ಕೊಡಗಿನ ಜನತೆ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ: ಸಿಎಂ ಕುಮಾರಸ್ವಾಮಿ

ಯಾರೂ ಅತಂಕಕ್ಕೊಳಗಾಗಬೇಡಿ, ನಿಮ್ಮ ನೋವನ್ನು ಅರ್ಥ ಮಾಡಿಕೊಂಡಿದ್ದೇವೆ, ನಿಮ್ಮ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿದೆ. ಹಣದ ಕೊರತೆಯಿಲ್ಲ, ಹೊಸ ಜೀವನ ಮಾಡಲು ಸರ್ಕಾರ ಸಹಾಯ ಮಾಡಲಿದೆ, ಮಡಿಕೇರಿಯಲ್ಲಿ ಸಿಎಂ ಕುಮಾರಸ್ವಾಮಿ ಹೇಳಿಕೆ. ಮಳೆ ನಿಂತ ತಕ್ಷಣ ಮನೆ ನಿರ್ಮಿಸಿಕೊಡುತ್ತೇವೆ, ಕೊಡಗಿನ ಜನತೆ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ, ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡುತ್ತೇವೆ, ಮೃತಪಟ್ಟ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡುತ್ತೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವೈಮಾನಿಕ ಸಮೀಕ್ಷೆ ನಡೆಸಿದ್ರು. ಮಳೆ ಅವಾಂತರದಿಂದ ಅಕ್ಷರಶಃ ದ್ವೀಪದಂತಾಗಿರುವ ಮಂಜಿನ ನಗರಿ ನೈಜ ಸ್ಥಿತಿಯನ್ನು ಕಣ್ತುಂಬಿಕೊಂಡರು. ಮಡಿಕೇರಿಯಲ್ಲಿ ಇಂದು ಮಳೆ ಕೊಂಚ ಕಡಿಮೆಯಾಗಿದೆ. ಆದರೆ ಪ್ರವಾಹ ಹಾಗೂ ಭೂ ಕುಸಿತದಿಂದ ತಮ್ಮದೆಲ್ಲವನ್ನು ಕಳೆದುಕೊಂಡು ನಿರಾಶ್ರಿತರು ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಮಡಿಕೇರಿಯಲ್ಲಿ ಪ್ರವಾಹದ ವೇಳೆ ಭೂಕುಸಿತದಿಂದಾಗಿ ಅನೇಕರು ಮುಳುಗಿ ಹೋಗುತ್ತಿರುವ ತಮ್ಮ ಮನೆ ಮಠ ಸಾಕುಪ್ರಾಣಿಗಳನ್ನು ಬಿಟ್ಟು ಗಂಜಿ ಕೇಂದ್ರದಲ್ಲಿ ಬಂದು ಆಶ್ರಯ ಪಡೆದಿದ್ದಾರೆ. ಅಲ್ಲದೇ ಈ ಮಹಾಮಳೆಗೆ ಇದುವರೆಗೆ 6 ಜನ ಮೃತಪಟ್ಟಿದ್ದು, 11000 ಜನ ನಿರಾಶ್ರಿತರಾಗಿದ್ದಾರೆ. ಸುಮಾರು 1000 ರಕ್ಷಣಾ ಸಿಬ್ಬಂದಿಗಳು ಸಂಕಷ್ಟದಲ್ಲಿ ಸಿಲುಕಿರುವವರ ರಕ್ಷಣೆಗೆ ದಾವಿಸಿದೆ ಎಂದು ಸಿಎಂ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

0

Leave a Reply

Your email address will not be published. Required fields are marked *