ಫ್ಯಾಶನ್ ಅಂದ್ರೆ ಹೊಸ ಲುಕ್, ಹೊಸ ಟ್ರೆಂಡ್..

ಫ್ಯಾಶನ್ ಅಂದ್ರೆ ಹೊಸ ಲುಕ್, ಹೊಸ ಟ್ರೆಂಡ್… ಸಿರೀಯಲ್ ,ಸಿನಿಮಾ ನಟಿಮಣಿಯರ ಡಿಫರೆಂಟ್ ಆಗಿರುವಂತಹ ಡ್ರೆಸ್ ಗಳನ್ನಾ ನೋಡಿ ವಾವ್ …ಎಷ್ಟು ಸಕ್ಕತ್ತಾಗಿದೆ ಅಲ್ವಾ ಅಂತ ಅನ್ಕೋತ್ತಿವಿ.. ನಾವು ಕೂಡ ಅವ್ರ ತರ ಡಿಫರೆಂಟ್ ಡಿಸೈಂನ್ಸ್ ಬಟ್ಟೆ ಹಾಕೊ ಬೇಕು… ಎಲ್ಲಾಪ್ಪ ತರೋದು ಅಷ್ಟು ಡಿಫರೆಂಟ್ ಆಗಿರೊ ಬಟ್ಟೆಗಳನ್ನಾ ಅಂತಾ ಯೋಚನೆ ಮಾಡ್ತಾಯಿದ್ದಿರಾ ನೋ ವರೀಸ್….ಖಂಡಿತಾ ಹೌದು …. ಯಾರಿಗ್ ತಾನೇ ನಾವು ಡಿಫರೆಂಟ್ ಡಿಸೈಂನ್ಸ್ ಬಟ್ಟೆ ಗಳನ್ನಾ ಹಾಕೊ ಬೇಕು ಅಂತಾ ಆಸೆ ಇರಲ್ಲಾ ಹೇಳಿ. ಇನ್ನ ಸಿರಿಯಲ್ ಪ್ರಿಯರೆಂತು ಒಂದು ದಿನನೂ ಮಿಸ್ ಮಾಡ್ಡೆ ಸಿರಿಯಲ್ ನೋಡ್ತಾರೆ ಅದರಲ್ಲಿ ಅವರು ಹಾಕೊ ಬಟ್ಟೆಗಳಿಗೆ,, ಡಿಸೈಂನ್ಸ್ ಗಳಿಗೆ ಎಲ್ಲಾ ಮಹಿಳೆಯರು ಫಿದಾ ಆಗಿರ್ತಾರೆ… ನಮಗೂ ಈ ತರ ಡಿಸೈಂನ್ಸ್ ಬಟ್ಟೆ ಹಾಕೊ ಬೇಕು ಅಂತಾ ಎಲ್ಲಾರಿಗೂ ಆಸೆ ಇದ್ದೆ ಇರಾತ್ತೆ…

ಬಣ್ಣದ ಜಗತ್ತಿನ ನಟಿ ಮಣಿಯರ ಅಲಂಕಾರ ಮತ್ತು ವಸ್ತ್ರವಿನ್ಯಾಸದ ಆಯ್ಕೆಯಲ್ಲಿ ಬ್ಯೂಟಿಷಿಯನ್ , ಹಾಗೂ ಡಿಸೈನರ್ಸ್ ಗಳು ಅತೀ ಮುಖ್ಯ . ನಾವು ಯಾವುದೇ ಬಟ್ಟೆ ತೆಗೆದು ಕೊಳ್ಳುವಾಗ ಮೊದಲು ನೋಡೊದೆ ಬಟ್ಟೆಯಲ್ಲಿ ಯಾವ ಡಿಸೈನ್ ಇದೆ. ಯಾವುದು ಚೆನ್ನಾಗಿಯಿದೆ ಅಂತಾ ನೋಡ್ತೀವಿ . ಫ್ಯಾಶನ್ ಜಗತ್ತು ವಿಸ್ತಾರವಾದಂತೆ ಅದರ ಮಹತ್ವವು ಹೆಚ್ಚಾಗುತ್ತಿದೆ.ಇವರು ಮೂಲತಹ ಮಂಗಳೂರಿನ ಹುಡುಗಿ ಶಿಲ್ಪಾ … ಫ್ಯಾಶನ್ ಲೋಕದಲ್ಲಿ ಏನಾದ್ರು ಸಾಧಿಸಬೇಕು ಅಂತಾ ಹಠ ತೋಟ್ಟು 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ್ರು ,… ಸ್ನೇಹಿತೆ ಶೃತಿ ಒಡನೆ ಸೇರಿ ಫ್ಯಾಶನ್ ಗೆ ಸಂಭಂದ ಪಟ್ಟಂತೆ ಕೆಲವಂದಿಷ್ಟು ತಮ್ಮದೆ ವಿನ್ಯಾಸದಲ್ಲಿ ಡಿಸೈಂನ್ಸ್ ಗಳನ್ನಾ ಮಾಡಿ ಸುಮಾರು ಎರೆಡು ವರ್ಷದ ಹಿಂದೆಯಷ್ಟೆ ಟೈನ್ ಓಟ್ ಎಂಬಾ ಬುಟಿಕ್ ಓಪನ್ ಮಾಡಿದ್ದಾರೆ …

ಇವ್ರು ಸೆಲೆಬ್ರೇಟಿಗಳಿಗೆ,,ಕಿರುತರೆ ನಟ ನಟಿಯರಿಗೆ, ಅಗ್ನಿಸಾಕ್ಷಿ ಧಾರವಾಹಿಯ ಖಳನಾಯಕಿ ಚಂದ್ರಿಕ ನಟಿ ವೈಷ್ಣವಿ,,ನಿರೂಪಕಿ ಅನುಶ್ರೀ ಹೀಗೆ ಹಲವಾರು ಕಿರುತರೆ ನಟಿ ಮಣಿಯರಿಗೂ ಇವ್ರು ವಸ್ತ್ರ ವಿನ್ಯಾಸ ವನ್ನು ಮಾಡಿದ್ದಾರೆ.. ತುಳು ಭಾಷೆಯ ಅಪ್ಪೆ ಟೀಚರ್ ಸಿನಿಮಾದಲ್ಲೂ ಕೂಡ ಇವರದ್ದೆ ವಸ್ತ್ರ ವಿನ್ಯಾಸ … ಈ ಸಿನಿಮಾ ಈಗಾಗಲೇ ಬಹುದೊಢ್ಡ ಹೆಸರು ಮಾಡಿದು ಶಿಲ್ಪಾ ಅವರಿಗೂ ಕೂಡ ಈ ಸಿನಿಮಾದಿಂದ ಬಹು ದೊಡ್ಡ ಹೆಸ್ರು ಬಂದಿದೆ… ಫ್ಯಾಶನ್ ಲೋಕದಲ್ಲೇ ದೊಡ್ಡ ಹೆಸ್ರು ಮಾಡಬೇಕು ಅನ್ನೊದು ಶಿಲ್ಪಾ ಅವರ ಬಹು ದೊಡ್ಡ ಕನಸು.

ಇಲ್ಲಿ ವಸ್ತ್ರ ವಿನ್ಯಾಸದ ಜೊತೆಗೆ ಗ್ರಾಹಕರಿಗೆ ಕಾಸ್ಮೇಟಿಕ್ ಪ್ರಾಡೆಕ್ಟ್ ಗಳು ,, ಡ್ರೆಸ್ ಗೆ ಸೂಟ್ ಆಗುವಂತ ಇಯರ್ ರಿಂಗ್ ಗಳು,,, ಮದುವೆ ಸಮಾರಾಂಭಗಳಿಗೆ ಮೇಕಪ್,,, ಹೀಗೆ ಎಲ್ಲಾ ರೀತಿಯ ಸೌಲಭ್ಯಗಳು ಈ ಒಂದೇ ಶಾಪ್ ನಲ್ಲೇ ಸಿಗುತ್ತೆ.. ಇಲ್ಲಿ ಡಿಸೈನ್ ಗೆ ತಕ್ಕಂತೆ ಬೆಲೆಯನ್ನ ನಿಗದಿ ಮಾಡಲಾಗಿದೆ.ಬೆಲೆ ಎಷ್ಟೆ ಇದ್ರು ಪರವಾಗಿಲ್ಲಾ .. ನಾವು ತೋರಿಸಿದ ಡಿಸೈನ್ , ನಮಗೆ ಯಾವ ರೀತಿ ಸ್ಟೀಚ್ಚಿಂಗ್ ಬೇಕು ಆ ರೀತಿ ಮಾಡಿ ಕೊಡ್ತಾರೆ. ಬೇರೆ ಬೂಟಿಕ್ ಗೆ ಕಂಪೇರ್ ಮಾಡುದ್ರೆ ಇಲ್ಲಿ ಕಡಿಮೆ ಬೆಲೆಗೆ ನಾವು ಇಷ್ಟ ಪಡೊ ಡ್ರೇಸ್ಸಸ್ ನಮ್ಮದು ಆಗುತ್ತೆ ಅಂತಾರೆ ಗ್ರಾಹಕರು…ಒಟ್ನಲ್ಲಿ ಪ್ರತಿ ದಿನವೂ ಈ ಫ್ಯಾಶನ್ ಜಗತ್ತು ಅಪ್ಡೇಟ್ ಆಗ್ತಾನೆ ಇರಾತ್ತೆ…ನಾವು ಕೂಡ ದಿನವೂ ಆಪ್ ಡೇಟ್ ಆಗಬೇಕು. ಹಳೆ ಫ್ಯಾಶನ್ ಬಳಸದೆ ಹೋಸ ಪ್ರಯೊಗಗಳನ್ನು ಮಾಡಲು ಮುಂದಾಗಬೇಕು ನಾವು ಮಾಡಿದ ವಿನ್ಯಾಸ ಜನ್ರಿಗೆ ಇಷ್ಟ ಆದ್ರೆ ಆಗಾ ಮಾತ್ರ ಅದು ಟ್ರೆಂಡ್ ಆಗಿ ಬದಲಾಗುತ್ತೆ ಅಂತಾರೆ ಶಿಲ್ಪಾ ಪೂಜಾರಿ….

ಸುಪ್ರಿಯಾ ಶರ್ಮಾ ಸುದ್ದಿ ಟಿವಿ ಬೆಂಗಳೂರು…….

0

Leave a Reply

Your email address will not be published. Required fields are marked *