ಕಿಡ್ಸ್ ನೈಲ್ ಆರ್ಟ್…

ಹೆಂಗಳೆಯರು ಅಲಂಕಾರ ಪ್ರಿಯರು ಸದಾ ಯಾವುದಾದ್ರು ಹೊಸ ಟ್ರೆಂಡ್ ಬಂದಿದೆಯಾ ಅಂತ ಹುಡುಕ್ತಾ ಇರ್ತಾರೆ ಬಣ್ಣಗಳು ಅಂದ್ರೆ ಯಾರಿಗೆ ತಾನೇ ಇಷ್ಟಇಲ್ಲ. ಅದರಲ್ಲೂ ಮಕ್ಕಳಿಗಂತೂ ಬಣ್ಣಗಳಲದ್ದೇ ಲೋಕ. ಬೇಸಿಗೆ ರಜೆ ಯಲ್ಲಿ ಮಜಾ ಮಾಡುತ್ತಿರುವ ಮಕ್ಕಳಿಗೆ ,ಹೆಂಗಳಿಯರಿಗೆ ಫ್ಯಾಷನ್ ಲೋಕದಲ್ಲಿಗಾ ಹೊಸ ಕೊಡುಗೆ ಇದೆ…ಹೊಸ ಬಗೆ ಬಗೆಯ ಟ್ರೇಂಡ್ ಗಳನ್ನು ಪ್ರಯೋಗ ಮಾಡುತ್ತಾ ಸಾಮಾಜಿಕ ಜಾಲಾತಾಣಗಳಲ್ಲಿ ಖ್ಯಾತಿ ಪಡೆದಿರುವ ಬ್ಯೂಟಿ ಎಕ್ಸ್ ಪರ್ಟ್​ ಆಗಿರೊ ಚಿತ್ರಾಶ್ರೀ ಹರ್ಷ ಕಾಲೇಜಿನಲ್ಲಿ ಉಪಾನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಾಯಿದ್ದಾರೆ..ಆದ್ರೆ ಇವರ ಒಲವು ಐ ಮೇಕಪ್ ,ನೇಲ್ ಆರ್ಟ್​ ಕಡೆ ಹೆಚ್ಚು ಇದ್ದಿದ್ರಿಂದ ಇದನ್ನು ಹವ್ಯಾಸವಾಗಿ ಮಾಡಿಕೊಂಡು ಡಿಫರೆಂಟ್ ಡಿಫರೆಂಟ್ ಆಗಿರೊ ನೈಲ್ ಆರ್ಟ್​ ಗಳನ್ನು ಮಾಡಲು ಶುರುಮಾಡಿದ್ದಾರೆ…..ಇಷ್ಟ ದಿನ ಬರಿ ದೊಡ್ಡವರಿಗೆ ಈ ನೈಲ್ ಆರ್ಟ್​ ಕ್ರೇಜ್ ಆಗಿತ್ತು …ಆದ್ರೆ ಈಗಾ ಮಕ್ಕಳಿಗು ಕೂಡ 3ಡಿ ನೈಲ್ ಆರ್ಟ್​ಗಳು ಬಂದಿದೆ.ಬೇಸಿಗೆ ರಜೆ ಇರೊದ್ರಿಂದ ಎಲ್ಲಾ ಮಕ್ಕಳು ಅವರವರ ಅಜ್ಜಿ ಮನೆ, ಮಾಲು, ಮೈದಾನ ಅಂತ ಸುತ್ತು ಹಾಕ್ತ ಇರ್ತಾರೆ..ಈಗಾ ಎಲ್ಲಿ ನೋಡುದ್ರು ಈ ಕಿಡ್ಸ್ ನೈಲ್ ಆರ್ಟ್ ಮಕ್ಕಳನ್ನಾ ತನ್ನತ್ತ ಸೆಳೆಯುತ್ತಿದೆ .ನೈಲ್ ಪಾಲಿಷ್ ನ ಮೋಹಕ್ಕೆ ವಯೋಮಿತಿಯ ಭೇದವಿಲ್ಲ. ಚಿಕ್ಕ ಕಂದಮ್ಮಗಳಿಂದ , ಹಿಡಿದು, ಅರವತ್ತರ ಬ್ಯೂಟೀ ಗೂ ಬಣ್ಣದ ಉಗುರಿನ ಆಸೆ ಇದೆ . ಪುಟ್ಟ ಮಕ್ಕಳಿಗಂತೂ ನೈಲ್ ಪಾಲಿಷ್ ಧರಿಸುವುದೇ ಸಂಭ್ರಮ…

ಕೇವಲ ಬಣ್ಣಮಾತ್ರವಲ್ಲ, ಕೈ ಮೇಲೆ ಮೂಡಿರುವ ಇವರ ಬಹು ಇಷ್ಟದ ಪ್ಲವರ್,ಮರ್ಮೇಡ್, ನಾನೋ ಫಿಶ್, ವಾಟರ್ ಮೇಲನ್ ಹೀಗೆ ಹತ್ತು ಹಲವಾರು ನೈಲ್ ಆರ್ಟ್​ ಗಳನ್ನಾ ಸೂಕ್ಷ್ಮವಾಗಿ ಕೈ ಉಗುರುಗಳಿಗೂ ಮೇಲೆ ಮೂಡಿಸಲಾತ್ತದೆ. ಕೈ ಗಳ ಮೇಲೆ ಬಣ್ಣದ ಕಾರ್ಟೂನ್ ಗಳ ಟಾಟೂ ಹಾಕಿ ಖುಷಿ ಪಡುವ ಫ್ಯಾಷನ್ ಪ್ರೀಯರಿಗೆ ಬಂದಿದೆ ಈ ನೈಲ್ ಆರ್ಟ್ ” ಮಕ್ಕಳ ಪುಟ್ಟ ಕೈ ಉಗುರುಗಳ ಸಿಂಗರಿಸಿದ ಬಣ್ಣ ಬಣ್ಣದ ಆಕರ್ಷಕ ಚಿತ್ತಾರಗಳು. ಮಕ್ಕಳಿಗೆಂದೇ ಹಲವಾರು ವೆರೈಟಿಗಳಲ್ಲಿ ನೈಲ್ ಆರ್ಟ್ ಸಿದ್ಧ ಗೊಂಡಿದೆ. ಇದರ ಜೊತೆಗೆ ನಾವು ಇವತ್ತಿನ ಆಧುನಿಕ ಯುಗದಲ್ಲಿ ಎಲ್ಲವೂ 3ಡಿ ಗೆ ಒಳಪಟ್ಟಿದೆ. 3ಡಿ ಸಿನಿಮಾ, ಜೇಮ್ಸ್, ಮೊಬೈಲ್, ಹೀಗೆ ಈ 3ಡಿ ಪ್ರಿಯ ಯುಗಕ್ಕೆ ಮ್ಯಾಚ್ ಮಾಡಲು ಬಂದಿವೆ 3ಡಿ ನೈಲ್ ಆರ್ಟ್ . ಮಕ್ಕಳಿಂದ ಹಿಡಿದು ದೊಡ್ಡವರಿಗೂ ಈ 3ಡಿ ನೈನಲ್ ಆರ್ಟ್​ ನೋಡಿದರೆ ಎಲ್ಲಿಲ್ಲದ ಖುಷಿ . ದಿನನಿತ್ಯ ಟೀವಿಯಲ್ಲಿ ನೋಡ ಸಿಗುವ ನೆಚ್ಚಿನ ಕಾರ್ಟೂನ್ ಗಳು ಪುಟಾಣಿಗಳ ಕೈ ಉಗುರು ಗಳಲ್ಲಿ ಅಲಂಕರಿಸಬಹುದು. ಜೊತೆಗೆ ಕೈ ಉಗುರುಗಳ ಮೇಲೆ ಬಣ್ಣದ ಗುಲಾಬಿ, ಸೂರ್ಯಕಾಂತಿ ಹೂಗಳೂ ಕೂಡ ಅರಳುತ್ತವೆ.

ಸುಪ್ರಿಯಾಶರ್ಮಾ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *