ಕೊಡಗಿನಲ್ಲಿ ಮುಂದುವರಿದ ಮಹಾಮಳೆಯ ಆರ್ಭಟ

ಮುಂದುವರಿದ ರಕ್ಷಣಾ ಕಾರ್ಯಾಚರಣೆ, ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಧಾರಾಕಾರ ಮಳೆ, ದ.ಕ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಎನ್​​.ಡಿ.ಆರ್.ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಸುದ್ದಿಟಿವಿಗೆ ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿಕೆ, ಇವತ್ತು ನೂರು ಜನರನ್ನು ರಕ್ಷಣೆ ಮಾಡಿದ್ದೀವಿ, ಸಂಜೆಯವರೆಗೆ ಎಲ್ಲರನ್ನೂ ರಕ್ಷಣೆ ಮಾಡಲಾಗುತ್ತೆ, ಗಡಿ ಭಾಗದಲ್ಲಿ ನಿನ್ನೆ ಬೆಳಗ್ಗೆಯಿಂದ ಜಿಲ್ಲಾಡಳಿತ ಕಾರ್ಯಾಚರಣೆ ನಡೆಸುತ್ತಿದೆ. ಸಂತ್ರಸ್ತರಿಗೆ ಗಂಜಿ ಕೇಂದ್ರದಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ, ಸುದ್ದಿಟಿವಿಗೆ ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿಕೆ.

ಕೊಡಗಿನಲ್ಲಿ ಮಹಾಮಳೆಗೆ ಜನ ತತ್ತರಿಸಿದ್ದಾರೆ. ಸೋಮವಾರಪೇಟೆ ಬಳಿ ಐಗೂರಿನ ಮಕ್ಕಳಾಗುಡಿ ಸಮೀಪ ಗುಡ್ಡಕುಸಿತವಾಗಿದೆ. ಮದೆನಾಡು, ಜೋಡುಪಾಲ ವ್ಯಾಪ್ತಿಯ 150 ಮಂದಿ ರಕ್ಷಣೆ ಮಾಡಲಾಗಿದೆ. ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದಿರೋದ್ರಿಂದ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. ಎನ್​ಡಿಅರ್​ಎಫ್, ಸ್ಥಳೀಯರಿಂದ ರಕ್ಷಣಾ ಕಾರ್ಯ ಮುಂದುವರಿದಿದೆ.

0

Leave a Reply

Your email address will not be published. Required fields are marked *