ಕೊಹ್ಲಿ ಪಡೆಗೆ ಶುರುವಾಗಿದೆ ಚಿಂತೆ.!!

ಟೀಮ್​ ಇಂಡಿಯಾ ನಾಳೆಯಿಂದ ಕೋಲ್ಕತಾದಲ್ಲಿ ಟೆಸ್ಟ್​ ಪಂದ್ಯವನ್ನು ಆಡಲು ಸಜ್ಜಾಗಿದೆ. ಭರ್ಜರಿ ಫಾರ್ಮ್​​​ನಲ್ಲಿರುವ ಕೊಹ್ಲಿ ಪಡೆ ವಿಶ್ವಾಸದಲ್ಲಿದೆ. ಆದ್ರೆ ಒಂದು ಚಿಂತೆ ಮಾತ್ರ ಆತಿಥೇಯ ತಂಡವನ್ನು ಬಹುವಾಗಿ ಕಾಡ್ತಿದೆ.

ಹೌದು.. ವಿರಾಟ್​ ಕೊಹ್ಲಿ ಪಡೆ ಟೆಸ್ಟ್​ನಲ್ಲಿ ನಂಬರ್​ 1 ಸ್ಥಾನವನ್ನು ಪಡೆದು ಬೀಗಿದೆ. ಆಟಗಾರರ ಪ್ರದರ್ಶನಕ್ಕೂ ವಿಶ್ವವ್ಯಾಪಿ ಮೆಚ್ಚುಗೆ ಪಾತ್ರವಾಗಿದೆ. ಇನ್ನು ತಂಡದಲ್ಲಿ ಆಟಗಾರರ ಹೊಂದಾಣಿಕೆ ಮ್ಯಾನೆಜ್​ಮೆಂಟ್​​ಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಯಂಗ್​ ಟೀಮ್​ ಎಲ್ಲ ರೆಕಾರ್ಡ್​​ ಬ್ರೇಕ್​ ಮಾಡ್ತಾ ಇದ್ದು, ನವ ಉತ್ಸಾಹದಲ್ಲಿದೆ.

ಆದ್ರೆ ಟೀಮ್​ ಇಂಡಿಯಾಗೆ ಒಂದು ಚಿಂತೆ ಮಾತ್ರ ಬಹುವಾಗಿ ಕಾಡ್ತಾ ಇದೆ. ಅದು ಯಾವ ಮಟ್ಟಿಗೆ ಅಂದ್ರೆ ಕೊಹ್ಲಿ ಯಾರನ್ನು ಕಣಕ್ಕೆ ಇಳಿಸಬೇಕೆಂಬ ಚಿಂತೆಯಲ್ಲಿದ್ದಾರೆ. ಈ ಜೋಡಿಯಲ್ಲಿ ಯಾರನ್ನು ಕೈ ಬಿಡಬೇಕು ಎಂಬ ಚಿಂತೆ ತಂಡವನ್ನು ಬಹುವಾಗಿ ಕಾಡ್ತಿದೆ.

ಇಷ್ಟು ಸರಣಿಗಳಲ್ಲಿ ಈ ಸಮಸ್ಯೆ ತಂಡಕ್ಕೆ ಅಷ್ಟಾಗಿ ಏನು ಕಾಡಿರಲಿಲ್ಲ. ಏಕೆಂದ್ರೆ ಒಬ್ಬ ಆರಂಭಿಕ ಗಾಯವಾಗಿ ಸರಣಿಯಿಂದ ಹೊರ ನಡೆದಿದ್ದೆ ಹೆಚ್ಚಾಗಿತ್ತು. ಹೀಗಾಗಿ ತಂಡದ ಆಯ್ಕೆಯಲ್ಲಿ ಗೊಂದಲವೇನು ಇದ್ದಿರಲಿಲ್ಲ. ಆದ್ರೆ ಈ ಬಾರಿ ಮೂವರು ಆರಂಭಿಕರು ಫಿಟ್​ ಆಗಿದ್ದು, ಲಂಕಾ ವಿರುದ್ಧದ ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ.

ಲಂಕಾ ಪ್ರವಾಸದ ವೇಳೆಯಲ್ಲಿ ಮುರಳಿ ವಿಜಯ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ರು. ಇವರ ಸ್ಥಾನದಲ್ಲಿ ಶಿಖರ್​ ಧವನ್​ ಹಾಗೂ ಕೆ.ಎಲ್​ ರಾಹುಲ್​ ತಂಡವನ್ನು ಮುನ್ನಡೆಸಿದ್ದರು. ಆದ್ರೆ ಈಗ ಮೂವರು ತಂಡದಲ್ಲಿ ಇರೋದ್ರಿಂದ 11ರ ಬಳಗದಲ್ಲಿ ಯಾರು ಆಡುವ  ಸ್ಥಾನ ಪಡೆಯುತ್ತಾರೆ ಎಂಬ ಕುತೂಹಲ ಇದೆ.

ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ತ್ರಿಮೂರ್ತಿಗಳು ಬೆಸ್ಟ್​​. ಎಡಗೈ ಆಟಗಾರ ಶಿಖರ್​ ಧವನ್​ ಲಂಕಾ ನೆಲದಲ್ಲಿ ಶತಕ ಬಾರಿಸಿ, ತಮ್ಮ ಕ್ಷಮತೆಯನ್ನು ಪ್ರದರ್ಶಿಸಿದ್ದರು. ಇನ್ನು ಕೆ.ಎಲ್​ ರಾಹುಲ್​ ಸಹ ಸತತ 7 ಅರ್ಧಶತಕ ಬಾರಿಸಿ ವಿಶ್ವದ ಗಮನ ಕದ್ದಿದ್ದರು. ಇನ್ನೊಂದು ಅರ್ಧಶತಕ ಬಾರಿಸಿದ್ರೆ ದಾಖಲೆ ಫಿಕ್ಸ್​​. ಮುರುಳಿ ವಿಜಯ್​ ಗಾಯದಿಂದ ಚೇತರಿಸಿಕೊಂಡ ಬಳಿಕ, ದೇಶಿಯ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ್ದರು. ಹೀಗಾಗಿ ಮತ್ತೆ ವಿಜಯ್ ಆಯ್ಕೆದಾರರ ಗಮನ ಗೆದ್ದಿದ್ದರು.

ಗುರುವಾರದಿಂದ ಆರಂಭವಾಗುವ ಪಂದ್ಯದಲ್ಲಿ ಯಾರು ಟೀಮ್​ ಇಂಡಿಯಾ ಪರ ಕಣಕ್ಕೆ ಇಳಿಯುತ್ತಾರೆ ಎಂಬ ಕುತೂಹಲ ಹೆಚ್ಚಿದೆ. ಆಡುವ 11ರ ಬಳಗದಲ್ಲಿ ಕನ್ನಡಿಗ ರಾಹುಲ್​ಗೆ ಸ್ಥಾನ ಸಿಗುತ್ತಾ..? ಧವನ್​ ಹಾಗೂ ಮುರಳಿಯೇ ಇನ್ನಿಂಗ್ಸ್​ ಆರಂಭಿಸ್ತಾರಾ..? ಎಂಬ ಪ್ರಶ್ನೆಗಳು ಡ್ರೆಸ್ಸಿಂಗ್​ ರೂಮ್​ ಚಿಂತೆಯನ್ನು ಹೆಚ್ಚಿಸಿದ್ದು, ತಂಡದ ಆಯ್ಕೆಯಲ್ಲಿ ಕೊಹ್ಲಿ ಯಾವ ತಂತ್ರಕ್ಕೆ ಮಣೆ ಹಾಕ್ತಾರೆ ಅನ್ನೋದು ಕಾದು ನೋಡಬೇಕಿದೆ.

ವಿನಾಯಕ ಲಿಮಯೆ, ಸ್ಪೋರ್ಟ್ಸ್​ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *