ಹಿಂಸೆ, ಪಿತೂರಿಗೆ ವಿಕಾಸವೇ ಉತ್ತರ: ಪ್ರಧಾನಿ ನರೇಂದ್ರ ಮೋದಿ

ಛತ್ತೀಸ್​ಘಡ: ಛತ್ತೀಸ್​​ಗಡದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಭಿಲಾಯಿ ಕೇವಲ ಉಕ್ಕನ್ನು ನಿರ್ಮಿಸುತ್ತಿದ್ದಲ್ಲ. ದೇಶದ ಜನರ ಜೀವನ, ಸಮಾಜವನ್ನೂ ಕಟ್ಟುವಲ್ಲಿ ನೆರವಾಗಿದೆ ಎಂದು ಅಭಿಪ್ರಾಯಪಟ್ಟರು. ಭಿಲಾಯಿಯಲ್ಲಿ ಸ್ಥಾಪನೆಯಾಗಿರುವ ಹೊಸ ಉಕ್ಕು ಘಟಕ ನವ ಭಾರತ ಸೃಷ್ಟಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಈ ಹಿಂದೆ ಕೇವಲ ರಸ್ತೆ ಸಂಪರ್ಕ ಮಾತ್ರ ಇತ್ತು. ಈಗ ರಸ್ತೆಗಳೊಂದಿಗೆ ವಿಮಾನದ ಮೂಲಕ ಕೂಡ ಸಂಪರ್ಕ ಸಾಧ್ಯವಾಗಿದೆ ಎಂದರು.

ನವ ರಾಯ್​ಪುರ್ ದೇಶದ ಮೊದಲ ಹಸಿರು ಮೈದಾನದ ಸ್ಮಾರ್ಟ್ ಸಿಟಿಯಾಗಿದೆ. ನೀರು, ವಿದ್ಯುತ್, ಬೀದಿ ದೀಪ, ಒಳ ಚರಂಡಿ, ಸಂಪರ್ಕ ಮತ್ತು ಸುರಕ್ಷತಾ ಸೌಲಭ್ಯವನ್ನು ನಗರಕ್ಕೆ ಒದಗಿಸಲಾಗಿದೆ. ಇದು ದೇಶದ ಸ್ಮಾರ್ಟ್ ಸಿಟಿಗಳಿಗೆ ಒಂದು ಉದಾಹರಣೆ ಎಂದು ಅವರು ಹೇಳಿದರು. ಯಾವುದೇ ರೀತಿಯ ಹಿಂಸೆ, ಪಿತೂರಿಗಳಿಗೆ ವಿಕಾಸ ಒಂದೇ ಉತ್ತರ ಎಂದು ನಾನು ನಂಬುತ್ತೇನೆ. ಇದೇ ವಿಕಾಸದಿಂದ ವಿಶ್ವಾಸ ವಿಕಸಿತವಾಗುತ್ತದೆ. ಇದರಿಂದ ಎಲ್ಲ ರೀತಿಯ ಹಿಂಸೆಯನ್ನು ಕೊನೆಗಾಣಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

0

Leave a Reply

Your email address will not be published. Required fields are marked *