಾಧ್ಯತೆಯಿದೆ. ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಸಮಾವೇಶದ ಮೂಲಕ ಪಕ್ಷ ಸೇರ್ಪಡೆ ಕುರಿತು ಚರ್ಚೆ ನಡೆದಿದೆ. ಅಲ್ಲದೇ ವೇಣುಗೋಪಾಲ್, ಎಲ್ಲಾ 7 ಬಂಡಾಯ ಶಾಸಕರಿಗೂ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ.ನಿನ್ನೆ ನಡೆದ ಸಭೆಯಲ್ಲಿ ವೇಣುಗೋಪಾಲ್ ರ ಕೆಲವು ಸಲಹೆಗಳನ್ನ ಸ್ವಾಗತಿಸಿದ ಪಕ್ಷ ಪ್ರಮುಖರು ಅದನ್ನ ಕಾರ್ಯಗತಗೊಳಿಸೋ ಭರವಸೆ ನೀಡಿದ್ದಾರೆ. ಇನ್ನು ನಿನ್ನೆ ಬೆಂಗಳೂರು ವಿಭಾಗದ ಸಭೆಯಲ್ಲಿ ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳ ಮುಖಂಡರು ಭಾಗವಹಿಸಿದ್ರು. ಇನ್ನು ಸಭೆಗೆ ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ, ನಿರ್ಮಾಪಕ ಕೆ. ಮಂಜು ಹಾಜರಾಗಿ ಅಚ್ಚರಿ ಮೂಡಿಸಿದ್ರು.

ಒಟ್ನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಕಳೆದ 2 ದಿನಗಳಿಂದ ಆರಂಭಗೊಂಡಿರೋ ಸರಣಿ ಸಭೆ ಪಕ್ಷಕ್ಕೊಂದು ಹೊಸ ಹುರುಪು ತಂದಿದೆ. ಜೊತೆಗೆ ಹೊಸ ಮುಖಗಳ ಅನಾವರಣಕ್ಕೂ ವೇದಿಕೆಯಾಗಿ ಬದಲಾಗ್ತಿದೆ. ಅಂತಿಮ ದಿನವಾದ ಇಂದು ಸಭೆಯ ನಿರ್ಧಾರ ಏನಾಗತ್ತೋ ಅಂತಾ ಕಾದು ನೋಡಬೇಕು.

ಪೊಲಿಟಿಕಲ್ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *