ರಿವಿಲ್​ ಆಯ್ತು ಕಿಚ್ಚನ ಭರ್ಜರಿ ಲುಕ್​..

ಪೊಲಿಟಿಕಲ್​ ಹಾಗೂ ಸಿನಿಮಾ ರಂಗ ಎರಡನ್ನು ಬ್ಯಾಲೆನ್ಸ್​ ಮಾಡ್ತಿರೋ ಹಿರಿಯ ನಟ ರೆಬೆಲ್​ ಸ್ಟಾರ್​ ಅಂಬರೀಶ್​. ಸದ್ಯ ಟೈಟಲ್​ ಮೂಲಕವೇ ಸಿಕ್ಕಾಪಟ್ಟೆ ಕ್ರೇಜ್​ ಕ್ರಿಯೇಟ್​ ಮಾಡ್ತಿರೋ ಚಿತ್ರ ‘ಅಂಬಿ ನಿನಗೆ ವಯಸ್ಸಾಯ್ತೋ’. ಇದೀಗ ಈ ಸಿನಿಮಾದ ಅಡ್ಡದಿಂದ ಹೊಸ ನ್ಯೂಸ್​ ಒಂದು ಹೊರಬಿದ್ದಿದೆ. ಅದೇನು ಅಂತ ಗೊತ್ತಾದ್ರೆ ಸುದೀಪ್​ ಹಾಗೂ ಅಂಬಿ ಅಭಿಮಾನಿಗಳು ಖುಷಿ ಪಡೋದ್​ ಗ್ಯಾರಂಟಿ..ಕನ್ನಡದ ಅಭಿನಯ ಚಕ್ರವರ್ತಿ ಹಾಗೂ ಸ್ಯಾಂಡಲ್​ವುಡ್​ನ ಒನ್​ ಆಂಡ್​ ಓನ್ಲೀ ರೆಬೆಲ್ ಸ್ಟಾರ್​ ಅಂಬರೀಶ್​ ಒಟ್ಟಿಗೆ ಸ್ಕ್ರೀನ್​ ಮಾಡ್ತಿದ್ದಾರೆ ಅನ್ನೋವಾಗ್ಲೇ ಎಲ್ಲರ ಐ ಬಾಲ್​ ಚಿತ್ರದ ಮೇಲಿತ್ತು. ಇನ್ನು ಟೈಟಲ್​ ಕೂಡ ಸ್ಯಾಂಡಲ್​ವುಡ್​ ಮಂದಿಗೆ ಕಿಕ್​ ಕೊಡೋ ಹಾಗಿದೆ. ಅಂಬಿ ನಿನಗೆ ವಯಸ್ಸಾಯ್ತೋ ಅಂತ ಶೀರ್ಷಿಕೆ ಫಿಕ್ಸ್​ ಆದ್ಮೇಲೆ, ಓ ಚಿತ್ರದಲ್ಲಿ ಸಂತಿಂಗ್​ ಸ್ಪೆಷಲ್​ ಇರಬೇಕು ಅಂದುಕೊಳ್ಳೊಕೆ ಸ್ಟಾರ್ಟ್​ ಮಾಡಿದ್ರು ಅಭಿಮಾನಿಗಳು..

ಇತ್ತೀಚೆಗೆ ಪೋಷಕ ಪಾತ್ರಗಳತ್ತ ವಾಲಿದ ರೆಬಲ್​ ಸ್ಟಾರ್​​​, ಹಲವು ವರ್ಷಗಳ ನಂತ್ರ ಈ ಸಿನಿಮಾದಲ್ಲಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ ಅಂಬಿಯ ಈ ಚಿತ್ರಕ್ಕೆ ಟೈಟಲ್​ ಫಿಕ್ಸ್​ ಮಾಡಿದ್ದು ನಟ ಕಿಚ್ಚ ಸುದೀಪ್​​. ಮತ್ತೊಂದು ಇಂಟರೆಸ್ಟಿಂಗ್​ ಅಂದ್ರೆ ಈ ಸಿನಿಮಾದಲ್ಲಿ ಸುದೀಪ್​ ಅಂಬರೀಶ್​ ಯಂಗ್​ ಆಗಿದ್ದಾಗ ಹೇಗಿದ್ರು ಅನ್ನೋ ಪಾತ್ರದಲ್ಲಿ ಕಿಚ್ಚ ಕಾಣಿಸಿಕೊಳ್ತಿದ್ದಾರೆ. ಇದೀಗ ಕಿಚ್ಚನ ಈ ಸಿನಿಮಕಾದ ಕೆಲವಷ್ಟು ಫೋಟೋಸ್​ ರಿವಿಲ್​ ಆಗಿದ್ದು, ಅಭಿಮಾನಿಗಳಿಗೆ ಇದು ಹಾಟ್​ ಕೇಕ್​ ವಿಷ್ಯವಾಗಿರೋದು ಖುಷಿ ಕೊಟ್ಟಿದೆ. ಈ ಫೋಟೋ ನೋಡಿದ್ರೆ ಸುದೀಪ್​ ಕುಸ್ತಿ ಪಟುವಿರಬೇಕು ಅನಿಸುತ್ತೆ. ಆದ್ರೆ ಕಿಚ್ಚನ ರೋಲ್​ ಹೇಗಿರಲಿದೆ ಅನ್ನೋ ದು ಮಾತ್ರ ಸೀಕ್ರೇಟ್​. ಅಂದಹಾಗೇ ಈ ಚಿತ್ರ ಅಂಬಿ ಕೈಗೆ ಸಿಕ್ಕಿದ್ದು ಸೂಪರ್​ ಸ್ಟಾರ್​ ರಜನಿ ಕಾಂತ್​ ಮೂಲಕ. ಅದೊಂದು ದಿನ ಇದ್ದಕ್ಕಿದ್ದಂತೆ ಅಂಬರೀಶ್ ಅವರಿಗೆ ಕರೆ ಮಾಡಿದ ರಜನೀಕಾಂತ್ ಕ್ಯಾಶ್ಯುಯಲ್​ ಟಾಕ್​ ನಂತ್ರ ‘ಪಾ ಪಾಂಡಿ’ ಚಿತ್ರ ತಂಬಾ ಚೆನ್ನಾಗಿದೆ. ನಿಮಗೆ ಅದರ ಕಥೆ ಹೇಳಿ ಮಾಡಿಸಿದಂತಿದೆ. ಒಂದು ಸಲ ನೋಡಿ ಅಂತ ಸಲಹೆ ನೀಡಿದ್ದರಂತೆ. ಚಿತ್ರ ವೀಕ್ಷಿಸಿದ ಅಂಬಿ ಫುಲ್ ಖುಷ್ ಆಗಿ ಸಿನಿಮಾಗೆ ಗ್ರೀನ್​ ಸಿಗ್ನಲ್​ ಕೊಟ್ಟೇ ಬಿಟ್ರು.

ಈ ಸಿನಿಮಾಗೇ ನವ ನಿರ್ದೇಶಕ ಗುರುದತ್​ ಆಕ್ಷನ್​ ಕಟ್​ ಹೇಳ್ತಿದ್ದಾರೆ. ಹೆಸ್ರು ಹೊಸದು ಅನಿಸಬಹುದು, ಆದ್ರೆ ಇವ್ರು 9 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೇ ಆರು ವರ್ಷದಿಂದಲೂ ಕಿಚ್ಚನ ನಾನಾ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡ್ತಿದ್ದು, ಹೊಸ ಸಿನಿಮಾದ ಶೂಟಿಂಗ್​ ಕೂಡ ಭರದಿಂದ ಸಾಗಿದೆ. ನೋಡೋಕೆ ಚಿಕ್ಕ ಹುಡುಗನಂತೆ ಕಂಡ್ರು, ಕೆಲಸದಲ್ಲಿ ಮಾತ್ರ 100% ನೀಡುವ ಕಲೆಗಾರ ಅಂತಾರೆ ಸುದೀಪ್​. ಅದೇನೆ ಇರಲಿ ತಮಿಳಿನಲ್ಲಿ ಬಂದ ‘ಪಾ ಪಾಂಡಿ’ ಚಿತ್ರ ಸೂಪರ್​ ಹಿಟ್​ ಆಗಿತ್ತು. ಈಗ ಕನ್ನಡದಲ್ಲಿ ಯಾವ ರೀತಿ ರೆಸ್ಪಾನ್ಸ್​ ಪಡೆಯಲಿದೆಯೋ ನೋಡಬೇಕು

ರೆನಿಟ ಫಿಲ್ಮ್​ ಬ್ಯೂರೊ ಸುದ್ದಿಟಿವಿ

0

Leave a Reply

Your email address will not be published. Required fields are marked *