ಕಿಚ್ಚ ಸಿನಿಮಾಗೆ ಎಂಟ್ರಿಯಾಗಿ 22 ವರ್ಷ…

ಕಿಚ್ಚ ಸುದೀಪ್​…ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ..ಕೋಟ್ಯಾಂತರ ಮನಸುಗಳ ಗೆದ್ದ ಕೋಟಿಗೊಬ್ಬ.. ಇಂತ ಅದ್ಬುತ ಕಲಾವಿದ ಇಂದು ಚಿತ್ರರಂಗಕ್ಕೆ ಬಂದು ಬರೋಬ್ಬರಿ 22 ವರ್ಷಗಳು ಕಳೆದಿವೆ.. ಕನ್ನಡ ಸಿನಿ ರಸಿಕರ ಅಚ್ಚುಮೆಚ್ಚಿನ ನಟ ಕಿಚ್ಚ ಸುದೀಪ್​..ಇಂತ ಅದ್ಬುತ ಪ್ರತಿಭೆ ಚಿತ್ರರಂಗಕ್ಕೆ ಬಂದು 22 ವರ್ಷಗಳನ್ನು ಕಳೆದ ಬಗ್ಗೆ ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಬರೆದುಕೊಂಡಿದ್ದಾರೆ.. ಜನವರಿ 22 1996ರಂದು ಬ್ರಹ್ಮ ಚಿತ್ರದಲ್ಲಿ ಸಣ್ಣ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದೆ, ರೆಬಲ್​ ಸ್ಟಾರ್​ ಅಂಬರೀಶ್​ ಮಾಮನ ಸಹೋದರನ ಪಾತ್ರದಲ್ಲಿ ನಟಿಸಿದ್ದೆ. ಅಪ್ಪ ಮತ್ತು ಸ್ನೇಹಿತರ ಜೊತೆ ಸಿನಿಮಾ ಸೆಟ್​​ಗೆ ಹೋಗುತ್ತಿದ್ದೆ..ಆ ಮೊದಲ ದಿನದ ಅನುಭವವನ್ನು ಇಂದಿಗೂ ನಾನ ಮರೆತಿಲ್ಲ.. ಅದಾದ ನಂತರ ಅನೇಕ ಪಾತ್ರಗಳನ್ನು ಮಾಡುತ್ತ ಸಿನಿ ರಂಗದಲ್ಲಿ 22 ವರ್ಷಗಳನ್ನ ಕಳೆದದ್ದೇ ಗೊತ್ತಾಗಲಿಲ್ಲ..ಇಷ್ಟು ವರ್ಷಗಳ ಸುದೀರ್ಘ ಜರ್ನಿಯಲ್ಲಿ ನನ್ನ ಬೆಳಸಿದ ನಿರ್ಮಾಪಕರು, ನಿರ್ದೇಶಕರು, ಸಹ ನಟರು, ಸಹ ನಟಿಯರು, ತಂತ್ರಜ್ಞರು, ವಿತರಕರು, ಪ್ರದರ್ಶಕರು, ಮಾಧ್ಯಮದವರು, ಇದರ ಜೊತೆಗೆ ನನ್ನ ಆಫೀಸಿನ ಸ್ಟಾಫ್​ ಪ್ರತಿಯೊಬ್ಬರಿಗೂ ಧನ್ಯವಾದಗಳು.ನನ್ನ ಕುಟುಂಬದವರು ನನಗಾಗಿ ಅನೇಕ ತ್ಯಾಗಗಳನ್ನು ಮಾಡಿ ನನ್ನನ್ನು ಇಲ್ಲಿಯವರೆಗೂ ಕರೆತಂದಿದ್ದಾರೆ.ನನ್ನ ಅಭಿಮಾನಿಗಳಿಗೂ ಅಭಿನಂದನೆ ಸಲ್ಲಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಸದಾ ಹೀಗೇ ಇರಲಿ ಎಂದು ತಮ್ಮ ಟ್ವಿಟರ್​ ಅಕೌಂಟಿನಲ್ಲಿ ಬರೆದಿದ್ದಾರೆ..ಚಿಕ್ಕ ಪಾತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್​ ಇಂದು ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿಯಾಗಿದ್ದಾರೆ.. ಕನ್ನಡದ ನಟನೊಬ್ಬ ಬಾಲಿವುಡ್​, ಟಾಲಿವುಡ್​, ಕಾಲಿವುಡ್​ನಲ್ಲಿ ಮಿಂಚಿದ್ದು ಇತಿಹಾಸವಾಗಿದೆ.. ಇಡೀ ಸೌತ್​ ಸಿನಿ ರಂಗದಲ್ಲೇ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ..ಟ್ವಿಟರ್​ನಲ್ಲಿ ಒಂದು ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ.

1+

Leave a Reply

Your email address will not be published. Required fields are marked *